ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಅಥಣಿ ರಸ್ತೆಯಲ್ಲಿರುವ ಘೇವರಚಂದ್ ಕಾಲೋನಿಯ ಯುರೋ ಕಿಡ್ಸ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ದುಡ್ಡು ಸುರಿಯುತ್ತಿದ್ದಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ಮೌಲ್ಯ ಶಿಕ್ಷಣವನ್ನು ಬೋಧಿಸಿದಾಗ ಮಾತ್ರ ಮಗು ಯಶಸ್ವಿ ಆಗಲು ಸಾಧ್ಯ ಎಂದು ಅವರು ಹೇಳಿದರು.ಯುರೋ ಕಿಡ್ಸ್ ಶಾಲೆಯ ನಿರ್ದೇಶಕ ಹಾಗೂ ಪ್ರತಿಷ್ಠಿತ ಶಿವಾಜಿ ಬ್ಯಾಂಕಿನ ವ್ಯವಸ್ಥಾಪಕ ಶ್ರೀ ಸಂಜಯ ಜಾಧವ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ, ಇಂದಿನ ಮಕ್ಕಳೇ ನಾಳೆಯ ನಾಡಿನ ನಾಗರಿಕರು. ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಪಾತ್ರ ಪಾಲಕರದ್ದು ಇದೆ. ಕೇವಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಮೇಲೆ ಶೈಕ್ಷಣಿಕ ಪ್ರಗತಿ ಅಳೆಯದೇ, ಕಲಿಸಿದ ವಿಷಯ ಮಗುವಿಗೆ ಮನದಟ್ಟಾಗುವಂತೆ ಪಾಠ ಭೋಧಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಮಂಜುನಾಥ ಜುನಗೊಂಡ ನಿರೂಪಿಸಿ, ವಂದಿಸಿದರು. ಶಾಲೆಯ ಅಧ್ಯಕ್ಷ ಸತೀಶ ಶಿಂತ್ರೆ, ಡಾ. ಪ್ರಮೋದ ಪಾಟೀಲ್, ಬಸು ಬಿರಾದಾರ, ಮಾರುತಿ ಘೋರ್ಪಡೆ, ಮುಖ್ಯ ಶಿಕ್ಷಕಿ ಅಕ್ಷತಾ ಅಲಬಳ್ಳಿ, ಶಿಕ್ಷಕ ವೃಂದ, ಪಾಲಕರು ಮುದ್ದು ಮಕ್ಕಳು ಭಾಗವಹಿಸಿದ್ದರು.