ಹಾರೋಹಳ್ಳಿ: ತಾಲೂಕಿನ ಮರವಾಡಿ ಹೋಬಳಿಯ ಟಿ.ಹೊಸಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ವಿವಿಧ ಇಲಾಖೆಗಳಿಂದ ಮಂಜೂರಾಗಿರುವ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿಪೂಜೆ ನೆರವೇರಿಸಿದರು.
ದೊಡ್ಡಸಾದೇನಹಳ್ಳಿ ಗ್ರಾಮಸ್ಥರು ರೈತರು ವ್ಯವಸಾಯ ಮಾಡಲು ಅತಿಹೆಚ್ಚು ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ, ಕುಡಿಯಲು ನೀರು ಸಹ ಸಮಸ್ಯೆಯಾಗಿದೆ, ಬೆಳಗಿನ ವಿದ್ಯುತ್ ಕಡಿತಗೊಳಿಸಿ ರಾತ್ರಿ ನೀಡುವುದರಿಂದ ತುಂಬಾ ತೊಂದರೆಯಾಗುತ್ತಿದೆ, ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತದೆ ಎಂದು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕೆಲವರು ಸಾಗುವಳಿ ಚೀಟಿ ಕೊಡುವಂತೆ ಶಾಸಕರು ಬಳಿ ಮನವಿ ಪತ್ರ ಸಲ್ಲಿಸಿದರು.
ವಿಮಾನ ನಿಲ್ದಾಣ ಬೇಡ: ದೊಡ್ಡಸಾದೇನಹಳ್ಳಿ ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ತೀರ್ಮಾನಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ, ರೈತರ ಬಳಿ ಇರುವ ಸ್ವಲ್ಪ ತುಂಡು ಭೂಮಿಯನ್ನು ಕಳೆದುಕೊಳ್ಳುವುದರಿಂದ ವಿಮಾನ ನಿಲ್ದಾಣ ಇಲ್ಲಿ ಮಾಡಬಾರದೆಂದು ಗ್ರಾಮಸ್ಥರು ಶಾಸಕರ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದರು.ಈ ವೇಳೆ ಪಿಡಿಒ ಶಿವಪ್ರಸಾದ್, ಕಾಂಗ್ರೆಸ್ ಮುಖಂಡರಾದ ಜೆ.ಸಿ.ಬಿ ಅಶೋಕ್, ಬಮೂಲ್ ಹರೀಶ್, ಮರಳವಾಡಿ ರಾಮಕೃಷ್ಣ, ಕಿರಣಗೆರೆ ಜಗದೀಶ್, ಈಶ್ವರ್, ಲೋಕೇಶ್, ಬೆಂಚಿಕಲ್‌ದೊಡ್ಡಿ ರುದ್ರೇಶ್, ಬಿಲ್‌ಕಲೆಕ್ಟರ್ ಮಲ್ಲಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
11ಕೆಆರ್ ಎಂಎನ್ 4.ಜೆಪಿಜಿಟಿ.ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.