ಸುಳ್ಳು ವದಂತಿಗಳನ್ನು ಹರಡಿದರೇ ಅಂಥವರ ವಿರುದ್ಧ ಕಾನೂನು ಕ್ರಮಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21ರಿಂದ ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ 22,700 ವಿದ್ಯಾರ್ಥಿಗಳು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 340 ಶಾಲೆಗಳಿದ್ದು, 120 ಸರ್ಕಾರಿ, 32 ವಸತಿ, 74 ಅನುದಾನಿತ ಹಾಗೂ 114 ಅನುದಾನ ರಹಿತ ಶಾಲೆಗಳಿವೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ, ಕೊಠಡಿ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ಬೆಳಕು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಯಮಾನುಸಾರ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು. ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟು 21,429 ಹೊಸ ಮತ್ತು 1271 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22700 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 11376 ಬಾಲಕರು, 11324 ಬಾಲಕಿಯರು ಇದ್ದಾರೆ. ಹಾಜರಾತಿ ಕೊರತೆ ಇದ್ದ 1714 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ಪತ್ರ ಕೊಟ್ಟಿಲ್ಲ. ಪರೀಕ್ಷೆಗೆ ಒಟ್ಟು 962 ಪರೀಕ್ಷಾ ಸಿಬ್ಬಂದಿ ನಿಯೋಜನೆ ಮಾಡಿದ್ದು, 71 ಮುಖ್ಯ ಅಧೀಕ್ಷಕರು ಮತ್ತು 71 ಸ್ಕ್ವಾಡ್ ನೇಮಿಸಲಾಗಿದೆ ಎಂದರು.ಫಲಿತಾಂಶ ಸುಧಾರಣೆಗೆ ಕ್ರಮ:
ಪರೀಕ್ಷೆ ಕುರಿತು ಮಕ್ಕಳು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಪ್ರಶ್ನೆಪತ್ರಿಕೆ ಲೀಕ್ ಕುರಿತು ಸುಳ್ಳು ಮೆಸೇಜ್ ಹಾಕಿದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಈ ವೇಳೆ ಬಿಇಒ ಚನ್ನಬಸಪ್ಪ ಮಗ್ಗದ, ನೋಡಲ್ ಅಧಿಕಾರಿ ಹುಲಿಬಂಡಿ ಇದ್ದರು.