ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ವೀರಭದ್ರೇಶ್ವರ ನಗರದಲ್ಲಿರುವ ಉದ್ಯಾನವನದ ರಂಗಮಂದಿರದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಬಸವನಬಾಗೇವಾಡಿ ಮಂಡಲವು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು ವಾಸ ಮಾಡುವ ಜೊತೆಗೆ ಮತದಾನ ಹಕ್ಕು ಪಡೆದುಕೊಂಡಿದ್ದು ಕಂಡು ಬರುತ್ತಿದೆ. ನಮ್ಮ ದೇಶದ ಅನ್ನ ತಿಂದು ತಮ್ಮ ದೇಶಕ್ಕೆ ಜೈಕಾರ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ದೇಶಕ್ಕೆ ಎಂದಿಗೂ ಮೋಸ ಮಾಡಬಾರದು. ಈಚೆಗೆ ಬಾಗಲಕೋಟದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆಯಲ್ಲಿ ನಡೆದ ಘಟನೆ ಮುಗ್ಧ ಹಿಂದೂಗಳ ಮೇಲೆ ಯಾವ ರೀತಿಯಾಗಿ ನಡೆಯುತ್ತಿದೆ ಎಂಬುವುವದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನಾವೆಲ್ಲರೂ ಯಾವ ರಾಷ್ಟ್ರದಲ್ಲಿ ವಾಸ ಮಾಡುತ್ತಿದ್ದೇವೆ ಎಂಬ ಭಾವನೆ ಬರುತ್ತಿದೆ. ಈ ವಿಷಯ ಕುರಿತು ನಾವೆಲ್ಲರೂ ಜಾಗೃತರಾಗಿ ಹಿಂದೂ ರಾಷ್ಟ್ರವಾಗಿ ಉಳಿಯಲು ನಾವೆಲ್ಲರೂ ಕಂಕಣಬದ್ದರಾಗಬೇಕಿದೆ ಎಂದು ತಿಳಿಸಿದರು.ಹಿಂದೂ ಧರ್ಮದ ಸಂರಕ್ಷಣೆಗೆ ಆರ್.ಎಸ್.ಎಸ್, ವಿಶ್ವ ಹಿಂದು ಪರಿಷತ್. ಬಜರಂಗ, ಎಬಿವಿಪಿ ಯಂತಹ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಹಿಂದೂ ಬಾಂಧವರಿಗೆ ಎಂದಿಗೂ ನೋವು ಆಗಲು ನಾವು ಬಿಡುವುದಿಲ್ಲ. ಹಿಂದೂ ಬಾಂಧವರರ ಸಂರಕ್ಷಣೆಗೆ ನಾವು ನಮ್ಮ ಮಠವನ್ನು ಸಹ ತ್ಯಜಿಸಲು ಬದ್ಧ. ಹಿಂದೂಗಳ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ತಪ್ಪಿಸದೇ ಹೋಗಿ ಭಾಗಿಯಾಗಿ ಜಾಗೃತ ಮಾಡುವುದಾಗಿ ತಿಳಿಸಿದರು.ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ಉತ್ತರ ಪ್ರಾಂತ ಸಹಸಂಯೋಜಕ ಶ್ರೀಕಾಂತ ಹೊಸಕೇರಾ ಮುಖ್ಯ ವಕ್ತಾರರಾಗಿ ಮಾತನಾಡಿ, ಆರ್.ಎಸ್.ಎಸ್ ಶತಾಬ್ಧಿ ವರ್ಷದಂಗವಾಗಿ ಎಲ್ಲೆಡೆ ಬೃಹತ್ ಹಿಂದೂ ಸಮ್ಮೇಳನ ಆಯೋಜನೆ ಮಾಡುವ ಮೂಲಕ ದೇಶದ ಸಂಸ್ಕ್ರತಿ, ನಾಗರಿಕತೆಯ ಕುರಿತು ಯುವಜನಾಂಗಕ್ಕೆ ತಿಳಿಸುವ ಕಾರ್ಯ ಮಾಡುತ್ತಿದೆ. ನಮ್ಮ ದೇಶದ ಮೇಲೆ ನಾನಾ ಪರಕೀಯರು ದಾಳಿ ಮಾಡಿದರೂ ಇಂದಿಗೂ ನಮ್ಮ ದೇಶದ ಸಂಸ್ಕ್ರತಿ, ಸಂಸ್ಕಾರ, ನಾಗರಿಕತೆ ಅಳಿದುಹೋಗಿಲ್ಲ. ಅನೇಕ ದುಷ್ಟ ಶಕ್ತಿಗಳು ನಮ್ಮ ಹಿಂದೂ ಸಂಸ್ಕ್ರತಿಯನ್ನು ನಾಶ ಮಾಡಲು ಪ್ರಯತ್ನಿಸಿವೆ. ನಮ್ಮ ದೇಶದಲ್ಲಿ ವಿದ್ಯೆ, ಸಂಸ್ಕ್ರತಿಗೆ ಕೊರತೆಯಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷವಾದರೂ ಇಂದಿಗೂ ಮೆಕಾಲೆ ಶಿಕ್ಷಣ ವ್ಯವಸ್ಥೆಯಲ್ಲಿ ನಾವೆಲ್ಲರೂ ಓದುತ್ತಿದ್ದೇವೆ. ಈ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ಸೋಲಿನ ರಾಷ್ಟ್ರವೆಂದು ತಿಳಿಸಲಾಗುತ್ತಿದೆ. ಸತ್ಯವಾದ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದರು. ನಮ್ಮ ಧರ್ಮ, ಸಮಾಜದ ರಕ್ಷಣೆಗಾಗಿ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಅದಕ್ಕಾಗಿ ನಮ್ಮ ಧರ್ಮ, ಸಂಸ್ಕ್ರತಿ ನಾಶವಾಗಿಲ್ಲ. 2047ಕ್ಕೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮತಾಂಧರು ಹೇಳುತ್ತಿದ್ದಾರೆ. ಎಲ್ಲ ಬಾಂಧವರು ಜಾಗೃತರಾಗಿ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಬಿಡಬಾರದು ಎಂಬ ಸಂಕಲ್ಪ ಮಾಡಬೇಕಿದೆ. ದೇಶದಲ್ಲಿ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಉಳಿಸಲು ಆರ್.ಎಸ್.ಎಸ್ ಸ್ವಾತಂತ್ರ್ಯ ಪೂರ್ವವೇ ಆರಂಭಗೊಂಡಿದೆ. ಇಂದು ಇದು ವಟವೃಕ್ಷದಂತೆ ಬೆಳೆದು ನಿಂತಿದೆ. ಸಮಾಜ ಹಿತಕ್ಕಾಗಿ ಆರ್.ಎಸ್.ಎಸ್ ಪಂಚ ಪರಿವವರ್ತನೆ ಎಂಬುವುದನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಉನ್ನತ ಶಿಕ್ಷಣ ನೀಡುವ ಭರದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವುದನ್ನು ಕಡಿಮೆ ಮಾಡುತ್ತಿದ್ದಾರೆ. ಸಂಸ್ಕಾರ, ಸಂಸ್ಕ್ರತಿ ನೀಡಬೇಕಾದ ಅಗತ್ಯವಿದೆ. ಸಾಮಾಜಿಕ ಸಾಮರಸ್ಯ ಇರಬೇಕು. ಸಂಸ್ಕ್ರತಿ ಉಳಿಸುವ ಕೆಲಸ ಮಾಡಬೇಕು. ನಾಗರಿಕ ಶಿಷ್ಟಾಚಾರ ಅನುಸರಿಸಬೇಕಿದೆ ಎಂದರು.ಸ್ಥಳೀಯ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವಜನಾಂಗಕ್ಕೆ ದೇಶದ ಸಂಸ್ಕ್ರತಿಯನ್ನು ತಿಳಿಸಬೇಕಿದೆ. ಬಸವಣ್ಣನವರು ಸಹ ಹಿಂದೂವೇ ಆಗಿದ್ದಾರೆ. ಇವರ ವಿಚಾರ ಧಾರೆಗಳು ಇಂದು ಥೇಮ್ಸ್ ನದಿಯವರಗೆ ಹೋಗಿವೆ. ನಾವೆಲ್ಲರೂ ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.ಮುತ್ತಗಿಯ ನರಹರಿ ಆಚಾರ್ಯರು, ನರಸಲಗಿಯ ಶ್ರೀಕಾಂತ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಹಿಂದೂ ಸಂಚಲನಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಪಟ್ಟಣಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಶಿವಪುತ್ರ ಶರಣರು, ಬಸವರಾಜ ಗೊಳಸಂಗಿ, ಸಿದ್ದನಗೌಡ ಪಾಟೀಲ, ರುದ್ರಮುನಿ ಸಾರಂಗಮಠ, ಶ್ರೀಶೈಲ ಶಿರಗುಪ್ಪಿ, ಎಚ್.ಎಸ್.ಗುರಡ್ಡಿ,ಮಲ್ಲೇಶಿ ಕಡಕೋಳ, ಬಸವರಾಜ ಬಿಜಾಪುರ,ಚಂದ್ರಶೇಖರ ಹಂಚಾಟೆ ಇತರರು ಇದ್ದರು. ಕೃಷ್ಣ ಬಡಿಗೇರ ಸ್ವಾಗತಿಸಿ, ನಿರೂಪಿಸಿದರು. ಡಾ.ಬಸವರಾಜ ಚವ್ಹಾಣ ವಂದಿಸಿದರು. ಸಮ್ಮೇಳನಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.