ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ನಾಳೆಯಿಂದ ಪರೀಕ್ಷೆ ಆರಂಭ

KannadaprabhaNewsNetwork |  
Published : Mar 24, 2024, 01:37 AM IST
ಅಫಜಲ್ಪುರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವಸಿದ್ದತೆ ಮಾಡಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ನಾಳೆ (ಮಾ.25)ಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಶನಿವಾರ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆ ಹಾಕುವ ಕೆಲಸ ಶಿಕ್ಷಕರು ಮಾಡಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ನಾಳೆ (ಮಾ.25)ಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಶನಿವಾರ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆ ಹಾಕುವ ಕೆಲಸ ಶಿಕ್ಷಕರು ಮಾಡಿದರು.

ಪರೀಕ್ಷೆ ಪೂರ್ವತಯಾರಿ ಕುರಿತು ಬಿಇಒ ಹಾಜಿಮಲಂಗ ಇಂಡಿಕರ್ ಮಾಹಿತಿ ನೀಡಿದ್ದು ತಾಲೂಕಿನಾದ್ಯಂತ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಈ ಪೈಕಿ ಗೊಬ್ಬೂರ(ಬಿ) ಅತೀ ಸೂಕ್ಷ್ಮ ಹಾಗೂ ಅತನೂರಿನ ಆದರ್ಶ ವಿದ್ಯಾಲಯ ಮತ್ತು ಮಣೂರಿನ ಸರ್ಕಾರಿ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. 12 ಪರೀಕ್ಷಾ ಕೇಂದ್ರಗಳ ಪೈಕಿ ಅಫಜಲ್ಪುರ ಪಟ್ಟಣದ ಮಹಾಂತೇಶ್ವರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 500, ನಾಗರಾಜ ಪದಕಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 500, ಸರ್ಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ 400, ಕರ್ನಾಟಕ ಪಬ್ಲಿಕ್ ಸ್ಕೂಲ್ ಕರ್ಜಗಿಯಲ್ಲಿ 350, ಸ್ವಾಮಿ ವಿವೇಕಾನಂದಪ್ರೌಢ ಶಾಲೆಯಲ್ಲಿ 300, ಮಣೂರ ಸರ್ಕಾರಿ ಪ್ರೌಢಶಾಲೆಯಲ್ಲಿ 450, ಸರ್ಕಾರಿ ಪ್ರೌಢಶಾಲೆ ಗೊಬ್ಬೂರದಲ್ಲಿ 480, ಮಹಾಂತೇಶ್ವರ ಪ್ರೌಢಶಾಲೆ ರೇವೂರ(ಬಿ) ನಲ್ಲಿ 420, ಎನ್‌ವಿಜಿ ಆಂಗ್ಲಮಾಧ್ಯಮ ಪ್ರೌಢಶಾಲೆ ಶಿರವಾಳದಲ್ಲಿ 400, ಅತನೂರಿನ ಆದರ್ಶ ವಿದ್ಯಾಲಯದಲ್ಲಿ 400, ವ್ಹಿ.ಎಲ್ ಭಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ 550, ಸ್ಟೇಷನ್ ಗಾಣಗಾಪೂರದ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 280 ಸೇರಿ 12 ಪರೀಕ್ಷಾ ಕೇಂದ್ರಗಳಲ್ಲಿ 4540 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

224 ಪರೀಕ್ಷಾ ಮೇಲ್ವಿಚಾರಕು, 12 ಮುಖ್ಯ ಪರೀಕ್ಷಾ ಅಧಿಕ್ಷಕರು, 9 ಜನ ಉಪ ಮುಖ್ಯ ಪರೀಕ್ಷಾ ಅಧಿಕ್ಷಕರು, 12 ಸ್ಥಾನಿಕ ಜಾಗೃತದಳದ ಅಧಿಕಾರಿಗಳು, 12 ಜನ ಕಸ್ಟೋಡಿಯನ್ಸ್, 4 ಜನ ಮಾರ್ಗಾಧಿಕಾರಿಗಳು, 12 ಜನ ಮೊಬೈಲ್ ಸ್ವಾಧಿನಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವೆಬ್‌ಕಾಸ್ಟಿಂಗ್‌ಗೆ ಅಫಜಲ್ಪುರದಲ್ಲಿ ಸಿಗುತ್ತಿಲ್ಲ ಟೆಕ್ನಿಷಿಯನ್:

ಎಲ್ಲಾ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳ ಮೇಲೆ ನೀಗಾ ಇಡುವುದಕ್ಕಾಗಿ ಹಾಗೂ ನಕಲು ತಡೆಗಟ್ಟಿ ಪಾರದರ್ಶಕ ಪರೀಕ್ಷೆ ನಡೆಸುವ ಉದ್ದೇಶದಿಂದ ವೆಬ್‌ಕಾಸ್ಟಿಂಗ್ ಸಿಸ್ಟಂ ಅಳವಡಿಕೆಗೆ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಆದರೆ ಅಫಜಲ್ಪುರ ತಾಲೂಕಿನಲ್ಲಿ ವೆಬ್‌ಕಾಸ್ಟಿಂಗ್ ಸಿಸ್ಟಂ ಅಳವಡಿಕೆ ಸಾಧ್ಯವಾಗುತ್ತಿಲ್ಲ. ಬಿಇಒ ಹಾಜಿಮಲಂಗ ಅವರಿಗೆ ಈ ಕುರಿತು ಕೇಳಿದರೆ ವೆಬ್‌ಕಾಸ್ಟಿಂಗ್ ಸಿಸ್ಟಂ ಅಳವಡಿಸಲು ಅಫಜಲ್ಪುರದಲ್ಲಿ ಟೆಕ್ನಿಷಿಯನ್ ಸಿಗುತ್ತಿಲ್ಲ. ಕಲಬುರಗಿಯಿಂದ ಟೆಕ್ನಿಷಿಯನ್ ಕರೆತಂದು ಅಳವಡಿಕೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ವೆಬ್‌ಕಾಸ್ಟಿಂಗ್ ಸಿಸ್ಟಂ ಕಣ್ಗಾವಲಿನಲ್ಲಿ ಹೇಗೆ ಪರೀಕ್ಷೆ ಅಕ್ರಮ ತಡೆಗಟ್ಟಿ ಪಾರದರ್ಶಕ ಪರೀಕ್ಷೆಗಳನ್ನು ನಡೆಸುತ್ತಾರೆನ್ನುವುದು ತಾಲೂಕು ಶಿಕ್ಷಣ ಇಲಾಖೆಗೆ ಸವಾಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!