ಯಲಹಂಕ ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣದ ಸಂಬಂಧ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕೋಗಿಲು ಲೇಔಟ್‌ನ ಸರ್ಕಾರಿ ಜಾಗಕ್ಕಾಗಿ ಸ್ಥಳೀಯರಿಂದ ಹಣ ವಸೂಲಿ ಮಾಡಿರುವ ಆರೋಪದ ಸಂಬಂಧ ನಾಲ್ವರ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು : ಯಲಹಂಕ ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣದ ಸಂಬಂಧ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕೋಗಿಲು ಲೇಔಟ್‌ನ ಸರ್ಕಾರಿ ಜಾಗಕ್ಕಾಗಿ ಸ್ಥಳೀಯರಿಂದ ಹಣ ವಸೂಲಿ ಮಾಡಿರುವ ಆರೋಪದ ಸಂಬಂಧ ನಾಲ್ವರ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸ್ಥಳೀಯರಿಂದ ಹಣ ಪಡೆದು ಅನಧಿಕೃತ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜನಪ್ಪ ಮತ್ತು ರಾಬೀನ್ ಎಂಬುವರು ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ವಿಜಯ್, ವಾಸಿಂ ಉಲ್ಲಾ ಬೇಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಾಹಣಾ ಕಂಪನಿ(ಬಿಎಸ್‌ಡಬ್ಲ್ಯೂಎಂಎಲ್) ಎಂಜಿನಿಯರ್ ಸಂತೋಷ್ ಕುಮಾರ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕೋಗಿಲು ಗ್ರಾಮದ ಸರ್ವೆ ನಂಬರ್ 99ರ ಪ್ರದೇಶದಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆಗೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳ ಆದೇಶದಂತೆ 14 ಎಕರೆ 36 ಗುಂಟೆ ಜಾಮೀನು ಹಸ್ತಾಂತರ ಮಾಡಲಾಗಿದೆ. ಇದರಲ್ಲಿ ಮುಕ್ಕಾಲು ಭಾಗ ಕಾಂಪೌಂಡ್ ನಿರ್ಮಾಣ ಕೂಡ ಪೂರ್ಣಗೊಂಡಿದೆ. ಈ ಸ್ಥಳದಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ 2023 ಸಾಲಿನಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳೆ ನೀರು ಬುರುಡೆ ಸಂಸ್ಕರಣೆ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ/ಸ್ಯಾನಿಟರಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಕಾಮಗಾರಿಗೆ ಟೆಂಡರ್ ಆಹ್ವಾನ ಮಾಡಲಾಗಿತ್ತು. ಈ ಪ್ರದೇಶವನ್ನು ಕಾಮಗಾರಿ ಹಮ್ಮಿಕೊಳ್ಳಲು 2023ನೇ ಸಾಲಿನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಈ ಪ್ರದೇಶ ಕ್ವಾರಿ ಪ್ರದೇಶ ಆಗಿರುವುದರಿಂದ ಜಾಗವನ್ನು ನಿರ್ಮಾಣ ಕಾರ್ಯಕ್ಕಾಗಿ ಸೂಕ್ತಗೊಳಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಹಸ್ತಾಂತರಿಸಲಾಗಿರುವ ಜಾಗದ ಪೈಕಿ ಸುಮಾರು 4 ಎಕರೆ ಪ್ರದೇಶ ಅ
ಸ್ಥಳೀಯರಿಂದ ಹಣ ಪಡೆದು ಅನಧಿಕೃತ ಮನೆ ನಿರ್ಮಿಸಲು ಸಹಕಾರ
ಸ್ಥಳೀಯವಾಗಿ ವಿಚಾರಿಸಿದ್ದಾಗ ಮತ್ತು ಮಾಧ್ಯಮಗಳ ವರದಿ ಪ್ರಕಾರ ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜನಪ್ಪ ಮತ್ತು ರಾಬೀನ್ ಎಂಬ ಈ ನಾಲ್ವರು ಸ್ಥಳೀಯರಿಂದ ಹಣ ಪಡೆದು ಅನಧಿಕೃತ ಮನೆ ನಿರ್ಮಿಸಲು ಸಹಕಾರ ಕೊಟ್ಟಿರುವುದು ತಿಳಿದು ಬಂದಿದೆ. ಇವರ ವಿರುದ್ಧ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.


