ಕಪ್ಪತಮಲ್ಲೇಶ್ವರನ ದರ್ಶನಕ್ಕೆ ಬರುವವರಿಗೂ ಎಲ್ಲ ಸೌಲಭ್ಯ-ಪಾಟೀಲ

KannadaprabhaNewsNetwork |  
Published : Sep 12, 2025, 01:00 AM IST
11ಎಂಡಿಜಿ1, ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದ ಶ್ರೀ ಕಪ್ಪತಮಲ್ಲೇಶ್ವರ ದೇವಸ್ಥಾನದ ನೂತನ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು.  | Kannada Prabha

ಸಾರಾಂಶ

ಕಪ್ಪತ್ತಗುಡ್ಡದಲ್ಲಿರುವ ಕಪ್ಪತಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಇತರೆ ಅಭಿವೃದ್ಧಿಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಈಚಗೆ ಕಪ್ಪತಮಲ್ಲೇಶ್ವರ ಟ್ರಸ್ಟ್‌ ಕಮಿಟಿ ರಚನೆಗೊಂಡಿದ್ದು, ಕಪ್ಪತಮಲ್ಲೇಶ್ವರನ ದರ್ಶನಕ್ಕೆ ಬರುವವರಿಗೂ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವುದು ಟ್ರಸ್ಟ್ ಕಮಿಟಿ ಉದ್ದೇಶವಾಗಿದೆ ಎಂದು ಕಪ್ಪತಮಲ್ಲೇಶ್ವರ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಆನಂದಗೌಡ ಪಾಟೀಲ(ಮುಂಡವಾಡ) ಹೇಳಿದರು.

ಮುಂಡರಗಿ: ಕಪ್ಪತ್ತಗುಡ್ಡದಲ್ಲಿರುವ ಕಪ್ಪತಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಇತರೆ ಅಭಿವೃದ್ಧಿಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಈಚಗೆ ಕಪ್ಪತಮಲ್ಲೇಶ್ವರ ಟ್ರಸ್ಟ್‌ ಕಮಿಟಿ ರಚನೆಗೊಂಡಿದ್ದು, ಕಪ್ಪತಮಲ್ಲೇಶ್ವರನ ದರ್ಶನಕ್ಕೆ ಬರುವವರಿಗೂ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವುದು ಟ್ರಸ್ಟ್ ಕಮಿಟಿ ಉದ್ದೇಶವಾಗಿದೆ ಎಂದು ಕಪ್ಪತಮಲ್ಲೇಶ್ವರ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಆನಂದಗೌಡ ಪಾಟೀಲ(ಮುಂಡವಾಡ) ಹೇಳಿದರು.ಅವರು ಗುರುವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಾಯಧನ ಪಡೆದುಕೊಂಡು ಕಪ್ಪತಗುಡ್ಡದಲ್ಲಿನ ಸಮುದಾಯ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇಲ್ಲಿನ ಕಪ್ಪತ್ತಮಲ್ಲೇಶ್ವರ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ನಾಡಿನ ಅನೇಕ ಜಿಲ್ಲೆಗಳ ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಿದ್ದಾರೆ.

ಗುಡ್ಡದಲ್ಲಿ ಕಪ್ಪತಮಲ್ಲೇಶ್ವರನ ದರ್ಶನಕ್ಕೆ ಹೋಗಲು ಭಕ್ತರಿಗೆ ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲ. ಇದರಿಂದ ಬರುವ ಭಕ್ತರು ತೊಂದರೆ ಅನುಭವಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಟ್ರಸ್ಟ ಕಮಿಟಿ ಮುಖಾಂತರ ರಸ್ತೆಯ ಸುಧಾರಣೆ ಮಾಡಿ ಭಕ್ತರಿಗೆ ಅನಕೂಲ ಕಲ್ಪಿಸಲಾಗುವುದು. ಶ್ರೀ ಕಪ್ಪತಮಲ್ಲೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣವೂ ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಅಧ್ಯಕ್ಷ ಆನಂದಗೌಡ ಪಾಟೀಲ (ಮುಂಡವಾಡ) 51 ಸಾವಿರ ರು.ಗಳ ದೇಣಿಗೆ ನೀಡಿದರು.

ದೇವಸ್ಥಾನ ಅಭಿವೃದ್ದಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ನೂತನವಾಗಿ ಕಪ್ಪತಮಲ್ಲೇಶ್ವರ ಟ್ರಸ್ಟ ಕಮೀಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ನೂತನ ಅಧ್ಯಕ್ಷರಾಗಿ ಆನಂದಗೌಡ ಪಾಟೀಲ (ಮುಂಡವಾಡ), ಉಪಾಧ್ಯಕ್ಷರಾಗಿ ಮಲ್ಲಪ್ಪ ಹುಯಿಲಗೋಳ, ಕಾರ್ಯದರ್ಶಿಯಾಗಿ ಮನೋಜಕುಮಾರ ಪಾಟೀಲ ಮತ್ತು ಆಡಳಿತ ಮಂಡಳಿಯ ಸದಸ್ಯರಾಗಿ ಬಸವರಡ್ಡಿ ಪರಮೋಜಿ, ಈರಯ್ಯ ಪಾಟೀಲ, ಬಸವರಡ್ಡಿ ಬಂಡಿಹಾಳ, ಸತ್ಯಪ್ಪ ತಳವಾರ, ಹನಮಪ್ಪ ಗೊಜನೂರ, ಹಾಲಪ್ಪ ದುಗ್ಗಾಣಿ, ಮರಿತಿಮ್ಮಪ್ಪ ನಾಡಗೌಡ್ರ, ದುರಗಪ್ಪ ಹರಿಜನ, ರಾಮಣ್ಣ ತುರಕಾಣಿ, ಈಶ್ವರಪ್ಪ ಓಲಿ, ಹರ್ಜಪ್ಪ ರಾಠೋಡ ಮತ್ತು ದೇವಪ್ಪ ಹೊರಗಲಮನಿ ಆಯ್ಕೆಯಾಗಿದ್ದಾರೆ. ಕಪ್ಪತಗುಡ್ಡದ ಸುತ್ತಲೂ ಇರುವ ಹಳ್ಳಿಗಳಿಂದ ಓರ್ವ ಹಿರಿಯರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಹಾಲಪ್ಪ ದುಗ್ಗಾಣಿ, ಶಂಕರಗೌಡ ಜಾಯಜಗೌಡ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಭೀಮರಡ್ಡಿ ರಾಜೂರ, ಮಹೇಶ ಗಡಗಿ, ಕಾಶಪ್ಪ ಅಳವಂಡಿ, ವಿಶ್ವನಾಥಗೌಡ ಪಾಟೀಲ, ಅಜ್ಜಣ್ಣ ಲಿಂಬಿಕಾಯಿ, ಪ್ರಕಾಶ ಸಜ್ಜನರ, ಕರಿಯಪ್ಪ ಸೊರಟೂರ, ಲೋಕಪ್ಪ ನಂದಿಕೋಲ, ಮಹೇಶ ರಾಯರಡ್ಡಿ, ಯಲ್ಲಪ್ಪ ಸೋಮಣ್ಣವರ, ರವೀಂದ್ರ ಜವಿ, ಮಾರುತಿ ಮುಡೆಯಮ್ಮನವರ ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ