-ಬಿಳ್ಹಾರ್, ಹೊನಗೇರಾ, ಹಾಲಗೇರಾ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರಕ್ಕೆ ಚೆಕ್ ನೀಡಿ ವಿನೂತನ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯ ಸರ್ಕಾರದಿಂದ ರೈತರಿಗೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಲಾಗಿದೆ ಎಂದು ಆರೋಪಿಸಿ, ಬಿಳ್ಹಾರ್, ಹೊನಗೇರಾ ಮತ್ತು ಹಾಲಗೇರಾ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರಲ್ಲದೆ, ಸರ್ಕಾರದಿಂದ ತಮಗೆ ದೊರೆತ ಪರಿಹಾರದ ಚೆಕ್ ಜತೆಗೆ, ₹500 ಹೆಚ್ಚುವರಿ ಹಣ ಸೇರಿಸಿ, ಸರ್ಕಾರಕ್ಕೇ ತಮ್ಮದೊಂದು ಚೆಕ್ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಬಿಳ್ಹಾರದ ರೈತ ಸದಾಶಿವರೆಡ್ಡಿ ಪಾಟೀಲ ಅವರು ತಮಗೆ ಬಂದಿದ್ದ ₹1500 ಚೆಕ್ ಬದಲಿಗೆ ₹500 ಸೇರಿಸಿ, ಒಟ್ಟು ₹2 ಸಾವಿರ ಚೆಕ್ ಅನ್ನು ಸರ್ಕಾರಕ್ಕೆ ಕಳುಹಿಸಿ ಎಂದು ಜಿಲ್ಲಾಡಳಿತದ ಪರವಾಗಿ ಮನವಿ ಸ್ವೀಕರಿಸಲು ಆಗಮಿಸಿದ ಅಧಿಕಾರಿಗೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ರೈತರು ದಿಕ್ಕಾರದ ಘೋಷಣೆಗಳ ಕೂಗಿದರು.,
ಈ ಪರಿಹಾರ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಾಗಿದೆ. ಈ ಪರಿಹಾರ ಹಣ ನಮಗೆ ಬೇಡ ಇದರ ಬದಲು ಪ್ರತಿ ಎಕರೆಗೆ ₹25 ಸಾವಿರ ರೂಪಾಯಿ ಹಣ ಪಾವತಿ ಮಾಡಬೇಕು. ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಅನ್ನದಾತರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕೆಂದು ರೈತರು ಆಗ್ರಹಿಸಿದರು.
....ಬಾಕ್ಸ್...
ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವಾಗಬೇಕಾದ ರಾಜ್ಯ ಸರ್ಕಾರವೇ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ. ಮುಖ್ಯಮಂತ್ರಿಗಳು ಘೋಷಿಸಿದಂತೆ ಮೊದಲನೇ ಕಂತಿನ ₹2,500 ಪರಿಹಾರ ನೀಡುವ ಬದಲು ರೈತರ ಬ್ಯಾಂಕ್ ಖಾತೆಗಳಿಗೆ ₹1,500ರಿಂದ ₹2,000 ಮಾತ್ರ ಜಮೆ ಮಾಡಲಾಗಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಉಂಟಾದ ಬರ ಪರಿಸ್ಥಿತಿಯಿಂದ ಯಾದಗಿರಿ ಜಿಲ್ಲೆಯಲ್ಲಿ 1.19 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 1,06,462 ಅರ್ಹ ರೈತರಿಗೆ ಒಟ್ಟು ₹17.43 ಕೋಟಿ ಇನ್ಪುಟ್ ಸಬ್ಸಿಡಿ ಪರಿಹಾರ ಅನುದಾನ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ ಎಂದರು.
----
ರೈತರಿಗೆ ಘೋಷಿಸಿದ ಪೂರ್ಣ ಪರಿಹಾರ ಮೊತ್ತವನ್ನು ಯಾವುದೇ ವಿಳಂಬವಿಲ್ಲದೆ ಜಮೆ ಮಾಡಬೇಕು. ಪರಿಹಾರ ವಿತರಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ರೈತರಿಗೆ ಆಗಿರುವ ಅನ್ಯಾಯವನ್ನು ತಕ್ಷಣ ನಿವಾರಿಸಬೇಕು. ಈ ಕುರಿತು ರಾಜ್ಯ ಸರ್ಕಾರ ವಾರದೊಳಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸದಿದ್ದರೆ ರೈತರ ಪರವಾಗಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಸೈದಾಪುರ, ಮಲ್ಲೇಶ್ ಪಸಪೂಲ್, ಹಣಮಂತ ವರ್ಕನಳ್ಳಿ, ಶಿವಕುಮಾರ್ ಯಾದಗಿರಿ, ಮಹೇಶ್ ಯಾದಗಿರಿ ಉಪಸ್ಥಿತರಿದ್ದರು.
11ವೈಡಿಆರ್11 : ರಾಜ್ಯ ಸರ್ಕಾರದಿಂದ ರೈತರಿಗೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಲಾಗಿದೆ ಎಂದು ಆರೋಪಿಸಿ, ಯಾದಗಿರಿಯ ಬಿಳ್ಹಾರ್, ಹೊನಗೇರಾ ಮತ್ತು ಹಾಲಗೇರಾ ಗ್ರಾಮಗಳ ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರಲ್ಲದೆ, ಸರ್ಕಾರದಿಂದ ತಮಗೆ ದೊರೆತ ಪರಿಹಾರದ ಚೆಕ್ ಜತೆಗೆ, ₹500 ಹೆಚ್ಚುವರಿ ಹಣ ಸೇರಿಸಿ, ಸರ್ಕಾರಕ್ಕೇ ತಮ್ಮದೊಂದು ಚೆಕ್ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
-11ವೈಡಿಆರ್12 : ಬರ ಪರಿಹಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.