ಜೂ.7, 8ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಅಧಿವೇಶನ

KannadaprabhaNewsNetwork |  
Published : May 30, 2025, 11:46 PM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ವತಿಯಿಂದ 4ನೇ ರಾಜ್ಯ ಅಧಿವೇಶನ ಸಾಹಿತ್ಯದಲ್ಲಿ ''ಸ್ವ''ತ್ವ ಕಾರ್ಯಕ್ರಮ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಜೂ.7 ಮತ್ತು 8ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ವತಿಯಿಂದ 4ನೇ ರಾಜ್ಯ ಅಧಿವೇಶನ ಸಾಹಿತ್ಯದಲ್ಲಿ ''ಸ್ವ''ತ್ವ ಕಾರ್ಯಕ್ರಮ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಜೂ.7 ಮತ್ತು 8ರಂದು ನಡೆಯಲಿದೆ.

7ರಂದು ಬೆಳಗ್ಗೆ 10.30 ಗಂಟೆಗೆ ಸಾಹಿತ್ಯ ಸಂಘಟಕ, ಸಾಹಿತಿ ಎಸ್.ಜಿ.ಕೋಟಿ ಬಾಗಲಕೋಟೆ ಅಧ್ಯಕ್ಷತೆಯಲ್ಲಿ ಅಂಕಣಕಾರ, ಸಾಹಿತಿ ಪ್ರೊ.ಪ್ರೇಮಶೇಖರ ಉಡುಪ ಅಧಿವೇಶನ ಉದ್ಘಾಟಿಸುವರು. ಭಾಷಾ ವಿಜ್ಞಾನಿ, ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಧಾರವಾಡ ಪುಸ್ತಕ ಬಿಡುಗಡೆ ಮಾಡುವರು. ಅಭಾಸಾಪ ರಾಜ್ಯಾಧ್ಯಕ್ಷ ಡಾ. ನಾ.ಮೊಗಸಾಲೆ ಕಾಂತಾವರ, ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರ ಪಾಲ್ಗೊಳ್ಳುವರು.

ಮಧ್ಯಾಹ್ನ 2.30ಕ್ಕೆ ಸಾಹಿತ್ಯದಲ್ಲಿ ''''''''ಸ್ವ''''''''ತ್ವದ ಅಭಿವ್ಯಕ್ತಿ ವಿಷಯವಾಗಿ ಚರ್ಚಾಗೋಷ್ಠಿಯಲ್ಲಿ ಸಾಹಿತಿ ರೋಹಿತ್ ಚಕ್ರತೀರ್ಥ ಸಮನ್ವಯಕಾರರಾಗಿದ್ದು, ಪ್ರಜಾವಾಣಿ ಮುಖ್ಯ ಉಪ ಸಂಪಾದಕ ಎಸ್.ಸೂರ್ಯಪ್ರಕಾಶ ಪಂಡಿತ್, ವಿಮರ್ಶಕ ಬಂಟ್ವಾಳದ ಡಾ.ಅಜಕ್ಕಳ ಗಿರೀಶ ಭಟ್, ಸಾಹಿತಿಗಳಾದ ಬೆಂಗಳೂರಿನ ಸಹನಾ ವಿಜಯಕುಮಾರ, ಧಾರವಾಡದ ದೀಪಾ ಜೋಷಿ, ಧಾರವಾಡದ ಮುಕ್ತ ಜ್ಞಾನ ಅಭಿಯಾನಿ ಬೇಳೂರು ಸುದರ್ಶನ, ಬೆಳಗಾವಿ ನೀತಾ ರಾವ್ ಭಾಗವಹಿಸುವರು.

ಸಂಜೆ 6 ಗಂಟೆಗೆ ನಮ್ಮ ಕಟ್ಟೆ-ನಮ್ಮ ಮಾತು ಸಮನ್ವಯಕಾರರಾಗಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್, ಸಂಸ್ಕೃತಿ ಚಿಂತಕಿ ಡಾ. ವಿ.ಬಿ.ಆರತಿ, ಹಾಸ್ಯ ಸಾಹಿತಿಗಳಾದ ಗಂಗಾವತಿ ಪ್ರಾಣೇಶ, ಎಂ.ಎಸ್.ನರಸಿಂಹಮೂರ್ತಿ ಭಾಗವಹಿಸುವರು. ರಾತ್ರಿ 7.30ಕ್ಕೆ ಪ್ರತಿಭಾ ಅಭಿವ್ಯಕ್ತಿಯಲ್ಲಿ ತುಮಕೂರಿನ ಆರ್ಯ ಭಟ್ ಮರಳಿಗೆ ಮಡಿಲಿಗೆ, ಯಲ್ಲಾಪುರದ ಆದ್ಯಾ ಹೆಗಡೆ ನಾ ಕಂಡಂತೆ ಲಕ್ಷ್ಮಣ, ಮಂಗಳೂರಿನ ಸುಮಂಗಲ ರತ್ನಾಕರ್ ಭರತ ನಾಟ್ಯ ಏಕವ್ಯಕ್ತಿ ಪ್ರಸ್ತುತಿ-ಬಣ್ಣದ ವೇಷ ನಡೆಯಲಿದೆ.

ಜೂ.8ರಂದು ಬೆಳಗ್ಗೆ 10 ಗಂಟೆಗೆ ಕಾವ್ಯಗೋಷ್ಠಿಯಲ್ಲಿ ಧಾರವಾಡದ ಕವಿ ದಿವಾಕರ ಹೆಗಡೆ ಕೆರೆಹೊಂಡ ಅ‍ವಲೋಕನ ಮಾಡಲಿದ್ದಾರೆ. ಕುಂದಾಪುರ ಮರವಂತೆ ಮಂಜುನಾಥ, ಶೃಂಗೇರಿ ಜಯಶ್ರೀ ಗಣೇಶ, ಬೀದರ್ ವರದರಾಜ ಬಾವಗೆ, ಯಲ್ಲಾಪುರ ತೇಜಸ್ವಿ ಗಾಂವ್ಕರ್, ದಾವಣಗೆರೆ ಸುನಿತಾ ಪ್ರಕಾಶ, ಶಿವಮೊಗ್ಗದ ಅರಬಗಟ್ಟೆ ಅಣ್ಣಪ್ಪ, ಗಂಗಾವತಿ ಅವನಿ, ಬೆಂಗಳೂರು ಬಿ.ಎನ್. ರಮ್ಯಾ, ಚಿಕ್ಕಬುಳ್ಳಾಪುರ ಎಸ್.ಕೆ.ಸುರೇಶ, ಕಾರವಾಡದ ಕೃಪಾ ಭಟ್, ಬೆಳ್ತಂಗಡಿ ನಾರಾಯಣ ಫಡ್ಕೆ, ಬೆಂಗಳೂರಿನ ಶೀಲಾ ಅರಕಲಗೂಡು, ಕೊಪ್ಪ ಕೆ.ಎಸ್.ನಾಗಭೂಷಣ, ದಾವಣಗೆರೆ ವೀಣಾ ಕೃಷ್ಣಮೂರ್ತಿ, ಕೊಪ್ಪದ ವಿನುತಾ ಭಾವೆ, ವಿಜಯಪುರದ ಸುಷ್ಮಾ ಲೋಣಿ, ನೆಲಮಂಗಲದ ಶಿವಪ್ರಸಾದ ಆರಾಧ್ಯ, ಉಡುಪಿ ಶೋಭಾ ಶೆಟ್ಟಿಗಾರ್, ಶಿರಸಿ ಸೀತಾ ಹೆಗಡೆ, ಹರಿಹರಪುರ ಆದಿತ್ಯ ಪಾಲ್ಗೊಳ್ಳುವರು.

ಮಧ್ಯಾಹ್ನ 2.30ಕ್ಕೆ ಸಾಹಿತಿ ಡಾ. ಜಿ.ಬಿ. ಹರೀಶ ಬೆಂಗಳೂರು ಸಮಾರೋಪ ಮಾತುಗಳನ್ನಾಡುವರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್‌ ಲಕ್ನೋ, ಅಧಿವೇಶನದ ಅಧ್ಯಕ್ಷ ಎಸ್.ಜಿ.ಕೋಟಿ ಬಾಗಲಕೋಟೆ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಪುಟ್ಟು ಕುಲಕರ್ಣಿ ಕುಮಟಾ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ವಾಮದೇವಪ್ಪ ಉಪಸ್ಥಿತರಿರುತ್ತಾರೆ. ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಅಧಿವೇಶನದ ಸಂಚಾಲಕ, ಜಿಎಂ ವಿಶ್ವ ವಿದ್ಯಾಲಯದ ಸಲಹೆಗಾರ ಗು.ರುದ್ರಯ್ಯ, ಸಹ ಸಂಚಾಲಕ, ವರ್ತಕ ಅರುಣ ಗುಡ್ಡದಕೇರಿ ತಿಳಿಸಿದ್ದಾರೆ.

- - -

(-ಫೋಟೋ: ಸಾಂದರ್ಭಿಕ ಚಿತ್ರ).

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು