ರೈತರ ಮನೆಯಂಗಳದಲ್ಲಿ ಮಕ್ಕಳಿಗೆ ಕೃಷಿಪಾಠ

KannadaprabhaNewsNetwork |  
Published : Nov 04, 2026, 01:45 AM IST
ಕಾರ್ಯಕ್ರಮ | Kannada Prabha

ಸಾರಾಂಶ

ನಗರ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಮತ್ತು ಕೃಷಿ ಚಟುವಟಿಕೆಗಳ ನೇರ ಅನುಭವ ನೀಡಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಗ್ರಾಮಾನುಭವ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಪಿ.ಎಂ.ಶ್ರೀ. ಶಾಲೆಯ ಮಕ್ಕಳು ಕುಶಾಲನಗರ ತಾಲೂಕಿನ ಹಾರಂಗಿ ನೀರಾವರಿ ಪ್ರದೇಶದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನ ಹೊಸಳ್ಳಿ ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ರೈತರ ಮನೆಯಂಗಳದಲ್ಲಿ ಕೃಷಿ ಅನುಭವ ಪಡೆದುಕೊಂಡರು.

ಕುಶಾಲನಗರ : ನಗರ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಮತ್ತು ಕೃಷಿ ಚಟುವಟಿಕೆಗಳ ನೇರ ಅನುಭವ ನೀಡಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಗ್ರಾಮಾನುಭವ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಪಿ.ಎಂ.ಶ್ರೀ. ಶಾಲೆಯ ಮಕ್ಕಳು ಕುಶಾಲನಗರ ತಾಲೂಕಿನ ಹಾರಂಗಿ ನೀರಾವರಿ ಪ್ರದೇಶದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನ ಹೊಸಳ್ಳಿ ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ರೈತರ ಮನೆಯಂಗಳದಲ್ಲಿ ಕೃಷಿ ಅನುಭವ ಪಡೆದುಕೊಂಡರು.ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲಾ ವಿಭಾಗ ಹಾಗೂ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ 8, 9 ಮತ್ತು 11 ನೇ ತರಗತಿಯ ಒಟ್ಟು 50 ಮಕ್ಕಳು ಕೃಷಿ ಕುರಿತು ರೈತರಿಂದ ನೇರ ಅನುಭವ ಪಡೆದರು.ನ.1 ರಂದು ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಂತ್ರಿ, ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಕ್ಕಳ ಹಳ್ಳಿ ಭೇಟಿಯ ‘ಗ್ರಾಮಾನುಭವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಕ್ಕಳು ಹಳ್ಳಿಯ ಭೇಟಿಯ ಸಂದರ್ಭದಲ್ಲಿ ಚಿಕ್ಕನಾಯಕಹಳ್ಳಿ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರ ಕೃಷಿ ಅನುಭವಗಳು ಮತ್ತು ಸವಾಲುಗಳನ್ನು ಕೇಳಿ ತಿಳಿದುಕೊಂಡರು.

ಕೃಷಿ ಜೀವನದ ಅನುಭವ ಹಂಚಿಕೊಂಡ ಪ್ರಗತಿಪರ ರೈತ ಟಿ.ಜೆ.ಶೇಷಪ್ಪ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸೂಕ್ತ ಕಾಲದಲ್ಲಿ ವೈಜ್ಞಾನಿಕ ಕ್ರಮದಿಂದ ಕೃಷಿ ಮಾಡಿದರೆ ಖಂಡಿತವಾಗಿಯೂ ಕೃಷಿಯಲ್ಲಿ ಉತ್ತಮ ಲಾಭ ಗಳಿಸಬಹುದು. ಇದರಿಂದ ರೈತರ ಜೀವನಮಟ್ಟ ಸುಧಾರಿಸುವುದರ ಜತೆಗೆ ರಾಷ್ಟ್ರದ ಆಹಾರ ಉತ್ಪಾದನೆಗೆ ತಮ್ಮ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಜೇನು ಕೃಷಿ ಸಮಗ್ರ ಕೃಷಿ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಶಿವಾನಂದ ಮಾತನಾಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ವೈವಿಧ್ಯಮಯ ಬೆಳೆ ತೆಗೆಯುವ ಮೂಲಕ ಕೃಷಿ ಜೀವನದಿಂದ ಹೇಗೆ ಹೆಚ್ಚಿನ ಆದಾಯ ಗಳಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ ಎಂದರು.

ಪ್ರಕೃತಿಯೊಂದಿಗೆ ರೈತನ ಒಡನಾಟ ಕುರಿತು ಕೃಷಿ ಪಾಠ ಹೇಳಿದ ಯುವ ಕೃಷಿಕರೂ ಆದ ಕೃಷಿ ಮಾರ್ಗದರ್ಶಕ ಟಿ.ಯು.ಪುನೀತ್ ಮಾರ್ಗದರ್ಶನ ನೀಡಿದರು.ಪರಿಸರ ಪ್ರೇಮಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಗ್ರಾಮಾನುಭವ ಕುರಿತು ಮಾತನಾಡಿದರು.ಹೆಬ್ಬಾಲೆ ಗ್ರಾಮದ ಪ್ರಗತಿಪರ ಕೃಷಿಕ ಎಚ್.ಆರ್.ಶಿವಪ್ಪ ಅವರ ಕೃಷಿ ಜಮೀನಿಗೆ ಭೇಟಿ ನೀಡಿ ಅಡಿಕೆ ತೋಟ ಮತ್ತು ಹೆಬ್ಬಾಲೆಯ ಎಚ್.ಎನ್.ಬಸಪ್ಪ ಅವರ ತೋಟದಲ್ಲಿ ಕೃಷಿಹೊಂಡ ವೀಕ್ಷಿಸಿದ ತಂಡವು ಹೈನುಗಾರಿಕೆ ಕೃಷಿ ಅನುಭವ ಪಡೆಯಿತು. ನಂತರ ತೊರೆನೂರು ವಿರಕ್ತ ಮಠದ ಕೃಷಿ ಜಮೀನಿನಲ್ಲಿ ಬಾಳೆತೋಟ ಕ್ಕೆ ಭೇಟಿ ನೀಡಿ ಬಾಳೆ ಕೃಷಿ ಹಾಗೂ ಮೆಕ್ಕೆಜೋಳ ಕೃಷಿಯ ಬಗ್ಗೆ ವಿದ್ಯಾರ್ಥಿಗಳು ರೈತರಿಂದ ಮಾಹಿತಿ ಪಡೆದರು.

ಮಧ್ಯಾಹ್ನ ರೈತ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ಮಕ್ಕಳು ಹಳ್ಳಿಯ ಊಟದ ರುಚಿ ಸವಿದು ಖುಷಿಪಟ್ಟರು.

ರೈತರು ಹಾರಂಗಿ ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿರುವ ಕಲ್ಲಂಗಡಿ ತೋಟ, ವಿವಿಧ ಆಹಾರ ಬೆಳೆಗಳು ತೆಂಗು, ಬಾಳೆ, ಭತ್ತ, ರಾಗಿ,ಜೋಳ, ದ್ವಿದಳ ಧಾನ್ಯಗಳು, ತರಕಾರಿ ಸೊಪ್ಪಿನ ಕೃಷಿ , ರೈತರ ಮನೆ ಅಂಗಳದಲ್ಲಿ ಬೆಳೆದಿರುವ ಹೂವಿನ ಹಾಗೂ ಔಷಧೀಯ ಗಿಡಗಳನ್ನು ವೀಕ್ಷಿಸಿ ಅವುಗಳ ಸಂರಕ್ಷಣೆ ಮತ್ತು ಪೋಷಣೆ ಹಾಗೂ ಅವುಗಳಿಂದ ನಮಗೆ ಸಿಗುವ ಪೌಷ್ಟಿಕಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ರೈತರು ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಹೆಬ್ಬಾಲೆಯ ಎಚ್.ಎನ್. ಬಸವಣ್ಣ, ಎಚ್.ಆರ್.ಶಿವಪ್ಪ ಅವರು ಮಕ್ಕಳಿಗೆ ಅಡಿಕೆ ಕೃಷಿ , ಕೃಷಿಹೊಂಡದ ಉಪಯೋಗ ಮತ್ತು ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು.ಮಡಿಕೇರಿ ಸರ್ಕಾರಿ ಪಿಯೂ ಕಾಲೇಜಿನ‌ ಉಪನ್ಯಾಸಕಿ ಕೆ.ಎನ್. ಪಲ್ಲವಿ, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ವಿ.ಶಶಿಕಲಾ, ಶಿಕ್ಷಕಿ ಸುಮ, ಪ್ರಾಥಮಿಕ ಶಾಲಾ ವಿಭಾಗದ ಡಿ.ಶೃತಿಶ್ರೀ, ಎಂ.ಎಸ್.ಪ್ರಿಯ ಮತ್ತಿತರ ಶಿಕ್ಷಕಿಯರು ತಮ್ಮ ವಿದ್ಯಾರ್ಥಿಗಳೊಂದಿಗೆ ಗ್ರಾಮಾನುಭವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌