ಗಂಗಾವತಿ: ಇಲ್ಲಿನ ತಾಪಂ ಮಂಥನ ಸಭಾಂಗಣದಲ್ಲಿ ಎಸಿ ಕ್ಯಾ.ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಅಂಜನಾದ್ರಿ ಹನುಮಮಾಲಾ ವಿಸರ್ಜನೆಯ ಸಿದ್ಧತೆಯ ಕುರಿತು ಪೂರ್ವಭಾವಿ ಸಭೆ ಜರುಗಿತು.ಎಸಿ ಮಹೇಶ ಮಾಲಗಿತ್ತಿ ಮಾತನಾಡಿ, ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಸಿದ್ಧತೆಗಾಗಿ ಆನೆಗೊಂದಿ, ದುರ್ಗಾದೇವಿ, ಚಿಕ್ಕರಾಂಪುರ, ಹನುಮನಹಳ್ಳಿ, ಸೇತುವೆ ಸೇರಿ ಇತರ ಕಡೆ 19 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಭಕ್ತರಿಗೆ ಅನೌನ್ಸ್‌ಮೆಂಟ್, ಅಂಜನಾದ್ರಿ ಬೆಟ್ಟದ ಮೇಲೆ, ನಡುವೆ, ಕೆಳಭಾಗ, ಪಾರ್ಕಿಂಗ್ ಸ್ಥಳ, ಆನೆಗೊಂದಿ ಪ್ರಾರಂಭದ ಬಳಿ 5 ಮೆಡಿಕಲ್ ತಂಡ, 3 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.ವೇದಪಾಠ ಶಾಲೆಯ ಬಳಿ ಡಿ.23ರ ಮಧ್ಯಾಹ್ನದಿಂದ 5ಸಾವಿರ ಮಾಲಾಧಿಕಾರಿಗಳಿಗೆ ಚಿತ್ರಾನ್ನ ಇಲ್ಲವೇ ಪಲಾವ್ ವ್ಯವಸ್ಥೆ, 24ರಂದು 1ಲಕ್ಷ ಮಾಲಾಧಾರಿಗಳಿಗೆ ಬೆಳಿಗ್ಗೆ 5ರಿಂದಲೇ ಗೋದಿಹುಗ್ಗಿ, ಅನ್ನ, ಸಾಂಬರ್ ವ್ಯವಸ್ಥೆ ಇ ಎಂದು ಮಾಹಿತಿ ನೀಡಿದರು.ಅಂಜನಾದ್ರಿ ಬೆಟ್ಟದ ತಳಭಾಗ, ಆನೆಗೊಂದಿ ಉತ್ಸವ ಮೈ ದಾನ, ಪಾರ್ಕಿಂಗ್, ಆನೆಗೊಂದಿ ಶಾಲೆ, ಪಂಪಾಸರೋವರ, ದುರ್ಗಾದೇವಿ ಬಳಿ ಕುಡಿಯಲ್ ಓರಲ್ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತದೆ.ದೇವಸ್ಥಾನ ಬಳಿ, ಆನೆಗೊಂದಿ ಪಾರ್ಕಿಂಗ್, ದುರ್ಗಾದೇವಿ ಬಳಿ ಸೇರಿ 50 ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದಾಗ ಸಂಘಟನೆಗಳ ಮುಖಂಡರು, 300 ಮೊಬೈಲ್ ಟ್ಯಾಯ್ಲೆಟ್ ಅಗತ್ಯವಿದೆ ಎಂದರು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಇತರೆ ವಿಷಯ ಬಗ್ಗೆ ಚರ್ಚೆ ನಡೆಯಿತು.ಈ ವೇಳೆ ತಾಪಂ ಇಒ ಲಕ್ಷ್ಮೀದೇವಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ.ಪಾಟೀಲ, ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಶೇಖರ ಜುಟ್ಟಲ್, ಹುಲಿಗೆಮ್ಮ ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತ್ತಗುಂಡಿ ಸೇರಿ ಬಜರಂಗದಳ, ವಿಶ್ವ ಹಿಂದೂಪರಿಷತ್, ಹಿಂದೂಜಾಗರಣ ವೇದಿಕೆ ಪದಾಧಿಕಾರಿಗಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.