ಕೂಡ್ಲಿಗಿ ಕ್ಷೇತ್ರದ 250 ಮತಗಟ್ಟೆಗಳು ಸೇರಿದಂತೆ ಜಿಲ್ಲಾ ಗಡಿಭಾಗದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಅನುಸರಿಸುವ ಮೂಲಕ 4 ಚೆಕ್ ಪೋಸ್ಟ್ ತೆರೆಯಲಾಗಿದೆ. ಶಾಂತಿ ಸುವ್ಯವಸ್ಥೆಯ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ.
ಕೂಡ್ಲಿಗಿ: ಕ್ಷೇತ್ರದ 250 ಮತಗಟ್ಟೆಗಳು ಸೇರಿದಂತೆ ಜಿಲ್ಲಾ ಗಡಿಭಾಗದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಅನುಸರಿಸುವ ಮೂಲಕ 4 ಚೆಕ್ ಪೋಸ್ಟ್ ತೆರೆಯಲಾಗಿದೆ. ಶಾಂತಿ-ಸುವ್ಯವಸ್ಥೆಯ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್. ರಘು ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡ್ಲಿಗಿ ಕ್ಷೇತ್ರದಲ್ಲಿ ಚುನಾವಣೆ ನಿಮಿತ್ತ 250 ಮತಗಟ್ಟೆ ತೆರೆಯಲಾಗಿದೆ. ಈ ಹಿಂದೆ 245 ಮತಗಟ್ಟೆಗಳಿದ್ದು, ಈ ಬಾರಿ ನೂತನವಾಗಿ ಮಾಡ್ಲಾಕನಹಳ್ಳಿ-ಗೊಲ್ಲರಹಟ್ಟಿ, ನುಂಕನಹಳ್ಳಿ, ಮಡಕಲಕಟ್ಟೆ, ನಾಗೇನಹಳ್ಳಿ ಹಾಗೂ ಬೆಳ್ಳಿಕಟ್ಟೆ ಗೊಲ್ಲರಹಟ್ಟಿ ಸೇರಿ 5 ಮತಗಟ್ಟೆಗಳು ಹೆಚ್ಚು ಮಾಡಿದ್ದು, ಮತದಾರರಿಗೆ ಅನುಕೂಲ ಮಾಡಲಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ ಪುರುಷರು -1,05,036, ಮಹಿಳೆಯರು - 1,02,586 ಹಾಗೂ ಇತರೆ 11 ತೃತೀಯ ಲಿಂಗಿಗಳು ಸೇರಿ ಒಟ್ಟು 2,07,633 ಮತದಾರರಿದ್ದಾರೆ ಎಂದರು.ಮತಗಟ್ಟೆ ಸ್ಥಳಾoತರ:ಪಟ್ಟಣದ 36 ಹಾಗೂ 37ಸಂಖ್ಯೆಯ ಮತಗಟ್ಟೆಗಳು ಈ ಹಿಂದೆ ಪಟ್ಟಣದ ಆಜಾದ್ ನಗರದ ತಹಾ ಆಂಗ್ಲ ಮಾಧ್ಯಮ ಶಾಲೆಯಲ್ಲಿದ್ದು ಈ ಶಾಲೆಯು ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಇಲ್ಲಿನ ಮತಗಟ್ಟೆ ಸಂಖ್ಯೆ 36ರನ್ನು ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿಗೆ ಸ್ಥಳಾoತರಿಸಲಾಗಿದೆ. ಮತಗಟ್ಟೆ ಸಂಖ್ಯೆ 37ನ್ನು ಎಪಿಎಂಸಿ ಎದುರಿಗೆ ಇರುವ ಸಮುದಾಯ ಭವನದ ಕಟ್ಟಡಕ್ಕೆ ಸ್ಥಳಾoತರ ಮಾಡಲಾಗಿದೆ ಎಂದರು.85ವರ್ಷ ಮೇಲ್ಪಟ್ಟ ನಿಶಕ್ತ ಮತದಾರರು ಹಾಗೂ ಅಂಗವೈಫಲ್ಯ ಮತದಾರರು ಮತಗಟ್ಟೆಗೆ ಬರಲು ಆಗದೇ ಇದ್ದುದರಿಂದ ಕೂಡ್ಲಿಗಿ ಕ್ಷೇತ್ರದಲ್ಲಿ 529 ಗಂಡು, 922 ಹೆಣ್ಣು ಸೇರಿ 1451 ಮತದಾರರು 85 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕೂಡ್ಲಿಗಿ ತಹಸೀಲ್ದಾರ್ ರಾಜು ಫಿರಂಗಿ ಮಾತನಾಡಿ, ಕ್ಷೇತ್ರದಲ್ಲಿ ನಾಲ್ಕು ಚೆಕ್ ಪೋಸ್ಟ್ ತೆರೆಯಲಾಗಿದೆ. ಪ್ರತಿಯೊಂದು ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ಈಗಾಗಲೇ ಹೊಸಹಳ್ಳಿ ಸಮೀಪದ ಆಲೂರು ಕ್ರಾಸ್ ಚೆಕ್ ಪೋಸ್ಟ್, ಗುಡೇಕೋಟೆ ಸಮೀಪದ ಡಿ.ಸಿದ್ದಾಪುರ ಚೆಕ್ ಪೋಸ್ಟ್ ನಲ್ಲಿ ನೇಮಿಸಿದ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಯಾವುದೇ ದಾಖಲು ಇಲ್ಲದ ನಗದು ಹಣ ಹಾಗೂ ಸೀರೆಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ತಹಸೀಲ್ದಾರ್ ತಿಳಿಸಿದರು.ಮಾಧ್ಯಮದ ಸಹಕಾರ ಚುನಾವಣಾ ಸಂದರ್ಭದಲ್ಲಿ ಅಗತ್ಯವಾಗಿದೆ. ಶಾಂತಿ ಸುವ್ಯವಸ್ಥಿತ ಚುನಾವಣೆಗೆ ನಿಮ್ಮಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.