(ರಾಜ್ಯಕ್ಕೆ ಮುಖ್ಯ) ಆಪ್ತರ ಭ್ರಷ್ಟಾಚಾರ, ಸಿದ್ದರಾಮಯ್ಯರಿಗೆ ಶೋಭೆಯಲ್ಲ: ಪ್ರಕಾಶ್‌ ರಾಜ್

KannadaprabhaNewsNetwork |  
Published : Jan 09, 2026, 02:45 AM IST
8ಕೆಡಿವಿಜಿ1, 2-ದಾವಣಗೆರೆಯಲ್ಲಿ ಗುರುವಾರ ಕಾಮ್ರೆಡ್‌ ಸುರೇಶ, ಶೇಖರಪ್ಪ, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆವರಗೆರೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಇದು ಅವರಿಗೆ ಶೋಭೆಯಲ್ಲ, ಅವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಇದು ಅವರಿಗೆ ಶೋಭೆಯಲ್ಲ, ಅವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ನಂತರ ಸುದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ ದಾಖಲೆ ವಿಚಾರಕ್ಕೆ ಪ್ರತಿಕ್ರಿಯಿಸಿದರು, ದಾಖಲೆ ಎಲ್ಲರೂ ಮಾಡುತ್ತಾರೆ. ಅರಸು ಅವರ ಕಾಲಘಟ್ಟವೇ ಬೇರೆ ಸಿದ್ದರಾಮಯ್ಯ ಕಾಲಘಟ್ಟವೇ ಬೇರೆ. ಆಡಳಿತದ ಮೇಲೆ ಸಿದ್ದರಾಮಯ್ಯನವರು ಹಿಡಿತ ಇಟ್ಟುಕೊಂಡರೆ ಒಳ್ಳೆಯದು, ಅವರ ಆಪ್ತರ ಮೇಲೆ ಇರುವ ಭ್ರಷ್ಟಾಚಾರದ ಆರೋಪಗಳು ಮುಖ್ಯಮಂತ್ರಿಗೆ ಶೋಭೆಯಲ್ಲ, ಎಲ್ಲವನ್ನು ಸರಿ ಮಾಡಿ ಪಾರದರ್ಶಕವಾಗಿರಲಿ ಎಂದರು.

ಅವರು ಅಹಿಂದ ನಾಯಕರು ಒಳ್ಳೆಯದಾಗಲಿ, ಅಭಿನಂದನೆಗಳು ಎಂದ ಪ್ರಕಾಶ್‌ರಾಜ್ ನಾನು ಬರಿ ಹೊಗಳು ಭಟ್ಟ ಅಲ್ಲ, ಪ್ರಶ್ನೆಯನ್ನು ಕೇಳುತ್ತೇನೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ನಾನು ನಿರಂತರ ವಿರೋಧ ಪಕ್ಷ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕ ವಿದ್ಯುತ್‌ ಪೂರೈಸಲು ಆಗ್ರಹಿಸಿ ಪುಣಭಘಟ್ಟ ಗ್ರಿಡ್‌ಗೆ ರೈತರ ಮುತ್ತಿಗೆ
ಎಲ್ಲ ಜನಾಂಗದವರಿಗೂ ಸಮಾನ ಅವಕಾಶ: ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ