ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿವಿ ೪೮ (ಪುರುಷ) ಹಾಗೂ ೫೬ (ಮಹಿಳೆಯರ) ಅಂಕಗಳೊಂದಿಗೆ ಒಟ್ಟು ೧೦೪ ಅಂಕ ಪಡೆದರೆ, ಕ್ಯಾಲಿಕಟ್ ವಿವಿ ಪುರುಷರಲ್ಲಿ ೫೩ ಅಂಕ ಹಾಗೂ ಮಹಿಳೆಯರಲ್ಲಿ ೪೧ ಅಂಕ ಪಡೆದು ಒಟ್ಟು ೯೪ ಅಂಕ ಗಳಿಸಿ ರನ್ನರ್‌ಅಪ್ ಸ್ಥಾನ ಪಡೆಯಿತು.
ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು ೪ ಚಿನ್ನ, ೩ ಬೆಳ್ಳಿ, ೭ ಕಂಚಿನ ಪದಕ ಪಡೆದುಕೊಂಡಿತು. ಪದಕ ಪಡೆದ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಪುರುಷ ಹಾಗೂ ಮಹಿಳೆಯರ ಮಂಗಳೂರು ವಿವಿ ತಂಡದ ಒಟ್ಟು ೭೨ ಜನರ ಆಟಗಾರರಲ್ಲಿ ೫೯ ಕ್ರೀಡಾಪಟುಗಳು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದರು.ಚೆನ್ನೈನ ತಮಿಳನಾಡು ಫಿಸಿಕಲ್ ಎಜುಕೇಷನ್ ಆ್ಯಂಡ್ ಸ್ಪೋರ್ಟ್ಸ್ ವಿವಿಯಲ್ಲಿ ಶನಿವಾರ ಮುಕ್ತಾಯಗೊಂಡ ೮೩ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಪುರುಷರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ೪೮ ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯ ರನ್ನರ್‌ಅಪ್ ಸ್ಥಾನ ಪಡೆಯಿತು.
ಇದಕ್ಕೂ ಮುನ್ನ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ ೮೩ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ ೫೬ ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.