ಕನ್ನಡಪ್ರಭ ವಾರ್ತೆ ಮುಧೋಳ
ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ಮಹಿಳಾ ಸಬಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಹೆಣ್ಣು ಸಂಸ್ಕೃತಿಯ ಕಣ್ಣು, ಹೆಣ್ಣು ಭಾರತೀಯ ಪರಂಪರೆಯಲ್ಲಿ ಪೂಜ್ಯನೀಯ ಸ್ವರೂಪಳು ಹಾಗೂ ಭಾವನಾತ್ಮಕ ಜೀವಿಯಾಗಿದ್ದು, ಆಧುನಿಕ ಜಗತ್ತಿನ ಜೀವನ ಶೈಲಿಗೆ ಮಾರು ಹೋಗಿ ನಿಮ್ಮತನ ಕಳೆದುಕೊಳ್ಳದಿರಿ. ಪಾಶ್ಚಾತ್ಯ ಮಾದರಿಯ ಕುರುಕಲು ತಿಂಡಿಯ ವ್ಯಾಮೋಹಕ್ಕೆ ನಿಮ್ಮ ಆರೋಗ್ಯ ಹಾಳು ಮಾಡಿಕೋಳ್ಳಬೇಡಿ ಎಂದು ವಿದ್ಯಾರ್ಥಿನಿಯರಿಗೆ ಬುದ್ದಿಮಾತು ಹೇಳಿದರು.ರಾಷ್ಟ್ರೊತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ ತಾಲೂಕಿನ ನಾಗರಾಳ ಗ್ರಾಮದ ಶ್ರೀನಿವಾಸ ಕೃಷ್ಣಗೌಡ ಪಾಟೀಲ, ರಾಷ್ಟ್ರೋತ್ಥಾನ ಪರಿಷತ್ತಿನ ಬಾಗಲಕೋಟೆ ಜಿಲ್ಲಾ ಸಂಯೋಜಕ ಹನುಮಂತ ನಾಗರಾಳ ಉಪಸ್ಥಿತರಿದ್ದರು.ಮಹಿಳಾ ಸಬಲೀಕರಣ ಘಟಕದ ಕಾರ್ಯಧ್ಯಕ್ಷೆ ಪ್ರೊ.ಸರೋಜಿನಿ ಡಿ. ಅಂಬಿಗೇರ ಸ್ವಾಗತಿಸಿದರು. ಐಕ್ಯೂಎಸಿ ಸಹ-ಸಂಯೋಜಕ ಪ್ರೊ.ಎಂ.ಎಸ್. ಲಂಗೋಟಿ ಪರಿಚಯಿಸಿದರು, ಪ್ರೊ.ಎ.ಸಿ. ಕೆರೂರ ನಿರೂಪಿಸಿದರು. ಪ್ರೊ.ಗೀತಾ ಮೇತ್ರಿ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.