ಕುಡಿತದ ಚಟದಿಂದ ನೆಮ್ಮದಿ ಹಾಳು: ಮರುಳ ಶಂಕರ ಸ್ವಾಮೀಜಿ

KannadaprabhaNewsNetwork |  
Published : Jun 10, 2025, 07:00 AM ISTUpdated : Jun 10, 2025, 07:01 AM IST
ರಾಣಿಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಮದ್ಯವರ್ಜನ ಶಿಬಿರವನ್ನು ಮರುಳ ಶಂಕರ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಡಿತದ ಚಟವು ಮಾರಕ ರೋಗವಿದ್ದಂತೆ. ಇದರಿಂದ ಮುಕ್ತರಾದಾಗ ಮಾತ್ರ ನಿಮ್ಮ ಜೀವನದ ಬದುಕು ಸುಂದರವಾಗಿರಲು ಸಾಧ್ಯ.

ರಾಣಿಬೆನ್ನೂರು: ಕುಡಿತದ ಚಟ ಬದುಕಿನ ನೆಮ್ಮದಿ ಹಾಳು ಮಾಡಿ ಸಮಾಜದಲ್ಲಿ ಗೌರವವನ್ನು ಕಳೆಯುತ್ತದೆ ಎಂದು ಗಂಗಾಪುರ ಸಿದ್ಧಾರೂಢ ಮಠದ ಮರುಳ ಶಂಕರ ಸ್ವಾಮಿಗಳು ನುಡಿದರು.ತಾಲೂಕಿನ ಗಂಗಾಪುರ ಗ್ರಾಮದ ಸದ್ಗುರು ಸಿದ್ಧಾರೂಢ ಆಶ್ರಮದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾವೇರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ 1933ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕುಡಿತದ ಚಟವು ಮಾರಕ ರೋಗವಿದ್ದಂತೆ. ಇದರಿಂದ ಮುಕ್ತರಾದಾಗ ಮಾತ್ರ ನಿಮ್ಮ ಜೀವನದ ಬದುಕು ಸುಂದರವಾಗಿರಲು ಸಾಧ್ಯ ಎಂದರು.ಧಾರವಾಡ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಭಾಸ್ಕರ್ ಎನ್. ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಲ್ಲಿ 1,42,234 ಜನರು ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಮಾತನಾಡಿ, ಕುಡಿತದಿಂದ ಅನೇಕ ಸಂಸಾರಗಳು ಬೀದಿಪಾಲಾಗಿವೆ. ಅಲ್ಲದೇ ಅವರ ಜೀವನವನ್ನೇ ಬಲಿ ಕೊಡುವಂತಹ ಸಂದರ್ಭಗಳನ್ನು ನೋಡಿದ್ದೇವೆ. ಇಲ್ಲಿರುವ ಶಿಬಿರಾರ್ಥಿಗಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಏಕಾಗ್ರತೆ ಹೊಂದಿ ಕುಡಿತದ ಚಟದಿಂದ ಮುಕ್ತರಾಗಬೇಕು. ಅಂದಾಗ ನಿಮ್ಮ ಹೊಸಜೀವನ ಪ್ರಾರಂಭವಾಗುತ್ತದೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿದರು. ಯೋಜನಾಧಿಕಾರಿ ಮಂಜುನಾಥ ಎಂ.ಪಿ., ಮದ್ಯವರ್ಜನ ಶಿಬಿರದ ಅಧ್ಯಕ್ಷ ಸೋಮಪ್ಪ ಚಿಕ್ಕಪ್ಪಳವರ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಮುತ್ತಣ್ಣ ಯಲಿಗಾರ, ಗ್ರಾಪಂ ಅಧ್ಯಕ್ಷೆ ಶೃತಿ ಕಮ್ಮಾರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ಹುಲ್ಲತ್ತಿ, ಬುಳ್ಳಪ್ಪ ಬಣಕಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ನ್ಯಾಯವಾದಿ ಮಲ್ಲಿಕಾರ್ಜುನ ಕಲಾಲ, ಶಿಬಿರಾಧಿಕಾರಿ ಕುಮಾರ ಟಿ., ರಾಮಚಂದ್ರಪ್ಪ ರಾಯರಡ್ಡಿ, ಹಾಲಪ್ಪ ಲಮಾಣಿ, ಯೋಜನೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಯೋಜನೆಯ ಸಿಬ್ಬಂದಿ ಇದ್ದರು.ರಾಣಿಬೆನ್ನೂರಿನಲ್ಲಿ ಸಾಕ್ಷರತಾ ಕಾರ್ಯಕ್ರಮ

ಹಾವೇರಿ: ಅನಕ್ಷರಸ್ಥರು ಕಲಿಕಾ ಕೇಂದ್ರಗಳಿಗೆ ಆಗಮಿಸಿ ಕಲಿಯುವಂತೆ ಪ್ರೇರೇಪಣೆ ಮಾಡಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ ಸಲಹೆ ನೀಡಿದರು.

ರಾಣಿಬೆನ್ನೂರಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಮಾಜದಲ್ಲಿ ಗೌರವ ತಂದು ಕೊಡುತ್ತದೆ. ಕಲಿಕಾರ್ಥಿಗಳು ಕಲಿಕಾ ಕೇಂದ್ರಗಳಿಗೆ ಆಗಮಿಸಿ ಅಕ್ಷರ ಕಲಿತರೆ ಅವರ ಜೀವನದಲ್ಲಿ ಅಮೂಲ್ಯವಾದ ಬದಲಾವಣೆ ಕಾಣಲು ಸಾಧ್ಯವಿದೆ. ಪ್ರತಿ ಅನಕ್ಷರಸ್ಥ ಕಲಿಕಾರ್ಥಿಗೆ ನೀಡಿದ ಬಾಳಿಗೆ ಬೆಳಕು, ಸವಿಬರಹ ಪುಸ್ತಕಗಳನ್ನು ಸರಿಯಾಗಿ ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕು. ಅಂದಾಗ ಅವರಿಗೆ ವ್ಯವಹಾರಿಕ ಜ್ಞಾನ ಉಂಟಾಗುತ್ತದೆ. ಅವರಿಗೆ ಇಲಾಖೆಯಿಂದ ನೀಡಲಾಗುವ ಪೆನ್ನು, ನೋಟ್‌ಪುಸ್ತಕ, ಪೆನ್ಸಿಲ್, ರಬ್ಬರ್, ಮೆಂಡರ್ ನೀಡಿ ದಿನನಿತ್ಯ ಒಂದು ಗಂಟೆಗಳ ಕಾಲ ತಮಗೆ ನೀಡಿರುವ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಕಲಿಕಾರ್ಥಿಗಳಿಗೆ ಶಿಕ್ಷಣ ನೀಡಿದರೆ ಅವರ ಜ್ಞಾನದ ಮಟ್ಟ ಹೆಚ್ಚುತ್ತದೆ ಎಂದರು.ತಾಲೂಕು ನೋಡಲ್ ಗಂಗಪ್ಪ ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಶಕೀಲಹ್ಮದ್ ಶಿಕಾರಿಪುರ, ಮೂಕಮ್ಮನವರ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ