ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘವು ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸಕಾಲದಲ್ಲಿ ಸಂಘದ ನವೀಕರಣವನ್ನಾಗಲೀ, ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಸರ್ಕಾರ 2022ರ ಮೇ 26ರಂದು ಸಂಘಕ್ಕೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಕ್ರಮಕೈಗೊಂಡಿತ್ತು. ಈ ಹಿನ್ನೆಲೆ ಹಿಂದಿನ ಯಾವ ಪದಾಧಿಕಾರಿಗಳು, ಸದಸ್ಯರು ಲೆಟರ್ ಹೆಡ್ ಬಳಸಬಾರದು, ಆಡಳಿತಾಧಿಕಾರಿ ಮಾತ್ರ ವ್ಯವಹರಿಸಬೇಕು ಎಂಬ ನಿಯಮ ವಿಧಿಸಲಾಗಿತ್ತು. ಆದರೆ ನಾಗಣ್ಣ ಅವರು ಇಲ್ಲಿತನಕ ಹಲವು ಇಲಾಖಾಧಿಕಾರಿಗಳಿಗೆ ಸಂಘದ ಲೆಟರ್ ಹೆಡ್ ತಾವೇ ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸಂಘಕ್ಕೆ ನಿಯಮಾನುಸಾರ ಚುನಾವಣೆ ನಡೆದು ನಾನು ಸೇರಿದಂತೆ 5 ಮಂದಿ ಪದಾಧಿಕಾರಿಗಳು ಆಯ್ಕೆಯಾಗಿದ್ದರು ಸಹಾ ನಾಗಣ್ಣ ಅವರು ನಿಯಮ ಮೀರಿ ಚಟುವಟಿಕೆ ನಡೆಸಿ ಸಂಘದ ನಿರ್ದೇಶಕರೆಂದು ಹಾಗೂ ಸಂಘದ ಆಸ್ತಿ ನಿರ್ವಹಣಾ ಸಮಿತಿಯ ಸದಸ್ಯನೆಂದು ಸಮಾಜ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕರಿಗೆ ಪತ್ರ ಬರೆದು ನಿಯಮ ಉಲ್ಲಂಘಿಸಿದ್ದು ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ.ಮಾಜಿ, ಹಾಲಿ ಪದಾಧಿಕಾರಿಗಳ ಮುಸುಕಿನ ಗುದ್ದಾಟ:
ಡಾ.ಅಂಬೇಡ್ಕರ್ ಸ್ಮಾರಕ ಸಂಘದ ಗದ್ದುಗೆ ಹಾಗೂ ಇನ್ನಿತರೆ ವಿಚಾರಗಳಿಗಾಗಿ ಹಾಲಿ ಹಾಗೂ ಮಾಜಿ ಸಂಘದ ಪದಾಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಹಾಗೂ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.ನೂತನವಾಗಿ ಅಂಬೇಡ್ಕರ್ ಸಂಘಕ್ಕೆ ಪದಾಧಿಕಾರಿಗಳು ಪದಗ್ರಹಣಕ್ಕೆ ಅಂಬೇಡ್ಕರ್ ಭವನ ಸ್ಥಳ ನಿಗದಿ ಮಾಡುತ್ತಿದ್ದಂತೆ ನಾಗಣ್ಣ ಬಣದ ಕೆಲವರು ವಿರೋಧಿಸಿ ಇಲ್ಲಿ ಕಾರ್ಯಕ್ರಮ ನಡೆಸಿದರೆ ಮುಂದಾಗುವ ಅನಾಹುತಕ್ಕೆ ಸಮಾಜ ಕಲ್ಯಾಣಾಧಿಕಾರಿಗೆಳೇ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಪತ್ರಿಕಾ ಹೇಳಿಕೆಗೆ ಹಾಲಿ ಸಂಘದ ಪದಾಧಿಕಾರಿಗಳು ಲೆಕ್ಕಿಸದೆ ಕಾರ್ಯಕ್ರಮವನ್ನು ಶಾಸಕರ ಸಮ್ಮುಖದಲ್ಲಿಯೇ ಅದ್ಧೂರಿಯಾಗಿ ನಡೆಸಿ ಗಮನ ಸೆಳೆದರು. ಬಳಿಕ ಈಗಿನ ಸಂಘದ ಚುನಾವಣೆ ಅಸಿಂಧು, ನಾನೇ ಹಾಲಿ ನಿರ್ದೇಶಕ, ಸಂಘದ ಚುನಾವಣೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವೆ ಎಂದು ನಾಗಣ್ಣ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದರು.
ಏತನ್ಮದ್ಯೆ ಹಾಲಿ ಅಧ್ಯಕ್ಷ ಆನಂದ ಮೂರ್ತಿ ಅವರೇ ಖುದ್ದು ಈಗ ನಾಗಣ್ಣ ವಿರುದ್ಧ ಲೆಟರ್ ಹೆಡ್ ದುರ್ಬಳಕೆ ದೂರು ನೀಡಿರುವುದನ್ನು ಗಮನಿಸಿದರೆ ಅಂಬೇಡ್ಕರ್ ಸಂಘದ ಬಣದಲ್ಲಿ ಇನ್ನು ಮುಸುಕಿನ ಗುದ್ದಾಟ, ಶೀತಲ ಸಮರ ನಿಂತಿಲ್ಲ ಎಂಬುದು ವೇದ್ಯವಾಗಲಿದ್ದು ಶಾಸಕರು, ಸಚಿವರು ಸಂದೇಶ ನೀಡಿದ್ದಾಗಿಯೂ ಸಹಾ ಮುಸುಕನ ಗುದ್ದಾಟ ಮುಂದುವರೆದಿರುವುದು ನಾನಾ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಹೋರಾಟಗಾರ ನಟರಾಜಮಾಳಿಗೆ ಅಂಬೇಡ್ಕರ್ ಸಂಘದ ಚುನಾವಣೆ ವಿಚಾರದಲ್ಲೂ ಸಹಾ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.