ನರಗುಂದ: ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಕುಟುಂಬ, ದೇಶದ ಅಭಿವೃದ್ಧಿ ವರ್ಗದ ಕೋಣೆಯಲ್ಲಿ ನಿರ್ಮಾಣವಾಗುತ್ತದೆ. ಅಲ್ಲಿ ನೀಡುವ ಪಠ್ಯಾನುಭ ಮನುಷ್ಯರನ್ನು ಮಹಾಮಾನವರನ್ನಾಗಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಬಿಂಗಿ ಮಾತನಾಡಿ, ಇಡೀ ಪ್ರಪಂಚದಲ್ಲಿಯೇ ಸಂಸ್ಕೃತಿ ಮತ್ತು ಸಂಸ್ಕಾರದ ತವರೂರು ಭಾರತ, ಅಂತಹ ಪುಣ್ಯಭೂಮಿಯಲ್ಲಿ ಆಧುನೀಕರಣದ ಸೆಲೆಗೆ ಸಿಲುಕಿದ ಇವತ್ತಿನ ಮಕ್ಕಳು ಮತ್ತು ಯುವ ಜನತೆಯಲ್ಲಿ ಅದು ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಉತ್ತಮ ಶಿಕ್ಷಕರಿಗೆ ಹಾಗೂ 2024ನೇ ಸಾಲಿನ ಶ್ರೇಷ್ಠ ವರ್ತಕ ಪ್ರಶಸ್ತಿಗೆ ಭಾಜನರಾದ ಸಲೀಮ ಮೇಗಲಮನಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.ಶಾಂತಲಿಂಗ ಶ್ರೀಗಳು, ಶಿರೋಳದ ಜಗದ್ಗುರು ಯಚ್ಚರೇಶ್ವರ ಮಠದ ಅಭಿನವ ಯಚ್ಚರಸ್ವಾಮಿಗಳು, ಡಾ. ಗುರುಬಸವ ದೇವರು, ಸಂಪನ್ಮೂಲ ವ್ಯಕ್ತಿ ಎಸ್.ಬಿ.ಶಿವಳ್ಳಿ, ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ, ಎಸ್.ಬಿ. ಪಾಟೀಲ, ಪ್ರಾಚಾರ್ಯ ಬಿ.ಎಸ್. ಸಾಲೀಮಠ, ಮುಖ್ಯಶಿಕ್ಷಕ ಈರಣ್ಣ ಸೋನಾರ, ಪಾಂಡುರಂಗ ಬಡಿಗೇರ, ಶಿವಪ್ಪ ಬೋಳಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಹಾಂತೇಶ ಹಿರೇಮಠ ಸ್ವಾಗತಿಸಿದರು, ಪ್ರೊ.ಆರ್.ಬಿ. ಚಿನಿವಾಲರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.