ಅಕ್ಷರದ ಅಮ್ಮ ಸಾವಿತ್ರಿಬಾಯಿ ಫುಲೆ ಪಾತ್ರ ದೊಡ್ಡದು: ಸಹಕಾರಿ ಮುಖಂಡ ಎಂ. ಜಿ.

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ವಿಜಯಪುರ: ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಚಿಂತನ ಗೋಷ್ಠಿಯನ್ನು ಸಹಕಾರಿ ಮುಖಂಡ ಎಂ. ಜಿ. ಪಾಟೀಲ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜ ಸುಧಾರಣೆಯಲ್ಲಿ ಈ ದೇಶದ ಶಿಕ್ಷಕಿ ಅಕ್ಷರದ ಅಮ್ಮ ಸಾವಿತ್ರಿಬಾಯಿ ಫುಲೆಯವರ ಪಾತ್ರ ದೊಡ್ಡದು. ಸರ್ಕಾರವೇ ಶಾಲೆಗಳನ್ನು ತೆರೆಯದ ಕಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ಖಾಸಗಿ ಶಾಲೆ ತೆರೆಯುವುದರ ಮೂಲಕ ದಲಿತ ಮತ್ತು ಹಿಂದುಳಿದ ಮಕ್ಕಳ ಬಾಳಿಗೆ ಬೆಳಕಾದರು ಎಂದು ಸಹಕಾರಿ ಮುಖಂಡ ಎಂ. ಜಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾನುವಾರ ಜಿಲ್ಲಾ, ತಾಲೂಕು ಹಾಗು ನಗರ ಘಟಕಗಳ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಚಿಂತನ ಗೊಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕಿ ಹಾಗೂ ಸಾಹಿತಿಯಾಗಿ ಸಾವಿತ್ರಿಬಾಯಿ ಸಾಧನೆ ಕುರಿತು ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ಆಧುನಿಕ ಶಿಕ್ಷಣ ಹಾಗೂ ಸ್ತ್ರೀವಾದಿಪರ ಚಿಂತಕರಾಗಿ ಸಾವಿತ್ರಿಬಾಯಿ ಸುಮಾರು 18ಕ್ಕೂ ಹೆಚ್ಚು ಶಾಲೆಗಳನ್ನು ತೆರೆದು ಹೆಣ್ಣು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದರು ಎಂದರು. ಸಾಮಾಜಿಕ ಸುಧಾರಕಿಯಾಗಿ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಕುರಿತು ಕವಯತ್ರಿ ಭಾಗ್ಯಜ್ಯೋತಿ ಭಗವಂತಗೌಡರ ಮಾತನಾಡಿ, ಸಾಮಾಜಿಕ ಅನಿಷ್ಟಗಳಾದ ಬಾಲ್ಯ ವಿವಾಹ, ಬಾಲ್ಯ ಹತ್ಯೆ. ಸತಿಸಹಗಮನ, ಮಹಿಳಾ ಕೇಶ ಮುಂಡನ ವಿರೋಧಿಸಿದರು. ವಿಧವಾ ಪುನರ್ ವಿವಾಹ, ಅಂತರಜಾತಿ ವಿವಾಹ ನೆರವೇರಿಸಿದರು. ಅನಾಥ ಮಕ್ಕಳ ಆಶ್ರಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವರಹಿಪ್ಪರಗಿಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಎನ್. ಬಸವರೆಡ್ಡಿ ಮಾತನಾಡಿ, ಮಹಿಳೆಯರನ್ನು ಸಬಲೆಯರನ್ನಾಗಿ ಮಾಡುವುದು ಸಾವಿತ್ರಿಬಾಯಿ ಅವರ ಉದ್ದೇಶವಾಗಿತ್ತು. ಅವರ ಬದುಕು ಮತ್ತು ಸಾಧನೆ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದರು.

ವೇದಿಕೆಯಲ್ಲಿ ವೀಣಾ ಮೇತ್ರಿ, ಟಿಪ್ಪು ಇನಾಮದಾರ, ಜಯಶ್ರೀ ತೆಲಗ, ಹೇಮಾ ಚೌದ್ರಿ, ಗೀತಾ ಚೌದ್ರಿ ಉಪಸ್ಥಿತರಿದ್ದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಜಿಲ್ಲಾ ಅಧ್ಯಕ್ಷೆ ಅಕ್ಕಮ್ಮ ನಾಯಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಭಾರತಿ ಕುಂದನಗಾರ ಪ್ರಾರ್ಥಿಸಿದರು. ಮಹಮ್ಮದಗೌಸ್ ಹವಾಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆನಂದ ಕುಲಕರ್ಣಿ ನಿರೂಪಿಸಿದರು. ಸುಭಾಸ ಕನ್ನೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಪದಾಧಿಕಾರಿಗಳಾದ ಸಿದ್ರಾಮಯ್ಯ ಲಕ್ಕುಂಡಿಮಠ, ರಾಜೇಸಾಬ ಶಿವನಗುತ್ತಿ, ವಿಜಯಲಕ್ಷ್ಮಿ ಹಳಕಟ್ಟಿ, ಆಶಾ ಬಸನಗೌಡ ಬಿರಾದಾರ, ವಿಜಯಕುಮಾರ ಘಾಟಗೆ, ರೂಪಾ ರಜಪೂತ, ಶಾಂತಾ ವಿಭೂತಿ, ಭವಾನಿ ಅಂಗಡಿ, ಸಿ.ಎಮ್. ಬಂಡಗಾರ, ಎ.ಎಮ್. ಹಳ್ಳೂರ, ಸಾವಿತ್ರಿ ಮಾನೋಜಿ, ಅಪ್ಪಾಸಾಹೇಬ ಯರನಾಳ, ಅಂಬಾದಾಸ ಜೋಶಿ, ಶಿಲ್ಪಾ ಬಸ್ಮೆ, ಪ್ರದೀಪ ನಾಯಕವಾಡಿ, ರಾಜು ಅಂಗಡಿ, ಡಾ.ಸುರೇಶ ಕಾಗಲಕರ ಮುಂತಾದವರು ಭಾಗವಹಿಸಿದ್ದರು.

Share this article