ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಎಲ್ಲ ಧರ್ಮಗ್ರಂಥಗಳು ಮಾನವೀಯತೆಯನ್ನು ಬೋಧಿಸಿದೆ ಎಂದು ಹೊಸದುರ್ಗ ಬ್ರಹ್ಮ ವಿದ್ಯಾನಗರ ಭಗೀರಥ ಪೀಠ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮಿ ಹೇಳಿದ್ದಾರೆ.
ಮಂಗಳವಾರ, ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ನೀಡಿದರು.ನಮ್ಮ ನಮ್ಮ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಂತೆ ನಡೆಯಬೇಕು. ನಮ್ಮ ಧರ್ಮದಲ್ಲಿ ನಿಷ್ಠೆಯಿಂದ ಇರ ಬೇಕು, ತಂದೆ ತಾಯಿಗೆ ಗುರುಹಿರಿಯರಲ್ಲಿ ಪ್ರೀತಿ ವಿಶ್ವಾಸಗಳನ್ನು ಹೊಂದಿರಬೇಕು, ಎಲ್ಲರನ್ನು ಸಮನಾಗಿ ಕಾಣಬೇಕು, ನಾವೆಲ್ಲರೂ ಭಗವಂತನ ಮಕ್ಕಳು, ಭಗವಂತ ಸೃಷ್ಟಿಕರ್ತ. ಭಗವಂತನಿಗೆ ಋಣಿಯಾಗಿರಬೇಕು. ಭೂಮಿ ನೀರು ವಾಯು ಆಕಾಶ ಸೂರ್ಯನ ಬೆಳಕು ಭೇದ ಮಾಡುವುದಿಲ್ಲ. ಎಲ್ಲರೂ ಸಮಾನಾಗಿ ಬದುಕಬೇಕು ಎಂದು ಹೇಳಿದರು.ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ. ಇದು ಬಹಳ ಒಳ್ಳೆಯ ಕಾರ್ಯಕ್ರಮ. ಎಲ್ಲಾ ಧರ್ಮಗ್ರಂಥಗಳು ಒಳಿತನ್ನೇ ಹೇಳುತ್ತಿದೆ. ಸೃಷ್ಟಿಕರ್ತ ಒಬ್ಬನೇ ಅದೊಂದು ಶಕ್ತಿ ಆ ಶಕ್ತಿಯೇ ದೇವರು ಬುದ್ಧ ಬಸವಣ್ಣ, ಸ್ವಾಮಿ ವಿವೇಕಾನಂದರು ಇಂತಹ ಮಹನೀಯರು ಭೇದ ಭಾವ ಮಾಡಿಲ್ಲ. ಎಲ್ಲರೂ ಶಾಂತಿಯಿಂದ ಇರಬೇಕು. ಜನರು ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರುಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಜ, ಮೊಹಮ್ಮದ್ ಕುಂಇ ಸುಭದ್ರ ಕುಟುಂಬ ಸದೃಢ ಸಮಾಜ ಎನ್ನುವ ವಿಷಯದ ಪ್ರವಚನ ನೀಡಿ ಕುಟುಂಬ ಸಂಬಂಧಗಳನ್ನು ಕೆಡಿಸಬಾರದು. ದೇವರ ಅತಿದೊಡ್ಡ ಅನುಗ್ರಹ ಕುಟುಂಬ, ಕುಟುಂಬ ಎನ್ನುವುದು ದೈವಿಕ ವ್ಯವಸ್ಥೆ, ಕುಟುಂಬದ ಸಂಬಂಧವನ್ನು ಪವಿತ್ರವಾಗಿ ಕಾಪಾಡಿಕೊಳ್ಳಬೇಕು. ಅನಾಥರ ರಕ್ಷಣೆ ದೇವನ ಬಹಳ ದೊಡ್ಡ ನಿರ್ದೇಶನವಾಗಿದೆ ಎಂದು ಹೇಳಿದರು.ಮಕ್ಕಳ ಲಾಲನೆ ಪಾಲನೆ ಪೋಷಣೆ ತಾಯಿ ಮಡಿಲಲ್ಲಿ ಆಗಬೇಕು. ಮಕ್ಕಳಿಗೆ ಒಳ್ಳೆಯನ್ನು ಹೇಳಿಕೊಡಬೇಕು ಎಂದರು.ತುಮಕೂರು ಚಿಂತಕರಾದ ನಿಖಿತ್ ರಾಜ್ ಮೌರ್ಯ, ಪುರಸಭೆ ಉಪಾಧ್ಯಕ್ಷ ಗಿರಿಜಾ ಪ್ರಕಾಶ್ ವರ್ಮಾ. ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಮುಂಡ್ರೆ ಗಿರಿರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ನರೇಂದ್ರ , ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಂ. ನಾಗರಾಜು ಒಕ್ಕಲಿಗ ಸಮಾಜದ ಮುಖಂಡ ಕೆ. ಪಿ. ಕುಮಾರ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಇರ್ಪಾನ್ ಅಹಮದ್ ಬೇಗ್, ವಕ್ಫ್ ಬೋರ್ಡ್ ಸದಸ್ಯ ಮಹಮದ್ ಯೂಸುಫ್, ಕನಕ ಮಹಿಳಾ ಸಮಾಜ ಅಧ್ಯಕ್ಷೆ ಲಕ್ಷ್ಮಿ ವಿಶ್ವನಾಥ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಚಂದ್ರಶೇಖರ್, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಶೇಕ್ ಜಾವಿದ್, ಬಿಲಾಲ್ ಖಾನ್ಮ ತ್ತಿತರರು ಭಾಗವಹಿಸಿದ್ದರು.
12ಕೆಟಿಆರ್.ಕೆ.1ಃತರೀಕೆರೆಯಲ್ಲಿ ನಡೆದ ಕನ್ನಡದಲ್ಲಿ ಕುರ್ ಆನ್ ಪ್ರವಚನದಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿದರು. ಹೊಸದುರ್ಗ ಬ್ರಹ್ಮ ವಿದ್ಯಾನಗರ ಭಗೀರಥ ಪೀಠ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮಿ,ಪುರಸಭೆ ಉಪಾಧ್ಯಕ್ಷ ಗಿರಿಜಾ ಪ್ರಕಾಶ್ ವರ್ಮಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್, ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಜ, ಮೊಹಮ್ಮದ್ ಕುಂಇ ಮತ್ತಿತರರು ಇದ್ದರು.