ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ನಗರಸಭೆಯ ಆಯುಕ್ತರು ಹಾಗೂ ಕೆಲ ನೌಕರರಿಗೆ ಧಮಕಿ ಹಾಕಿ ದರ್ಪ ಮೆರೆದಿದ್ದು ಅಲ್ಲದೆ ದೌರ್ಜನ್ಯ ಎಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅವರ ಮೇಲೆ ಎಸ್ಸಿ, ಎಸ್ಟಿ ಕಾಯಿದೆಯಡಿ ದೂರು ದಾಖಲಿಸುವಂತೆ ನಗರಸಭೆ ಆಯುಕ್ತರಿಗೆ ವಾಲ್ಮೀಕಿ ಸಂಘಟನೆಗಳು ಶನಿವಾರ ಲಿಖಿತ ಮನವಿ ಸಲ್ಲಿಸಿದೆ.ಎ.ಪಿ.ಶಂಕರ್ ಶುಕ್ರವಾರ ಡೆಟಾ ಎಂಟ್ರಿ ಆಪರೇಟರ್ ಆದ ರಘು, ಮಹೇಶ್ ಎಂಬುವರ ಮೇಲೆ ನಿನ್ನನ್ನು ಹೊಡೆಯುತ್ತೆನೆ, ಬಡಿಯುತ್ತೆನೆ ಎಂದು ಹೆದರಿಸಿ ಕರ್ತವ್ಯ ನಿರ್ವಹಿಸದಂತೆ ಬೆದರಿಕೆ ಒಡ್ಡಿರುತ್ತಾರೆ. ಅವರ ವರ್ತನೆಯಿಂದ ನಗರಸಭೆ ಕೆಲ ಸಿಬ್ಬಂದಿ ಭಯಬೀತರಾಗಿದ್ದಾರೆ. ಶುಕ್ರವಾರ ನಗರಸಭೆ ಆಯುಕ್ತರು ಸೇರಿದಂತೆ ಇಬ್ಬರು ನೌಕರರ ಮೇಲೆ ಏಕವಚನ ಪದ ಬಳಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಪೊಲೀಸ್ ಠಾಣೆಗೆ ಆಯುಕ್ತರಾದ ನೀವು ದೂರು ನೀಡಿ, ಅವರ ಪ್ರಭಾವಕ್ಕೆ ಒಳಗಾದರೆ ನಿಮ್ಮ ಮೇಲೂ ಸೇರಿದಂತೆ ನಾವು ಸಿಆರ್‌ಇ ಸೆಲ್ ಗೆ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸಬೇಕಾಗುತ್ತದೆ ಎಂದು ವಾಲ್ಮೀಕಿ ಯುವಪಡೆ ಸಂಘಟನೆ ಎಚ್ಚರಿಸಿದೆ.
ಏನಿದು ಪ್ರಕರಣ:ಗ್ರೀನ್ ಬರ್ಡ್ ಇ-ಸ್ವತ್ತು ವಿಚಾರಕ್ಕೆ ಸಂಬಂಧಿಸಿದ ಸರ್ಕಾರದ ನೋಟಿಸ್‌ಗೆ ಸಮಜಾಯಿಸಿ ನೀಡಲು ಕಚೇರಿಯಲ್ಲಿ ಸಿಬ್ಬಂದಿ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದ ನಗರಸಭೆ ಆಯುಕ್ತರನ್ನೆ ನೀವು ಹೊರಗಿ ಹೋಗಿ ಎಂದು ಅವರ ಕಾರ್ಯವೈಖರಿ ವಿರುದ್ಧ ಹಾಲಿ ನಗರಸಭೆ ಉಪಾಧ್ಯಕ್ಷರು ಉಡಾಫೆಯಾಗಿ ವರ್ತಿಸಿ ನೀವು ಪ್ರತಿಭಟನೆ ಮಾಡಿ, ಇಲ್ಲಿ ಕೆಲಸ ಮಾಡಬೇಡಿ ಎಂದು ಏಕವಚನದದಲ್ಲಿ ಪ್ರಶ್ನಿಸಿ ಹೊರ ಕಳುಸಹಿಸಿದ ವಿಲಕ್ಷಣ ಘಟನೆ ಜರುಗಿತ್ತು. ಈ ಕುರಿತ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಗ್ರೀನ್ ಬರ್ಡ್ ಕಚೇರಿ ವಶಕ್ಕೆ ಪಡೆದುಕೊಳ್ಳುವ ಸಂಬಂಧ ನಗರಸಭೆ ಆಯುಕ್ತರಿಗೆ ಸಮಜಾಯಿಸಿ ನೀಡುವಂತೆ ಸರ್ಕಾರದ ವಿಶೇಷಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ನಗರಸಭೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾರಿ ಆಯುಕ್ತ ಪರಮಶಿವಯ್ಯರಿಗೆ ಮೇ 22ರಂದು ನೋಟಿಸ್ ನೀಡಲಾಗಿತ್ತು.
ನೋಟಿಸ್‌ಗೆ ಸಮಜಾಯಿಸಿ ನೀಡುವ ಹಿನ್ನೆಲೆ ರಜೆಯಿಂದ ಆಗಮಿಸಿದ್ದ ಹಾಲಿ ಆಯುಕ್ತ ರಮೇಶ್ ಕೆಲಕಾಲ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಳಿಕ ನೋಟಿಸ್‌ಗೆ ಸಮಜಾಯಿಸಿ ನೀಡಲು ಮಾಹಿತಿ ತಯಾರಿಸುವ ವೇಳೆ ಆಗಮಿಸಿದ ನಗರಸಭೆ ಉಪಾಧ್ಯಕ್ಷ ಎಪಿ ಶಂಕರ್ ನಮ್ಮ ಖಾತೆ ಇತರೆ ಕೆಲಸ ಮಾಡದೆ ನಿಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದಿರಲ್ಲ ಎಂದು ಸಂಬೋಧಿಸಿ ಏಕ ವಚನ ಪ್ರಯೋಗಿಸಿ ರೀ. ನಡಿರಿ..ಎಂದು ಗದರಿ ಕೆಲ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ, ಈ ನುಡೆವ ಮಧ್ಯ ಪ್ರವೇಶಿಸಿದ ಮತ್ತೋರ್ವ ನೌಕರ ಪರಶಿವಯ್ಯ ಎಂಬುವರಿಗೂ ನೀವು ಏನ್ ಘನಂದಾರಿ ಕೆಲಸ ಮಾಡಿದ್ದಿರಿ.. ಹೇಳಿ ಎಂದು ಪ್ರಶ್ನಿಸಿ ಅವಾಜ್ ಹಾಕಿ ಗಣಕ ಯಂತ್ರ ಸ್ಥಗಿತಗೊಳಿಸಿ ಹೊರ ನಡೆಯಿರಿ ಎಂದು ಗದರಿ ಕಳುಹಿಸಿದ್ದಾರೆ ಎನ್ನಲಾಗಿದೆ. ಉಪಾಧ್ಯಕ್ಷರು ಹಿಂದೊಮ್ಮೆ ಸಹ ಏಕವಚನದಲ್ಲಿ ನಗರಸಭೆ ಆಯುಕ್ತರ ಜೊತೆ ಉದ್ಧಟತನದಿಂದ ವರ್ತಿಸಿದ್ದು ಈಗಲೂ ಇದೆ ರೀತಿ ವರ್ತಿಸಿರುವುದು ಸಾಕಷ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.ಏತನ್ಮದ್ಯೆ ನಗರಸಭೆ ಆಯುಕ್ತ ರಮೇಶ್ ಉಪಾಧ್ಯಕ್ಷರ ವರ್ತನೆ ಬೇಸರ ತರಿಸಿದೆ. ನಾವೇನೂ ಬೇರೆ ಕೆಲಸ ಮಾಡಿಸುತ್ತಿರಲಿಲ್ಲ, ಸರಕಾರದ ಪತ್ರಕ್ಕೆ ಉತ್ತರಿಸುವ, ದಾಖಲೆ ನೀಡುವ ಕೆಲಸ ಮಾಡಲಾಗುತ್ತಿತ್ತು, ಈ ವೇಳೆ ಅವರು ಈರೀತಿ ವರ್ತಿಸಿದರು ಎಂದಿದ್ದಾರೆ.
ಎ.ಪಿ.ಶಂಕರ್ ನಾಯಕ ಸಮಾಜದ ಇಬ್ಬರು ನೌಕರರ ವಿರುದ್ಧ ಏಕವಚನ ಪದ ಬಳಸಿ ದರ್ಪ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಜಾಲತಾಣಗಳಲ್ಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಮಹೇಶ್ ಎಂಬುವರು ವಾಲ್ಮೀಕಿ ಪಡೆ ಹೆಸರಿನ ಜಾಲತಾಣದಲ್ಲಿ ಎಪಿ ಶಂಕರ್ ದರ್ಪ ಮೆರೆಯುವುದನ್ನು ನಿಲ್ಲಿಸಬೇಕು, ಇವರ ದಬ್ಬಾಳಿಕೆ ಎಲ್ಲೆ ಮೀರಿದೆ ಎಂದು ಖಂಡಿಸಿದ್ದರು. ಅದೇ ರೀತಿ ಶ್ರೀನಿವಾಸ್ ಎಂಬುವರು ಸಹ ಜಾಲತಾಣದಲ್ಲಿ ಎಪಿ ಶಂಕರ್ ಅವರ ವರ್ತನೆ ವಿಡಿಯೋ ದೃಶ್ಯಾವಳಿ ವೀಕ್ಷಿಸಿ ಖಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ನೌಕರರು ಹಾಗೂ ನಗರಸಭೆ ಆಯುಕ್ತರ ಮೇಲೆ ದಬ್ಬಾಳಿಕೆ ಎಷ್ಟು ಸರಿ ಎಂದು ಶುಕ್ರವಾರ ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.