ಆಳಂದ: 18 ಡೆಂಘೀ, 8 ಚಿಕೂನ್‌ ಗುನ್ಯ ಪ್ರಕರಣಗಳು ಪತ್ತೆ

KannadaprabhaNewsNetwork |  
Published : Jul 07, 2024, 01:17 AM IST
ಚಿತ್ರ ಶೀರ್ಷಿಕೆ - ಆಳಂದ ಸ್ಮೋಕ್‌ಆಳಂದ: ಪಟ್ಟಣದ ವಾರ್ಡ್ 4ರಲ್ಲಿ ಪುರಸಭೆಯಿಂದ ಶನಿವಾರ ಫಾಗಿಂಗ ಸಿಂಪರಣೆ ಕೈಗೊಳ್ಳಲಾಯಿತು.  | Kannada Prabha

ಸಾರಾಂಶ

ಆಳಂದ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಿಂದಾದ ವರದಿಯಂತೆ 18 ಡೆಂಘೀ ಪ್ರಕರಣಗಳು ಪತ್ತೆಯಾದರೆ, 8 ಮಂದಿಗೆ ಚಿಕೂನ್‌ ಗುನ್ಯ ಪ್ರಕರಣ ಪತ್ತೆಯಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಕನ್ನಡಪ್ರಭ ವಾರ್ತೆ ಆಳಂದ

ಕಳೆದ ಜನವರಿ ತಿಂಗಳಿಂದ ಜೂನ್ ಅಂತ್ಯದವರೆಗೆ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಿಂದಾದ ವರದಿಯಂತೆ 18 ಡೆಂಘೀ ಪ್ರಕರಣಗಳು ಪತ್ತೆಯಾದರೆ, 8 ಮಂದಿಗೆ ಚಿಕೂನ್‌ ಗುನ್ಯ ಪ್ರಕರಣ ಪತ್ತೆಯಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಜೂನ್ ತಿಂಗಳಲ್ಲಿ ಕೆರೆ ಅಂಬಲಗಾ ಮತ್ತು ಆಳಂದ ಪಟ್ಟಣ ಸೇರಿ 2 ಡೆಂಘೀ ಪ್ರಕರಗಳು ಪತ್ತೆಯಾದರೆ, 8 ಚಿಕೂನ್‌ಗೂನ್ಯ ಪತ್ತೆಯಾಗಿವೆ. ಜುಲೈ ಮೊದಲು ವಾರದಲ್ಲಿ ಶಂಕಿತರ ರಕ್ತದ ಮಾದರಿಯನ್ನು ಕಳುಹಿಸಕೊಡಲಾಗಿದೆ ವರದಿಗಾಗಿ ಕಾಯಲಾಗಿದೆ.

ಕೇವಲ ಜೂನ್ ತಿಂಗಳಲ್ಲೇ ಡೆಂಘೀ 38 ಮಂದಿ ತಪಾಸಣೆ ಪ್ರಕರಣದಲ್ಲಿ 2 ಪ್ರಕರಣಗಳನ್ನು ಪತ್ತೆಯಾಗಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಇಲಾಖೆ ದೃಢಪಡಿಸಿದೆ.

ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಘೀ ಪ್ರಕರಣಗಳು ದಾಖಲಾದರೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ನುರಿತ ವೈದ್ಯರು ಇದ್ದಾರೆ. ಔಷದೊಚಾರ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ. ಶಂಕಿತ ರೋಗಿಗಳು ತಪಾಸಣೆ ಮತ್ತು ಚಿಕಿತ್ಸೆಯ ಲಾಭಪಡೆದುಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಪಿಜಿಸನ್ ಆಗಿರುವ ಡಾ. ನಿಲೇಶ ಪಾಟೀಲ ತಿಳಿಸಿದ್ದಾರೆ.

ವಾಂತಿ ಭೇದಿ ಪ್ರಕರಣಗಳು ದಾಖಲಾಗುತ್ತಿದ್ದು, ಚಿಕಿತ್ಸೆ ನೀಡಿ ಗುಣಪಡಿಸಿ ಕಳುಹಿಸಲಾಗುತ್ತಿದೆ. ವಾತಾವರಣದಲ್ಲಿ ಬದಲಾವಣೆ ಕಲುಷಿತ ನೀರು ಸೇವನೆಯಿಂದಾಗಿ ಈ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಸಾರ್ವಜನಿಕರು ಕಾಯಿಸಿ ಆರಿಸಿ ನೀರು ಕುಡಿಯಬೇಕು ಮತ್ತು ನೆರೆ ಹೊರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಟಾಯರ್, ಟ್ಯೂಬನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಉತ್ಪತಿಯಾಗುತ್ತವೆ. ಇದರಿಂದ ಡೆಂಘೀ ತಡೆಗಟ್ಟಲು ಸಾಧ್ಯವಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಸಲಹೆ ನೀಡಿದರು.

ಇಲಾಖೆ ಹೈ ಅಲರ್ಟ್:

ಡೆಂಘೀ ಸೇರಿದಂತೆ ಸಾಂಕ್ರಮಿಕ ರೋಗ ತಡೆಗಟ್ಟಲು ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಮಾದರಿ ನೀರಿನ ತಾಣದಿಂದ ಪಡೆದು ಪರೀಕ್ಷೆ ಕೈಗೊಂಡು ಕುಡಿಯಲು ನೀರು ಯೋಗ್ಯವಿಲ್ಲದಿದಲ್ಲಿ, ಆ ನೀರಿನ ಮೂಲವನ್ನು ಕ್ಲೋರಿನೇಷನ್ ಕೈಗೊಳ್ಳಲು ಸಂಬಂಧಿತ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತವಾಗಿ ವರದಿ ಸಲ್ಲಿಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶುಶಿಲಕುಮಾರ ಅಂಬುರೆ ತಿಳಿಸಿದ್ದಾರೆ.

ಮಳೆಯಾಲವಾಗಿದ್ದರಿಂದ ಸೊಳ್ಳೆಗಳ ತಾಣವನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಆರೋಗ್ಯ ಸಿಬ್ಬಂದಿಗಳನ್ನ ಸೂಚನೆ ನೀಡಿ ಲಾರ್ವಾ ತಾಣಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಡೆಂಘೀ ಚಿಕೂನ್‌ಗುನ್ಯ ಮಲೆರಿಯಾ ಮತ್ತು ಸೊಳ್ಳೆಗಳಿಂದ ಹರಡುವ ಇತರೆ ರೋಗವನ್ನು ತಡೆಗಟ್ಟಲು ಫಾಗಿಂಗ್ ಮಾಡಿಸಲಾಗುತ್ತಿದೆ. ಡೆಂಘೀ ಪತ್ತೆಯಾದ ಸ್ಥಳಗಳಲ್ಲಿ ರಕ್ತದ ಮಾದರಿಯನ್ನು ಪರೀಕ್ಷಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವ ಕಾರ್ಯ ಮುಂದುವರೆದಿದೆ. ತಾಲೂಕಿನಲ್ಲಿ ರೋಗವು ಹತೋಟಿಯಲಿದೆ. ಆಶಾ ಕಾರ್ಯಕರ್ತೆಯರ ಮೂಲಕ ಹಾಗೂ ಕ್ಷೇತ್ರ ಆರೋಗ್ಯ ಸಿಬ್ಬಂದಿ ಮೂಲಕ ಸೊಳ್ಳೆಗಳ ಮೂಲಕ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ಅಂಬುರೆ ಅವರು ಹೇಳಿದರು.

ಪಟ್ಟಣದಲ್ಲಿ ಸೊಳ್ಳೆ ಕಾಟ: ಆಳಂದ ಪಟ್ಟಣದಲ್ಲಿ ನಿತ್ಯ ಸಾಧಾರಣದಿಂದ ಕೂಡಿದ ಮಳೆ ಸುರಿಯತೊಡಗಿದ್ದರಿಂದ ಅಲ್ಲಲ್ಲಿ ತೆಗ್ಗು ಗುಂಡಿಗಳಲ್ಲಿ ಕೊಳಚೆ ನೀರು ನಿಂತುಕೊಂಡಿವೆ. ಸೊಳ್ಳೆಗಳ ವಿಪರೀತ ಕಾಟದಿಂದಾಗಿ ಜನ ಸಾಮಾನ್ಯರು ತತ್ತರಿಸಿಹೋಗಿದ್ದು, ಪುರಸಭೆಯಿಂದ ಶನಿವಾರ ಹಲವು ಬಡಾವಣೆಗಳಲ್ಲಿ ಫಾಗಿಂಗ್ ಕೈಗೊಂಡು ಸೊಳ್ಳೆಯ ನಿಯಂತ್ರಣ ಕೈಗೊಳ್ಳಲು ಮುಖ್ಯಾಧಿಕಾರಿ ಸಂಗಮೇಶ ಪನ್ನಶಟ್ಟಿ ಕ್ರಮ ಜರುಗಿಸಿದ್ದಾರೆ. ಆದರೆ ಮಳೆಗಾಲ ಮುಗಿಯುವರೆಗೂ ವಾರಕ್ಕೊಮ್ಮೆಯಾದರು ಫಾಗಿಂಗ್ ಸಿಂಪರಣೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ