ಕನ್ನಡಪ್ರಭ ವಾರ್ತೆ ಮೈಸೂರು
ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಅಕ್ಷರನಾದ ಪಬ್ಲಿಕೇಷನ್ಸ್ ಮತ್ತು ಜಿಲ್ಲಾ ಕಸಾಪ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕವಿ ಕಾವ್ಯ ಕಥಾ ಸಂಗಮ- ನಾಲ್ಕನೇ ಆವೃತ್ತಿಯನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ನಾನಾ ರೀತಿಯಲ್ಲಿ ಕಲುಷಿತವಾಗಿದೆ ಎಂದು ವಿಷಾದಿಸಿದರು.
ಅಕ್ಷರ ಎಂದರೇ ಸಾಹಿತ್ಯ. ನಾಶವಿಲ್ಲದ್ದು ಎಂದರ್ಥ. ನಾದ ಎಂದರೇ ಸಂಗೀತ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸೇರುತ್ತದೆ. ಸಂಸ್ಕೃತಿ ಬಹಳ ವ್ಯಾಪಕವಾದುದು. ಎಲ್ಲವನ್ನು ಒಳಗೊಳ್ಳುವಂಥದ್ದು. ಸಂಸ್ಕೃತಿ ಎಂದರೇ ಮಾಧುರ್ಯ, ಬೆಳಗು. ಮಾಧುರ್ಯದ ಬೆಳಗನ್ನು ಅನುಭವಿಸಬೇಕು ಎಂದರು.ಅಕ್ಷರನಾದ ಸಂಸ್ಥೆಯು 175 ಕೃತಿಗಳನ್ನು ಪ್ರಕಟಿಸಿರುವುದು ಅಸಾಧಾರಣ ಸಾಧನೆ. ಈ ಕಾರ್ಯವನ್ನು ಸಾರಸ್ವತ ಸೇನಾ ಕಾರ್ಯ ಎನ್ನಬಹುದು. ಸೇನೆ ಎಂದರೆ ಶತ್ರು ನಿಗ್ರಹಕ. ಪುಸ್ತಕ ಸೈನ್ಯ ಇದ್ದರೆ ಕೆಡಕುಗಳ ನಿವಾರಣೆ ಮಾಡಬಹುದು. ಪುಸ್ತಕಗಳು ನವ ಸಮಾಜ ಕಟ್ಟುವ ಇಟ್ಟಿಗೆಗಳಿದ್ದಂತೆ. ಬುಕ್ಸ್ ಆರ್ ಬ್ರಿಕ್ಸ್ ಎಂಬುದು ನನ್ನದೇ ಮಾತು. ಸಮಾಜ ನಿರ್ಮಾಣಕ್ಕೆ ಜ್ಞಾನನಿಧಿ. ಪ್ರತಿನಿಧಿ, ಸಂವಿಧಾನ ನಿಧಿ ಎಂದೂ ಹೇಳಬಹುದು.
ಶ್ರುತಿ ಮಧುಸೂದನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಧುಸೂದನ್ ಆಚಾರ್ಯ ಆಶಯ ಭಾಷಣ ಮಾಡಿದರು. ಸಿಂಚನಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಸೌಮ್ಯಾ ಕೋಟಿ ಸ್ವಾಗತಿಸಿದರು. ತಾರಾ ಸಂತೋಷ್, ನೀವಿಯಾ ಗೋಮ್ಸ್, ತೇಜಸ್ವಿನಿ ಕೆ. ಸುನಿಲ್, ಅಕ್ಷಯ್ ಶಾಸ್ತ್ರಿ, ಎಸ್. ಜಗದೀಶ್ ಇದ್ದರು.