ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನ ಮೌಲ್ಯಗಳನ್ನು ನಾವು ತಿಳಿಯಬೇಕು, ಸಂವಿಧಾನದ ಆಸೆಯಂತೆ ಜೀವನ ನಡೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಪರಿಸರದ ಕಾಳಜಿ ವಹಿಸಿ ಪರಿಸರ ಕಾಪಾಡಬೇಕು. ಕುಟುಂಬದ ವ್ಯವಸ್ಥೆಯ ಜತೆಗೆ ದೇಶದ ಸಾರ್ವಭೌಮತ್ವ ಎತ್ತಿ ಹಿಡಿಯಬೇಕು. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ತೊಡುಕು ಮೀರಿ ಬೆಳೆಯಬೇಕು. ನಾವು ಕಂಡು ಹಿಡಿದ ತಂತ್ರಜ್ಞಾನಗಳನ್ನು ನಾವು ಎಷ್ಟು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇವೆ ಎಂದು ಯೋಚಿಸಿ ಮುಂದೆ ಸಾಗಬೇಕು ಎಂದು ಹೇಳಿದರು.ವಿವಿಧ ಸ್ವರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಜಮಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಯಕ್ಕುಂಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಬಿಇಒ ಜಿ.ಬಿ. ಬಳಗಾರ, ಪೌರಾಯುಕ್ತ ರಮೇಶ ಜಾಧವ, ಸಿಪಿಐ ಸುರೇಶ ಬಾಬು, ಕೃಷಿ ಅಧಿಕಾರಿ ಎಂ.ಎಂ. ನಧಾಫ್, ಎಂ.ಎಚ್.ಗಜಾಕೋಶ, ಬಿ.ಆರ್. ಕೊಪ್ಪ, ಅಶೋಕ ಪೂಜಾರಿ, ಮಹಾಂತೇಶ ಕಡಾಡಿ, ನಗರಸಭೆ ಸದಸ್ಯರಾದ ಯೂಸುಫ್ ಅಂಕಲಗಿ, ಬಾಬು ಮುಳಗುಂದ, ಕರವೇ ಮುಖಂಡರಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಮುಖಂಡರಾದ ಬಸವರಾಜ ದೇಶನೂರ, ಅಬ್ದುಲವಹಾಬ್ ಜಮಾದಾರ, ಸೋಮಶೇಖರ ಮಗದುಮ್ಮ ಇತರರು ಉಪಸ್ಥಿತರಿದ್ದರು.