ಕನ್ನಡಪ್ರಭ ವಾರ್ತೆ, ಶೃಂಗೇರಿ
ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಪ್ರಭುಗೌಡ ಮಾತನಾಡಿ, ಸಾರ್ವಜನಿಕರಿಗೆ ನೇರವಾಗಿ ಸೇವೆ ನೀಡುವ ಗ್ರಾಮ ಅಧಿಕಾರಿಗಳಿಗೆ ಸುರಕ್ಷತಾ ಸೌಲಭ್ಯಗಳೇ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ, ನೆರೆ, ಬರ ಸೇರಿದಂತೆ ಕ್ಲಿಷ್ಟಕರ ಸಂದರ್ಭಗಳಲ್ಲಿಯೂ ಜನರ ಸೇವೆ ಮಾಡುವ ಅಧಿಕಾರಿ ಗಳಿಗೆ ಯಾವುದೇ ಭದ್ರತೆಯಿಲ್ಲ ಎಂದರು.
ಕೆಲಸದ ಒತ್ತಡ. ಕೆಲವೆಡೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆಗಳು ನಡೆದಿವೆ. ಎಲ್ಲವನ್ನು ಸಹಿಸಿ ಒತ್ತಡದ ನಡುವೆಯೂ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಮೂಲಭೂತ ಸೌಕರ್ಯರ್ಯಗಳ ಕೊರತೆ, ರಕ್ಷಣೆ, ಸುರಕ್ಷತೆಗಳ ಕೊರತೆ ಎದುರಿಸುತ್ತಾ ಬಂದಿದ್ದರು ನಮ್ಮ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿಗಳಿಲ್ಲ. ಟೇಬಲ್, ಕುರ್ಚಿ ಸೇರಿದಂತೆ ಗುಣಮಟ್ಟದ ಪರಿಕರಗಳಿಲ್ಲ. ಉತ್ತಮ ಗುಣಮಟ್ಟದ ಮೊಬೈಲ್ ಗಳಿಲ್ಲ. ಲ್ಯಾಪ್ ಟ್ಯಾಪ್, ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಇದರಿಂದ ಕಚೇರಿ ಕಾರ್ಯನಿರ್ವಹಿಸುವುದು ಕಷ್ಟ. ವೇತನ ತಾರತಮ್ಯ, ಆರೋಗ್ಯ ಸೌಲಭ್ಯ, ಸೇರಿದಂತೆ ಸಮಸ್ಯೆಗಳಿವೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಶೃಂಗೇರಿ ತಾಲೂಕು ಕಚೇ್ರಿ ಎದರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿ ಸಂಘದ ಪದಾದಿಕಾರಿಗಳ ಅನಿರ್ದಿಷ್ಟಾವದಿ ಮುಷ್ಕರ ಮೂರನೇಯ ದಿನವೂ ಮುಂದುವರಿಯಿತು.