ಬೆಳ್ತಂಗಡಿ: ಅಜಿಲ ಸೀಮೆಯ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ ಜ.14 ರಿಂದ 20 ರವರೆಗೆ ದೇವಳದ ಆಡಳಿತ ಮೊಕ್ತೇಸರ ಅಳದಂಗಡಿ ಅರಮನೆಯ ಡಾ, ಪದ್ಮಪ್ರಸಾದ ಅಜಿಲರ ನೇತೃತ್ವದಲ್ಲಿ ನಡೆಯಲಿದೆ.
18 ರಂದು ಬೆಳಿಗ್ಗೆ ಅಲಂಕಾರ ಪೂಜೆ, ಸಂಜೆ ಭಜನೆ, ಶ್ರೀ ದೇವರ ದರ್ಶನ ಬಲಿ, ವಸಂತ ಕಟ್ಟೆ ಪೂಜೆ, ಚಂದ್ರ ಮಂಡಲ ಉತ್ಸವ, ನಿತ್ಯ ಬಲಿ, 19 ರಂದು ಬೆಳಿಗ್ಗೆ ಅಭಿಷೇಕ, ಅಲಂಕಾರ ಪೂಜೆ, ಸಂಜೆ ಭಜನೆ, ಶ್ರೀ ಮೂಜಿಲ್ನಾಯ ದೈವ ಹಾಗೂ ಪರಿವಾರ ದೈವಗಳ ನೇಮ, ಭೂತ ಬಲಿ, ಕವಾಟ ಬಂಧನ, ಜ. 20 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ದಿವ್ಯದರ್ಶನ, ಕಲಶಾಭಿಷೇಕ,ಅಲಂಕಾರ ಪೂಜೆ, ಮಧ್ಯಾಹ್ನ ಚಂದ್ರ ಮಂಡಲ ಉತ್ಸವ, ಮಹಾಪೂಜೆ, ಶ್ರೀ ದೇವರ ಬಲಿ, ಪ್ರಸಾದ ವಿತರಣೆ, ಸಂಜೆ ಭಜನೆ ಶ್ರೀ ದೇವರ ಮಹೋತ್ಸವ, ವಸಂತ ಕಟ್ಟೆ ಪೂಜೆ, ಮಹಾ ರಥೋತ್ಸವ, ಸುಡುಮದ್ದು ಪ್ರದರ್ಶನ, ಶ್ರೀ ಕೊಡಮಣಿತ್ತಾಯ ದೈವದ ನೇಮ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ನೆರವೇರಲಿದೆ.
ಜ. 14 ರಂದು ಬೆಳಿಗ್ಗೆ 10-30ಕ್ಕೆ ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಮುಂಭಾಗ ಘಂಟಾ ಗೋಪುರದ ಸಮರ್ಪಣೆ, ರಾತ್ರಿ 7-30 ರಿಂದ 20 ಭಜನಾ ತಂಡಗಳಿಂದ ಭಜನಾ ಸತ್ಸಂಗ, ಜ. 18 ರಂದು ರಾತ್ರಿ 8 ರಿಂದ ಅಳದಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯವರಿಂದ ಮತ್ತು ರಾತ್ರಿ 10 ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಜ. 20 ರಂದು ರಾತ್ರಿ 7-30 ರಿಂದ ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 8ರಿಂದ ಅಳದಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ, 9ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಂಬಳ ಓಟಗಾರ ಸತೀಶ ಸುಲ್ಕೇರಿ ಮೊಗ್ರು, ಸರಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕಾಶಿಪಟ್ಣ ಹಾಗು ಪೂವಪ್ಪ ಮಡಿವಾಳ ಅರ್ಕಿಜೆದಡ್ಡ ಅವರಿಗೆ ಸನ್ಮಾನ ನಡೆಯಲಿದೆ. ಬಳಿಕ ಸತ್ಯದೇವತಾ ಕಲಾತಂಡ ಅರ್ವ ಇವರಿಂದ ತುಳು ಸಾಮಾಜಿಕ ನಾಟಕ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.