ಕೆರೆ ತುಂಬಿಸುವ ಯೋಜನೆಗೆ ಅನುದಾನ ನೀಡದ ರಾಜ್ಯ ಸರ್ಕಾರ: ಆರೋಪ

KannadaprabhaNewsNetwork |  
Published : Aug 22, 2025, 01:01 AM IST
ಕೊಟ್ಟೂರು ಕೆರೆಗೆ ಶಾಸಕ ಕೆ ನೇಮರಾಜ ನಾಯ್ಕ್ ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳೊಂದಿಗೆ ಪೂಜೆ ನೆರವೇರಿಸಿ ಬಾಗೀನ ಅರ್ಪಿಸಿದರು | Kannada Prabha

ಸಾರಾಂಶ

ರಾಜ್ಯ ಸರ್ಕಾರಕ್ಕೆ ಅನುದಾನದ ಕೊರತೆ ಬಾಧಿಸುತ್ತಿದ್ದು, ಇದರಿಂದಾಗಿ ಸರ್ಕಾರ ಕಣ್ಣು, ಕಿವಿ, ಎಲ್ಲವನ್ನು ಬಂದ್ ಮಾಡಿಕೊಂಡು ಕುಳಿತಿದೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೊಟ್ಟೂರು ಕೆರೆ ಸೇರಿದಂತೆ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹600 ಕೋಟಿ ಯೋಜನೆ ಪ್ರಸ್ತಾಪವನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿರುವೆ. ರಾಜ್ಯ ಸರ್ಕಾರ ತನ್ನ ಪಾಲಿನ ₹300 ಕೋಟಿ ಅನುದಾನ ನೀಡಲು ಸಿದ್ಧವಿಲ್ಲದ ಕಾರಣಕ್ಕಾಗಿ ಈ ಯೋಜನೆಗೆ ಕೇಂದ್ರದಿಂದ ₹300 ಕೋಟಿ ಅನುದಾನ ತರುವ ಕಾರ್ಯ ನಿಂತಿದೆ ಎಂದು ಶಾಸಕ ಕೆ. ನೇಮರಾಜ ನಾಯ್ಕ ಹೇಳಿದರು.

ಇಲ್ಲಿನ ಕೆರೆಗೆ ಕೋಡಿ ಬಿದ್ದಿರುವ ಹಿನ್ನೆಲೆ ಉಜ್ಜಯನಿ ಜಗದ್ಗುರುಗಳೊಂದಿಗೆ ಬಾಗಿನ ಅರ್ಪಣೆ, ನೂತನ ಕೆರೆ ದೇವಸ್ಥಾನದ ಅಡಿಗಲ್ಲು ಮತ್ತು ಕೆರೆ ಬೋಮ್ಮಮ್ಮರಿಗೆ ಪೂಜೆ ಸಲ್ಲಿಸಿ ನಂತರ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರಕ್ಕೆ ಅನುದಾನದ ಕೊರತೆ ಬಾಧಿಸುತ್ತಿದ್ದು, ಇದರಿಂದಾಗಿ ಸರ್ಕಾರ ಕಣ್ಣು, ಕಿವಿ, ಎಲ್ಲವನ್ನು ಬಂದ್ ಮಾಡಿಕೊಂಡು ಕುಳಿತಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ಈ ಹಿಂದೆ ಪಕ್ಕದ ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಾಗಿ ಕೊಟ್ಟೂರು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಯೋಜನೆಯ ಪೈಪ್ ಪ್ಲಾನ್ ಹಾದು ಹೋಗಿರುವುದರಿಂದ ಈ ಮಾರ್ಗದಿಂದಲೇ ಕನಿಷ್ಠ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸಬಹುದಿತ್ತು. ಈ ಕುರಿತು ಆಗಿನ ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಕಾರ್ಯರೂಪ ಪಡೆಯಲಿಲ್ಲ. ಹಾಲಿ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಬೇಕಂದು ಮನವಿ ಮಾಡಿದರು.

ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಉಜ್ಜಯನಿ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸಣ್ಣ ನೀರಾವರಿ ಇಲಾಖೆಯ ಎಇಇ ಆರ್. ವೆಂಕಟೇಶ್ ಮಾತನಾಡಿದರು.

ಮುಖಂಡರಾದ ಎಂಎಂಜೆ ಶೋಭಿತ್, ಜಿ. ಕಾರ್ತಿಕ್, ಸಂತೋಷ ಅಟವಾಳಿಗೆ, ಅಡಿಕೆ ಮಂಜುನಾಥ, ಗುರುಸಿದ್ದನಗೌಡ, ನಾಗರಾಜಗೌಡ, ವೀರೇಶಗೌಡ, ಬಿಎಸ್ಆರ್ ಮೂಗಣ್ಣ, ಮೈದೂರು ವಿಶ್ವನಾಥ, ರುದ್ರಮ್ಮ ಜೋಗತಿ ಮತ್ತಿತರರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ