ಲೋಕಸಭಾ ಚುನಾವಣಾ ಮತದಾನಕ್ಕೆ ಸಕಲ ಸಿದ್ಧತೆ: ಕೆ.ಎಸ್.ಸೋಮಶೇಖರ್

KannadaprabhaNewsNetwork |  
Published : Apr 26, 2024, 12:46 AM IST
25ಕೆಎಂಎನ್ ಡಿ25 | Kannada Prabha

ಸಾರಾಂಶ

ಮದ್ದೂರು ಪಟ್ಟಣದಲ್ಲಿ 24 ಮತಗಟ್ಟೆಗಳು, ಗ್ರಾಮಾಂತರ ಪ್ರದೇಶದಲ್ಲಿ 230 ಒಟ್ಟು 254 ಮತಗಟ್ಟೆಗಳಿವೆ. ಪಿಂಕ್ ಮತಗಟ್ಟೆಗಳು 5, ಎತ್ನಿಕ್ 2, ಯುವ ಮತಗಟ್ಟೆ 2, ವಿಕಲ ಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳು 187, ಸೂಕ್ಷ್ಮ ಮತಗಟ್ಟೆಗಳು 67, ಅತಿಸೂಕ್ಷ್ಮ ಮತಗಟ್ಟೆ 4, ವೆಬ್ ಕಾಸ್ಟಿಂಗ್ ಮತಗಟ್ಟೆ 167 ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನಲ್ಲಿ ಏ.26ರಂದು ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಗುರುವಾರ ಚುನಾವಣಾ ಸಂಬಂಧ ನಡೆಯುತ್ತಿದ್ದ ಅಂತಿಮ ಸಿದ್ಧತೆ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 2,15,745 ಮತದಾರರಿದ್ದು, ಇದರಲ್ಲಿ ಗಂಡು 1,04,280, ಹೆಣ್ಣು 1,11,443 ಹಾಗೂ ಇತರೆ 22 ಮತದಾರರಿದ್ದಾರೆ.

ಪಟ್ಟಣದಲ್ಲಿ 24 ಮತಗಟ್ಟೆಗಳು, ಗ್ರಾಮಾಂತರ ಪ್ರದೇಶದಲ್ಲಿ 230 ಒಟ್ಟು 254 ಮತಗಟ್ಟೆಗಳಿವೆ. ಪಿಂಕ್ ಮತಗಟ್ಟೆಗಳು 5, ಎತ್ನಿಕ್ 2, ಯುವ ಮತಗಟ್ಟೆ 2, ವಿಕಲ ಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳು 187, ಸೂಕ್ಷ್ಮ ಮತಗಟ್ಟೆಗಳು 67, ಅತಿಸೂಕ್ಷ್ಮ ಮತಗಟ್ಟೆ 4, ವೆಬ್ ಕಾಸ್ಟಿಂಗ್ ಮತಗಟ್ಟೆ 167 ನಿರ್ಮಿಸಲಾಗಿದೆ ಎಂದು ವಿವರಿಸಿದರು.

254 ನಿಯೋಜಿತ ಅಧ್ಯಕ್ಷಾಧಿಕಾರಿಗಳು, 254 ಸಹಾಯಕ ಅಧ್ಯಕ್ಷಾಧಿಕಾರಿಗಳು, 254 ಪೋಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ. 58 ಮೀಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. 37 ಬಸ್ ಮಾರ್ಗಗಳು, 6 ಟೆಂಪೋ ಮಾರ್ಗಗಳು, 11 ಜೀಪ್ ಮಾರ್ಗಗಳು, 2 ಮಿನಿ ಬಸ್ ಗಳನು ಒಟ್ಟು 56 ಮಾರ್ಗಗಳನ್ನು ರೂಪಿಸಲಾಗಿದೆ. ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಅಧಿಕಾರಿಗಳಿಗೆ ಮೂಲ ಸೌರ್ಯಕ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಚುನಾವಣೆ ಶಾಂತಿ ಸುವ್ಯವಸ್ಥೆಯಿಂದ ನಡೆಯುವ ಉದ್ದೇಶದಿಂದ 1 ಡಿವೈಎಸ್ಪಿ, 3 ಸಿಪಿಐ, 9 ಪಿಎಸ್ಐ ಒಳಗೊಂಡ 400 ಮಂದಿ ಪೊಲೀಸ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಸಾರ್ವಜನಿಕರು ನಿರ್ಭಿತಿಯಿಂದ ಬಂದು ಮತಗಟ್ಟೆಯ ಬಳಿ ಮತ ಚಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌