ವಿಎಸ್‌ಎಸ್‌ಎಮ್‌ನಲ್ಲಿ ಹಣ ದುರ್ಬಳಕೆ ಆರೋಪ

KannadaprabhaNewsNetwork |  
Published : Sep 17, 2026, 01:45 AM IST
ಮಾಗಡಿ ತಾಲ್ಲೂಕಿನ ವೀರೇಗೌಡನ ದೊಡ್ಡಿ ವಿಎಸ್‌ಎಸ್‌ಎನ್ ವಾರ್ಷಿಕ ಸಭೆಯಲ್ಲಿ ಹಣ ದುರುಪಯೋಗ ಹಾಗೂ ಇತರ‌ ವಿಷಯಗಳ ಬಗ್ಗೆ ಸಭೆಯಲ್ಲಿ ಮಾತಿನ ಸಮರ ನಡೆಯುತ್ತಿರುವುದು. | Kannada Prabha

ಸಾರಾಂಶ

ವೀರೇಗೌಡನದೊಡ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 23 ಲಕ್ಷ ರು. ದುರುಪಯೋಗವಾಗಿದೆ ಎಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಂಘದ ವಾರ್ಷಿಕ ಮಹಾಸಭೆ ಮುಂದೂಡಲಾಯಿತು. ಮರಣ ಹೊಂದಿರುವ ರೈತರ ಹೆಸರಲ್ಲಿ ಮಾಡಿರುವ ಸಾಲ ನವೀಕರಣ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಕರೆಸಿ, ದಾಖಲೆ ಸಮೇತ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ವೀರೇಗೌಡನದೊಡ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 23 ಲಕ್ಷ ರು. ದುರುಪಯೋಗವಾಗಿದೆ ಎಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಂಘದ ವಾರ್ಷಿಕ ಮಹಾಸಭೆ ಮುಂದೂಡಲಾಯಿತು.

ಸಂಘದ ಆವರಣದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ರೈತರು ಹಾಗೂ ಸದಸ್ಯರು ಸಂಘಕ್ಕೆ ಪಾವತಿಸಿರುವ ಹಣ ಬ್ಯಾಂಕ್‌ಗೆ ಜಮೆ ಮಾಡದೆ ದುರ್ಬಳಕೆ ಮಾಡಲಾಗಿದೆ. ಕಳೆದ ಹಲವು ವರ್ಷಗಳ ಆಡಿಟ್ ವರದಿ ಹಾಗೂ ಹಣಕಾಸಿನ ವ್ಯವಹಾರಗಳ ಸಂಪೂರ್ಣ ಮಾಹಿತಿ ನೀಡಬೇಕು. ಮರಣ ಹೊಂದಿರುವ ರೈತರ ಹೆಸರಲ್ಲಿ ಮಾಡಿರುವ ಸಾಲ ನವೀಕರಣ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಕರೆಸಿ, ದಾಖಲೆ ಸಮೇತ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಮಂಚನಬೆಲೆ ಲೋಕೇಶ್ ಮಾತನಾಡಿ, ಸದಸ್ಯರು ಹಾಗೂ ರೈತರು ಹಲವು ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದ್ದು, ಮತ್ತೊಮ್ಮೆ ಸಾಮಾನ್ಯ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸಂಘದ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ 23 ಲಕ್ಷ ದುರ್ಬಳಕೆ ಆರೋಪಗಳು ಕೇಳಿಬಂದಿದ್ದು, ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳಿಂದ ಅಗತ್ಯ ಮಾಹಿತಿ ಹಾಗೂ ದಾಖಲೆ ಪಡೆದು, ಮುಂದಿನ ಸಭೆಯ ದಿನಾಂಕ ನಿಗದಿಪಡಿಸಿ ಮಾಹಿತಿ ನೀಡಲಾಗುವುದು. ಅಲ್ಲಿಯವರೆಗೆ ಸಂಘದ ವ್ಯವಹಾರಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಅಧ್ಯಕ್ಷರು ಭವರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ವಿಶ್ವಕರ್ಮ ಮಹೋತ್ಸವ ಆಚರಣೆಗೆ ಸಿದ್ಧತೆ
ರೈಲ್ವೆ ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ ಆರೋಪ