ಕನ್ನಡಪ್ರಭ ವಾರ್ತೆ ಉಡುಪಿ
ಅವರು ಬುಧವಾರ ಮಣಿಪಾಲದಲ್ಲಿ ಪತ್ರಕರ್ತರ ಜೊತೆ, ವಿಧಾನಸಭಾ ಕಲಾಪದ ವೇಳೆ ತುಳು ಸಂಭಾಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ತುಳು ಭಾಷೆ ನಮ್ಮ ತುಳುನಾಡಿನ ಸಂಸ್ಕೃತಿಯ ಪ್ರತೀಕ. ಅನೇಕ ಕಲಾವಿದರು, ನಾಟಕಕಾರರು, ಸಿನಿಮಾದವರು ತುಳು ಭಾಷೆಯನ್ನು ವಿಶ್ವಾದ್ಯಂತ ತೆಗೆದುಕೊಂಡು ಹೋಗಿದ್ದಾರೆ. ತುಳು ಬರಹಗಾರರು ಭಾಷೆಯ ಕೀರ್ತಿ ಹೆಚ್ಚಿಸಿದ್ದಾರೆ. ಮುಂದೆ ತುಳು ಭಾಷೆ ಪರಂಪರೆ ಪ್ರೀತಿ ವಿಶ್ವಾಸವನ್ನು ಇಡೀ ದೇಶಕ್ಕೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ತುಳು ಭಾಷೆಗೆ ರಾಜ್ಯದ ಮಾನ್ಯತೆ ನೀಡಲಾಗುತ್ತಿದೆ ಎಂದರು.ನಾವು ಅವಕಾಶ ಸಿಕ್ಕಾಗಲಿಲ್ಲ ತುಳು ಭಾಷೆಯಲ್ಲಿ ಮಾತನಾಡಬೇಕು. ಕರಾವಳಿಯ 25 ಸಣ್ಣ ಸಮುದಾಯಗಳು ತುಳು ಭಾಷೆಯನ್ನು ಮಾತನಾಡುತ್ತವೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತಿರುವ ಭಾಷೆ ತುಳುವಾಗಿದೆ. ಎರಡನೇ ಭಾಷೆಯಾಗಿ ಪರಿಗಣಿಸಬೇಕೆಂದು ಬಹಳಷ್ಟು ಬೇಡಿಕೆ ಇದೆ. ಈ ಬಗ್ಗೆ ಚರ್ಚೆಯಾಗಿದೆ ಸಭೆಗಳಾಗಿವೆ.
ಕೇರಳದ ವಯನಾಡಿನಲ್ಲಾದ ದುರಂತ ನೋವು ತಂದಿದ್ದು, ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುವ ಮಾನವನಿಂದಾಗುವ ಸಮಸ್ಯೆ, ದುರ್ಘಟನೆಗಳ ತಡೆಗೆ ಮುನ್ನೆಚ್ಚರಿಕೆ ಅತ್ಯಗತ್ಯ, ನಿಸರ್ಗಕ್ಕೆ ವಿರುದ್ಧವಾಗಿ ಸರ್ಕಾರದ ರೀತಿ ನೀತಿಗಳು ಸಲ್ಲದು ಎಂದು ಖಾದರ್ ಹೇಳಿದರು.