ದೇಶದ ಭವಿಷ್ಯ ಹಳ್ಳಿಮಕ್ಕಳ ಕೈಯಲ್ಲಿದೆ

KannadaprabhaNewsNetwork |  
Published : Jan 28, 2025, 12:48 AM IST
94 | Kannada Prabha

ಸಾರಾಂಶ

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದಲ್ಲಿ ಎಲ್ಲಾ ದೃಷ್ಟಿಯಿಂದಲೂ ಗ್ರಾಮೀಣ ಪರಿಸರದ ಮಣ್ಣಿನ ಸೊಗಡಿನ ನಿಸರ್ಗದಲ್ಲಿ ಬೆಳೆದ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿರುತ್ತದೆ

ಕನ್ನಡಪ್ರಭ ವಾರ್ತೆ ಸರಗೂರುನಮ್ಮದು ಗಾಂಧೀಜಿ ಕಂಡ ಕನಸಿನ ಗ್ರಾಮ ಭಾರತವಾಗಿದ್ದು ಮಹಾತ್ಮ ಗಾಂಧಿಯ ಆಶಯದಂತೆಯೇ ದೇಶದ ಬಹುಪಾಲು ಭವಿಷ್ಯ ಅಕ್ಷರಶಃ ಗ್ರಾಮೀಣ ವಿದ್ಯಾರ್ಥಿಗಳ ಕೈನಲ್ಲಿದ್ದು ಅವರನ್ನು ಹಳ್ಳಿ ಮಕ್ಕಳು ಎಂದು ಕಡೆಗಣಿಸುವಂತಿಲ್ಲ ಎಂದು ಲೇಖಕ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.ಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ವತಿಯಿಂದ ಗಣರಾಜ್ಯೋತ್ಸವದ ಮುನ್ನಾ ದಿನ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ತಾಲೂಕಿನ ವಿವಿಧ ಪ್ರೌಢ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದಲ್ಲಿ ಎಲ್ಲಾ ದೃಷ್ಟಿಯಿಂದಲೂ ಗ್ರಾಮೀಣ ಪರಿಸರದ ಮಣ್ಣಿನ ಸೊಗಡಿನ ನಿಸರ್ಗದಲ್ಲಿ ಬೆಳೆದ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದರು.ನಿವೃತ್ತ ಡಿಡಿಪಿಐ ಮಂಜುಳಾ ಅವರು, ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನಗಳಿಸಿದ ಸರಗೂರು ತಾಲೂಕಿನ ವಿದ್ಯಾರ್ಥಿಗಳಾದ ಎಂ.ಸಿ. ತಳಲು ಶಾಲೆಯ ಜಯಶ್ರೀ, ಸರಗೂರು ಶಾಲೆಯ ಆದರ್ಶ, ನಬೀಹಾ ಫಿರ್ದೋಸ್, ಕೆ. ಬೆಳ್ತೂರು ಶಾಲೆಯ ಸಿ.ಆರ್. ಸಂಜನಾ, ಮುಳ್ಳೂರು ಶಾಲೆಯ ಸೌಂದರ್ಯ, ಸಾಗರೆ ಶಾಲೆಯ ಮಂಜುಳಾ, ದಡದಹಳ್ಳಿ ಶಾಲೆಯ ಡಿ.ಸಿ. ಮಾದೇಶ, ಬಡಗಲಪುರ ಶಾಲೆಯ ಗೌತಮ್, ಕಟ್ಟೆ ಹುಣಸೂರು ಶಾಲೆಯ ಹರ್ಷಿತಾ, ಇಟ್ನ ಶಾಲೆಯ ರವಿಕುಮಾರ, ಬಿ. ಮಟಕೆರೆಯ ಕೆ.ಪಿ.ಎಸ್. ಶಾಲೆಯ ವಿ. ಲಯನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಶಾಲೆಯ ಮುಖ್ಯ ಶಿಕ್ಷಕ ಬಂಡಳ್ಳಿ ಎ. ರಾಜು ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಎಂ.ಸಿ. ತಳಲು ಗ್ರಾಪಂ ಸದಸ್ಯ ಎಂ.ಎಲ್. ಪ್ರಕಾಶ್ ಚಂದ್ರ, ಕೆಂಡನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನಿಜಗುಣ, ಮುಖಂಡರಾದ ಎಂ.ಪಿ. ಭವಾನೀಶ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.ಶಿಕ್ಷಕರಾದ ಮದನ್ ಮೌರ್ಯ, ಕೃಷ್ಣಮೂರ್ತಿ, ಸುರೇಶ್, ಶ್ರುತಿ, ದಿವ್ಯಾ, ಸ್ನೇಹ ಮೊದಲಾದವರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ