ರೈತಪರ ಹೋರಾಟ ಹತ್ತಿಕ್ಕುವ ಆರೋಪ: ಪ್ರತಿಭಟನೆ

KannadaprabhaNewsNetwork |  
Published : Nov 04, 2026, 01:45 AM IST
ಎಂದು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ರೈತಪರ ಹೋರಾಟಗಾರರನ್ನು ಹತ್ತಿಕ್ಕಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿ, ರೈತ ಹೋರಾಟ ಸಮಿತಿ ಮತ್ತು ರೈತ ಸಂಘದಿಂದ ಸೋಮವಾರ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರಪೇಟೆ : ಜಿಲ್ಲೆಯಲ್ಲಿ ರೈತಪರ ಹೋರಾಟಗಾರರನ್ನು ಹತ್ತಿಕ್ಕಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿ, ರೈತ ಹೋರಾಟ ಸಮಿತಿ ಮತ್ತು ರೈತ ಸಂಘದಿಂದ ಸೋಮವಾರ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅ. 19ರಂದು ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ. ಸುರೇಶ್ ಅವರ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಅಕ್ರಮವಾಗಿ ಮರ ಸಂಗ್ರಹಿಸಿರುವ ಬಗ್ಗೆ ದೂರು ಬಂದಿರುವುದಾಗಿ, ದಾಳಿ ನಡೆಸಿದ್ದರು. ದಾಳಿ ನಡೆಸಿದ ಸಂದರ್ಭ ಮನೆಯಲ್ಲಿ ಯಾವುದೇ ಮರ ಸಂಗ್ರಹಣೆ ಮಾಡಿರುವುದು ಕಂಡುಬಂದಿಲ್ಲ. ಈ ಸಂಬಂಧ ನೋಟಿಸು ನೀಡದೆ ಮನೆಗೆ ಅಕ್ರಮ ಪ್ರವೇಶ ಮತ್ತು ಸಿಬ್ಬಂದಿಗಳು ಸಮವಸ್ತ್ರ ಧರಿಸದೆ ದಾಳಿ ಮಾಡಿ, ಹೆಂಡತಿ ಮತ್ತು ಮಗನಿಗೆ ನಿಂದಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ದೂರು ನೀಡಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಸಂದರ್ಭ, ರೈತರು ಅರಣ್ಯ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ಹೋರಾಟದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 300ಕ್ಕೂ ಹೆಚ್ಚು ರೈತರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ, ಸ್ಥಳಕ್ಕೆ ಡಿಎಫ್‌ಓ ಬರುವಂತೆ ಆಗ್ರಹಿಸಿ ಕಚೇರಿಗೆ ಬೀಗ ಜಡಿಯಲು ಮುಂದಾದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಅವರ ಮನವೊಲಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ದಾಳಿ ಉಸ್ತುವಾರಿ ಆರ್‌ಎಫ್‌ಓ ಪೂಜಾ ಮಾತನಾಡಿ, ನಮಗೆ ಮಡಿಕೇರಿ ಅರಣ್ಯ ಸಂಚಾರಿ ದಳಕ್ಕೆ ದೂರುನೀಡಿದ್ದಾರೆ. ಈ ಸಂಬಂಧ ನಮ್ಮನ್ನು ಸಂಪರ್ಕಿಸಿ ಅವರು ನಾವು ಸರ್ಚ್ ವಾರೆಂಟ್ ಸಿದ್ದಪಡಿಸಿ ಕೆ.ಬಿ. ಸುರೇಶ್ ಮನೆಗೆ ಹೋಗಿರುತ್ತೇವೆ, ಅವರಿಗೆ ಕರೆ ಮಾಡಿ ಅವರು ಇಲ್ಲದಿದ್ದ ಸಂದರ್ಭ ಅವರ ಪತ್ನಿಗೆ ನೋಟಿಸ್ ನೀಡಿ ಮನೆ ಪರಿಶೀಲನೆ ನಡೆಸಿದ್ದೇವೆ. ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಮರಗಳು ಕಂಡು ಬಂದಿರುವುದಿಲ್ಲ ಎಂದು ತಿಳಿಸಿದರು.

ನಂತರ ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಮಾತನಾಡಿ ಇದೆಲ್ಲವೂ ಅಧಿಕಾರಿಗಳು ಮಾಡುತ್ತಿರುವ ಕುತಂತ್ರ. ಈ ದಾಳಿಯ ಹಿಂದೆ ಯಾರ ಕೈವಾಡ ಇದೆ ಎಂದು ರೈತರ ಸಮ್ಮುಖದಲ್ಲಿ ಅಧಿಕಾರಿಗಳು ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಕೆ.ಬಿ. ಸುರೇಶ್ ಮಾತನಾಡಿ, ಈ ವಿಚಾರವಾಗಿ ಏಳು ದಿನ ಗಡುವು ನೀಡಲಾಗಿದೆ. ಇದರ ಒಳಗೆ ಕ್ರಮ ಕೈಗೊಳ್ಳದೆ ಹೋದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ದೀಪಕ್ ಮಾತನಾಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ, ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿ, ಶುಂಟಿ ಭರತ್, ಹಾನಗಲ್ಲು ಮಿಥುನ್, ಕೂತಿ ದಿವಾಕರ, ಪವನ್ ಗೌಡ, ಹಾಗು ಗ್ರಾಮಗಳ ಅಧ್ಯಕ್ಷರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು. ಅರಣ್ಯ ಇಲಾಖೆಯ ಆರ್‌ಎಫ್‌ಓ ಮಲ್ಲೇಶ್. ಡಿಆರ್‌ಎಫ್‌ಓ ಗಳಾದ ಪ್ರಶಾಂತ್. ಶ್ರವಣ್ ಕುಮಾರ್. ಚಂದ್ರ ಶೇಖರ್. ಪೊಲೀಸ್ ಇಲಾಖೆಯಿಂದ ಡಿ ವೈ ಎಸ್ ಪಿ ಸೂರಜ್. ಇನ್ಸ್ಪೆಕ್ಟರ್ ಗಳಾದ ಮುದ್ದು ಮಹದೇವ. ಪ್ರದೀಪ್. ಕೃಷ್ಣರಾಜ್. ಉಮೇಶ್ ಭೇಟಿ ನೀಡಿದರು.

೦೨ಎಸ್‌ಪಿಟಿ೦೩: ಸೋಮವಾರಪೇಟೆ ಅರಣ್ಯ ಇಲಾಖೆ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌