ಕನ್ನಡಪ್ರಭ ವಾರ್ತೆ ಹಿರೇಕೆರೂರು
ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತಗಟ್ಟೆ ಕೇಂದ್ರಗಳಲ್ಲಿ ಪಾಲಿಸಬೇಕಾದ ನಿರ್ದೇಶನಗಳ ಕುರಿತು ಮಾಹಿತಿ ನೀಡಲಾಯಿತು. ಸಿಬ್ಬಂದಿಗೆ ಉಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಊಟ ಮುಗಿಸಿದ ನಂತರ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ಪ್ರಯಾಣ ಬೆಳೆಸಿದರು. ಈ ಕುರಿತು ಮಾಹಿತಿ ನೀಡಿದ ಸಹಾಯಕ ಚುನಾವಣಾಧಿಕಾರಿ ಡಾ. ನಾಗರಾಜ್ ಎಲ್. ಕ್ಷೇತ್ರದಲ್ಲಿ ೨೨೯ ಮತಗಟ್ಟಿಗಳಿದ್ದು, ೯೫,೭೦೨ ಪುರುಷರು, ೯೨,೫೦೩ ಮಹಿಳೆಯರು ಹಾಗೂ ಮೂವರು ಇತರರು ಸೇರಿದಂತೆ ಒಟ್ಟು ೧,೮೮,೨೦೮ ಮತದಾರರಿದ್ದಾರೆ. ಅತಿಸೂಕ್ಷ್ಮ ಮತಗಟ್ಟೆ ೩, ಸೂಕ್ಷ್ಮ ಮತಗಟ್ಟೆ ೪೯,೧೭೭ ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.೧೦೦೮ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ೧೦ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದರು.