ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಲ್ನಡಿಗೆ

KannadaprabhaNewsNetwork |  
Published : Jan 28, 2025, 12:48 AM IST
27ಕೆಆರ್ ಎಂಎನ್ 10.ಜೆಪಿಜಿಚನ್ನಪಟ್ಟಣದಿಂದ ರಾಮನಗರಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ಬಿಸಿಯೂಟ ತಯಾರಕರು ಧರಣಿ ನಡೆಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಕನಿಷ್ಠ ವೇತನ, ನಿವೃತ್ತಿ ವೇತನ ಹಾಗೂ ಅಪಘಾತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಸೋಮವಾರ ಚನ್ನಪಟ್ಟಣದಿಂದ ರಾಮನಗರದವರೆಗೆ ಪಾದಯಾತ್ರೆ ನಡೆಸಿದರು.

ರಾಮನಗರ: ಕನಿಷ್ಠ ವೇತನ, ನಿವೃತ್ತಿ ವೇತನ ಹಾಗೂ ಅಪಘಾತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಸೋಮವಾರ ಚನ್ನಪಟ್ಟಣದಿಂದ ರಾಮನಗರದವರೆಗೆ ಪಾದಯಾತ್ರೆ ನಡೆಸಿದರು.

ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ಬಿಸಿಯೂಟ ತಯಾರಕರು ಚನ್ನಪಟ್ಟಣದ ಗಾಂಧಿಭವನದಿಂದ ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದವರೆಗೆ ಹಳೆ ಮೈಸೂರು - ಬೆಂಗಳೂರು ಹೆದ್ದಾರಿ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿ ಧರಣಿ ಕುಳಿತರು.

ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ 1,18,586 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆಯ ಆರಂಭದಲ್ಲಿ ಮುಖ್ಯ ಅಡುಗೆಯವರಿಗೆ 650 ರು., ಅಡುಗೆ ಸಹಾಯಕರಿಗೆ 400 ರು. ಇದ್ದು, 3 ಮತ್ತು 4ನೇ ಅಡುಗೆ ಸಹಾಯಕರಿಗೆ 300 ರು. ನೀಡಲಾಗುತ್ತಿತ್ತು. ಈಗ ಮುಖ್ಯ ಅಡುಗೆಯವರಿಗೆ 3700 ರು. ಮತ್ತು ಅಡುಗೆ ಸಹಾಯಕರಿಗೆ 3600 ರು. ಮಾತ್ರ ನೀಡಲಾಗುತ್ತಿದೆ. ನಿವೃತ್ತಿ ವೇತನ, ಇಎಸ್ ಐ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ 2002-03 ರಿಂದ ಯೋಜನೆ ಆರಂಭಿಸಿದರೂ ಕೇವಲ ಮಾಸಿಕ ಕೇವಲ 600 ರು. ಮಾತ್ರ ಕೊಡುತ್ತಿದೆ. ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 19 ವರ್ಷಗಳಿಂದ ನಿರಂತರವಾಗಿ ಚಳವಳಿ ನಡೆಸುತ್ತಾ ಬಂದಿದ್ದೇವೆ. ಆದರೂ ದುಡಿಯುವ ವರ್ಗದ ಮಹಿಳೆಯರಿಗೆ 1 ರುಪಾಯಿ ಹೆಚ್ಚಳ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಶಾಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದ್ದು, ಕಾರಣ ಇಲ್ಲದೆ ಕೆಲಸದಿಂದ ಬಿಡುಗಡೆಗೊಳಿಸಿ ಬೇರೊಬ್ಬರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ 15 ರಿಂದ 20 ವರ್ಷಕ್ಕೂ ಹೆಚ್ಚು ಕಾಲ ಶಾಲೆಗಳಲ್ಲಿ ಅಡುಗೆ ಮಾಡಿದ ಬಿಸಿಯೂಟ ತಯಾರಕರಿಗೆ ಅನ್ಯಾಯವಾಗುತ್ತಿದ್ದು, ಶಾಲೆಗಳಲ್ಲಿ ಅಡುಗೆಯವರು ಕರ್ತವ್ಯದಲ್ಲಿ ತಪ್ಪು ಎಸಗಿದರೆ ನಿಯಮಾನುಸಾರ ಕ್ರಮ ಜರುಗಿಸಬೇಕು. ಏಕ ಪಕ್ಷಿಯವಾಗಿ ತೀರ್ಮಾನಿಸಿ ಅಡುಗೆಯವರನ್ನು ಕೆಲಸದಿಂದ ತೆಗೆಯಬಾರದೆಂದು ಒತ್ತಾಯಿಸಿದರು.

ಪಾದಯಾತ್ರೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷೆ ಎಚ್.ನಿರ್ಮಲಾ, ಕಾರ್ಯದರ್ಶಿ ಅನಸೂಯಮ್ಮ, ಎಸ್ ಡಿಎಂಸಿ ರಾಜ್ಯ ಉಪಾಧ್ಯಕ್ಷ ಶಂಭುಗೌಡ, ಸಾಕಮ್ಮ, ಮಂಗಳ, ಶಾಂತಮ್ಮ, ಶಶಿಕಲಾ, ಸುನೀತಾ, ಭಾರತಿ, ಲಲಿತಾ, ಪವಿತ್ರ ಮತ್ತಿತರರು ಭಾಗವಹಿಸಿದ್ದರು.

27ಕೆಆರ್ ಎಂಎನ್ 10.ಜೆಪಿಜಿ

ಚನ್ನಪಟ್ಟಣದಿಂದ ರಾಮನಗರಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ಬಿಸಿಯೂಟ ತಯಾರಕರು ಧರಣಿ ನಡೆಸುತ್ತಿರುವುದು.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು