ಅಕ್ಕಮಹಾದೇವಿ 12ನೇ ಶತಮಾನದ ವಚನಕಾರರಲ್ಲಿ ಪ್ರಮುಖಕರು.ಇವರು ವಚನಗಳ ಮೂಲಕ ಸಮಾಜದಲ್ಲಿರುವ ಅಸಮಾನತೆ ಸಮಾಜಕ್ಕೆ ತಿಳಿಸುತ್ತ ಜನರನ್ನು ಜಾಗೃತಿಗೊಳಿಸಿದ್ದಾರೆ
ಕೊಪ್ಪಳ: ನಮ್ಮ ಸಮಾಜ ಅಜಾತಿ ಮತ್ತು ವರ್ಗ ರಹಿತ ನಿರ್ಮಾಣದ ಆಶಯ ಶಿವಶರಣೆ ಅಕ್ಕಮಹಾದೇವಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ 12ನೇ ಶತಮಾನದ ವಚನಕಾರರಲ್ಲಿ ಪ್ರಮುಖಕರು.ಇವರು ವಚನಗಳ ಮೂಲಕ ಸಮಾಜದಲ್ಲಿರುವ ಅಸಮಾನತೆ ಸಮಾಜಕ್ಕೆ ತಿಳಿಸುತ್ತ ಜನರನ್ನು ಜಾಗೃತಿಗೊಳಿಸಿದ್ದಾರೆ ಎಂದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಉಡುತಡಿ ಗ್ರಾಮದಲ್ಲಿ ಜನಿಸಿದರು. ಇವರ ಕಾಲ ಸುಮಾರು ಕ್ರಿಶ 1130 ರಿಂದ 1160ರ ಅವಧಿ ಆಗಿದೆ.ಇವರು ಲೌಕಿಕತೆ ಬಿಟ್ಟು ಅಲೌಕಿಕತೆ ಕಡೆಗೆ ಗಮನಕೊಟ್ಟರು. ನಾವೆಲ್ಲರೂ ಅಕ್ಕಮಹಾದೇವಿ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹುಲಿಗೆಮ್ಮ ಮಾತನಾಡಿ, ಅಕ್ಕಮಹಾದೇವಿ ಸುಮಾರು 430 ವಚನ ರಚಿಸಿದ್ದಾರೆ.ಇವರ ವಚನ ಸರಳ,ಸುಂದರ ಮತ್ತು ಅಧ್ಯಾತ್ಮಕತೆಯಿಂದ ಕೂಡಿವೆ.ಇವರು ಶ್ರೀಶೈಲ ಚನ್ನಮಲ್ಲಿಕಾರ್ಜುನ ತನ್ನ ಪತಿ ಎಂದು ಸ್ವೀಕರಿಸಿದ್ದರು. ಇವರು ಕನ್ನಡ ಮೊದಲ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿ ನಮಗೆಲ್ಲರಿಗೂ ಮಾದರಿ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಮಾತನಾಡಿ, ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಜಾತಿಯತೆ, ವರ್ಗ,ಲಿಂಗ ತಾರತಮ್ಯ ಮತ್ತು ಧರ್ಮ ಬೇಧಭಾವಗಳ ಕುರಿತು ವಚನ ರಚಿಸಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಧ್ಯಾಪಕ ನಾಗರತ್ನ ತಮ್ಮಿನಾಳ, ವಿಠೋಬ, ಡಾ.ಮಲ್ಲಿಕಾರ್ಜುನ, ಡಾ.ಪ್ರದೀಪ್ ಕುಮಾರ್, ಶುಭ,ಸುಮಿತ್ರಾ, ಸುಮಯ್ಯ, ಅಲ್ಲಭಕ್ಷ, ಹನುಮಪ್ಪ, ಶಿವಪ್ರಸಾದ್ ಹಾದಿಮನಿ, ಅನಿಲ ಪವಾರ, ರುದ್ರಾಕ್ಷಿ, ಡಾ.ಸುಧಾಕರ್, ಡಾ. ನಾಗಭೂಷಣಮ್ಮ, ಡಾ.ಸಂಗಪ್ಪ ಬ್ಯಾಳಿ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಘಟಕದ ಸಂಚಾಲಕಿ ಡಾ. ಹುಲಿಗೆಮ್ಮ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.