ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ

KannadaprabhaNewsNetwork |  
Published : Sep 25, 2024, 12:53 AM IST
ತಾಲೂಕಿನ ಬಾಣಾವರದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು | Kannada Prabha

ಸಾರಾಂಶ

ಅರಸೀಕೆರೆ: ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಶಾಸಕ ಕೆ. ಎಂ. ಶಿವಲಿಂಗೇಗೌಡರ ಸಹಕಾರದಿಂದ ಉತ್ತಮ ಸ್ಥಿತಿಯಲ್ಲಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಬಾಣವರ ಸಹಕಾರ ಸಂಘಕ್ಕೂ ಶಾಸಕರ ಕೊಡುಗೆ ಅಪಾರವಾಗಿದ್ದು, ಈ ಭಾಗದ ನಾಗರಿಕರಿಗೆ ಹಾಗೂ ರೈತರಿಗೆ ಸಹಕಾರ ಸಂಘದಿಂದ ಅನುಕೂಲ ದೊರೆಯಲು ಸಾಧ್ಯವಾಗುತ್ತಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಟಿ. ಜಿ ಚಂದ್ರಪ್ಪ ತಿಳಿಸಿದರು.

ಅರಸೀಕೆರೆ: ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಶಾಸಕ ಕೆ. ಎಂ. ಶಿವಲಿಂಗೇಗೌಡರ ಸಹಕಾರದಿಂದ ಉತ್ತಮ ಸ್ಥಿತಿಯಲ್ಲಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಬಾಣವರ ಸಹಕಾರ ಸಂಘಕ್ಕೂ ಶಾಸಕರ ಕೊಡುಗೆ ಅಪಾರವಾಗಿದ್ದು, ಈ ಭಾಗದ ನಾಗರಿಕರಿಗೆ ಹಾಗೂ ರೈತರಿಗೆ ಸಹಕಾರ ಸಂಘದಿಂದ ಅನುಕೂಲ ದೊರೆಯಲು ಸಾಧ್ಯವಾಗುತ್ತಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಟಿ. ಜಿ ಚಂದ್ರಪ್ಪ ತಿಳಿಸಿದರು.

ತಾಲೂಕಿನ ಬಾಣಾವರದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಟಿ. ಜಿ ಚಂದ್ರಪ್ಪ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘವು 4 ಲಕ್ಷ , 97 ಸಾವಿರ ರು. ಲಾಭದಲ್ಲಿ ನಡೆಯುತ್ತಿದ್ದು, ರೈತರು ಹಾಗೂ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಂಘ ಸಿದ್ಧವಾಗಿದೆ, ಸಹಕಾರ ಸಂಘದ ಬಂಡವಾಳವೇ ರೈತರಾಗಿದ್ದು ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ರೈತರಿಗೆ ಅನುಕೂಲ ಮಾಡಿಕೊಡಲು ಯಾವುದೇ ತಾರತಮ್ಯ ಮಾಡದೇ ಪ್ರಾಮಾಣಿಕ ಕೆಲಸವನ್ನು ಎಲ್ಲಾ ಸದಸ್ಯರು ಮಾಡುತ್ತಿದ್ದು, ಸಂಘದ ವ್ಯವಹಾರ 10 ಕೋಟಿ ರು.ಗಿಂತ ಹೆಚ್ಚು ದಾಟಿದ್ದು, ಸಂಘ ಈಗ ಉತ್ತಮ ಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ರೈತರು ಇದರ ಸಹಕಾರವನ್ನು ಪಡೆದುಕೊಳ್ಳಬೇಕು ಹಾಗೂ ರೈತರಿಗಾಗಿ ಇರುವ ಸಹಕಾರ ಸಂಘದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ರೈತರು ಮುನ್ನೆಲೆಗೆ ಬರಬೇಕು ಎಂದು ಸಲಹೆ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಸಿ ಶ್ರೀನಿವಾಸ್ ಮಾತನಾಡಿ, ಸಹಕಾರ ಸಂಘದಲ್ಲಿ ರೈತರಿಗೆ ಅನುಕೂಲವಾಗುವ ಎಲ್ಲಾ ಸವಲತ್ತುಗಳು ದೊರೆಯುತ್ತಿದ್ದು, ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸಂಘಗಳ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಹಾಗೂ ಸಹಕಾರ ಸಂಘದಿಂದ ಎಣ್ಣೆಗಾಣ ಸೇರಿ ರೈತರಿಗೆ ಅನುಕೂಲಕರವಾಗುವ ಇತರೆ ವ್ಯವಸ್ಥೆಗಳನ್ನು ಕಲ್ಪಿಸುವುದರ ಮೂಲಕ ಸಂಘವು ನೆರವಾಗಬೇಕು ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಟಿ. ಆರ್. ಕೃಷ್ಣಮೂರ್ತಿ ಮಾತನಾಡಿ, ಬಾಣಾವರ ಸಹಕಾರ ಸಂಘವು ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜನಮನ್ನಣೆ ಪಡೆದಿದೆ. ಅಲ್ಲದೆ ರೈತರಿಗೆ ಅನುಕೂಲವಾಗುವ ಗೊಬ್ಬರ, ಮುಳ್ಳು ತಂತಿ ಹೀಗೆ ಹಲವಾರು ಪದಾರ್ಥಗಳು ಸಂಘದಲ್ಲೇ ದೊರೆಯುತ್ತಿರುವುದರಿಂದ ರೈತರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು

ಮಾಜಿ ಅಧ್ಯಕ್ಷ ಲಕ್ಷ್ಮೇಶ್ ಪುಟ್ಟಮಲ್ಲಪ್ಪ, ಬಾಣವರ ಗ್ರಾಪಂ ಅಧ್ಯಕ್ಷೆ ವೀಣಾ ವಿಶ್ವನಾಥ್, ಕಾಚಿಘಟ್ಟ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಶಾನೆಗೆರೆ ಗ್ರಾಪಂ ಅಧ್ಯಕ್ಷ ಮಂಜಪ್ಪ, ರಮೇಶ್ ,ಗಣೇಶ್, ಆರಿಫ್ ಜಾನ್ ,ಈಶ್ವರಪ್ಪ, ಜ್ಯೋತಿ, ಧರ್ಮಪ್ಪ, ವೀಣಾ ಹಾಗೂ ರೈತ ಮುಖಂಡ ಬೀರಪ್ಪ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್, ಮುಖಂಡ ಕೆ ಸಿ ಖಾದರ್ ಭಾಷಾ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜಪ್ಪ ಸೇರಿ ಇತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ