ಕನ್ನಡಪ್ರಭ ವಾರ್ತೆ ಹಾಸನ
ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಿ ದರ್ಶನೋತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ವಿತರಿಸಲಾಗುತ್ತಿರುವ ಗೋಲ್ಡ್ ಪಾಸ್‌ಗಳ ಹಂಚಿಕೆಯಲ್ಲಿ ಭಾರೀ ಲೋಪಗಳಾಗುತ್ತಿದ್ದು, ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಯಮಬಾಹಿರವಾಗಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯ ಪ್ರಕಾರ ಪ್ರತಿ ಶಾಸಕರಿಗೆ ತಲಾ ೫೦೦ ಗೋಲ್ಡ್ ಪಾಸ್‌ಗಳನ್ನು ನೀಡಲಾಗಿದ್ದು, ಹಾಸನದ ಸ್ಥಳೀಯ ಶಾಸಕರಿಗೆ ೧,೫೦೦ ಹಾಗೂ ಲೋಕಸಭಾ ಸದಸ್ಯರಿಗೆ ೧,೦೦೦ ಪಾಸ್‌ಗಳನ್ನು ವಿತರಿಸಲಾಗಿದೆ. ಒಟ್ಟಾರೆ ಸುಮಾರು ೬,೦೦೦ ಪಾಸ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ವಾಸ್ತವದಲ್ಲಿ ನಿಗದಿತ ಸಂಖ್ಯೆಯನ್ನು ಮೀರಿ ಪಾಸ್‌ಗಳು ವಿವಿಧ ಮುಖಂಡರು ಹಾಗೂ ಕಾರ್ಯಕರ್ತರ ಕೈಗೆ ತಲುಪುತ್ತಿವೆ. ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕಾರ್ಯಕರ್ತರ ಬಳಿಯೂ ಗೋಲ್ಡ್‌ಪಾಸ್‌ಗಳು ವ್ಯಾಪಕವಾಗಿ ಕಂಡುಬರುತ್ತಿವೆ ಎಂದು ದೂರಿದರು.
ಸಂಸದರು, ಅವರ ಆಪ್ತ ಸಹಾಯಕರು ಹಾಗೂ ಗನ್‌ಮ್ಯಾನ್‌ಗಳ ಮೂಲಕ ಪ್ರೋಟೋಕಾಲ್ ಮತ್ತು ಸರ್ಕಾರಿ ವಾಹನಗಳಲ್ಲಿ ವಿವಿಧ ವ್ಯಕ್ತಿಗಳನ್ನು ದೇವರ ದರ್ಶನಕ್ಕೆ ಕರೆದೊಯ್ಯಲಾಗುತ್ತಿದೆ. ಗೋಲ್ಡ್‌ಪಾಸ್‌ಗಳ ಮುದ್ರಣ, ವಿತರಣೆ ಮತ್ತು ಬಳಕೆಯ ಬಗ್ಗೆ ಜಿಲ್ಲಾಡಳಿತ ಯಾವುದೇ ಪಾರದರ್ಶಕ ಲೆಕ್ಕಾಚಾರವನ್ನು ಸಾರ್ವಜನಿಕರ ಮುಂದಿಟ್ಟಿಲ್ಲ. ಎಷ್ಟು ಪಾಸ್‌ಗಳನ್ನು ಮುದ್ರಿಸಲಾಗಿದೆ, ಎಷ್ಟು ವಿತರಿಸಲಾಗಿದೆ ಹಾಗೂ ಎಷ್ಟು ಮಂದಿ ಅವುಗಳ ಮೂಲಕ ದರ್ಶನ ಪಡೆದಿದ್ದಾರೆ ಎಂಬ ನಿಖರ ಅಂಕಿಅಂಶಗಳೇ ಲಭ್ಯವಿಲ್ಲ. ಲೋಪಗಳನ್ನು ತಕ್ಷಣ ಸರಿಪಡಿಸದಿದ್ದರೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಹಾಲು, ಮೊಸರಿನ ದರ ಏರಿಕೆಗೆ ತೀವ್ರ ವಿರೋಧ
ಇದೇ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ರಘು ಹೊಂಗೆರೆ ಇತರರು ಇದ್ದರು.