ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು ಎರಡು ವರ್ಷಗಳ ಹಿಂದೆ 11 ಬಿ ಖಾತೆ ಹೊಂದಿರುವ ನಿವೇಶನಗಳು ಹಾಗೂ ಮನೆಗಳ ಇ-ಸ್ವತ್ತುಗಳನ್ನು ನೀಡುವ ಕಡತಗಳನ್ನು ನಗರಸಭೆ ಪೌರಾಯುಕ್ತರಿಗೆ ವರ್ಗಾಯಿಸಿದ್ದರೂ ಇದುವರೆವಿಗೂ 11 ಬಿ ಖಾತೆಯುಳ್ಳವರಿಗೆ ನಿವೇಶನಗಳು ಮತ್ತು ಮನೆಗಳಿಗೆ ಇ-ಸ್ವತ್ತು ನೀಡದೆ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾರ್ವಜನಿಕರು ಇ-ಸ್ವತ್ತುಗಳನ್ನು ಪಡೆಯಲು ನಗರಸಭೆಗೆ ಅಲೆದು ಸಾಕಾಗಿದ್ದಾರೆ. ಇ-ಸ್ವತ್ತು ಇಲ್ಲದಿದ್ದರೆ ಅಂತಹ ನಿವೇಶನಗಳಿಗೆ ಸಾಲ ಸೌಲಭ್ಯ ಸಿಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಭವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಉಪಾಧ್ಯಕ್ಷ ಕೆ.ಗೌಸ್‍ಪೀರ್, ನರಸಿಂಹಸ್ವಾಮಿ ಎಂ.ಆರ್. ಖಜಾಂಚಿ ಡಿ.ಈಶ್ವರಪ್ಪ, ಚಾಂದ್‍ಪೀರ್, ಇಮಾಂ ಮೈಹಿಮುದ್ದೀನ್, ಪ್ರಸನ್ನ, ರಾಜಪ್ಪ, ಗೌಸ್‍ಖಾನ್, ರಫೀಕ್, ರಾಜಣ್ಣ, ಸಲೀಂ, ಇಬಾದುಲ್ಲಾ, ತಿಮ್ಮಯ್ಯ ಎಂ. ಮಹಾಂತಪ್ಪ ಸೇರಿ ಅನೇಕರು ಪಾಲ್ಗೊಂಡಿದ್ದರು.