ವಿದ್ಯುತ್‌ ಪ್ರಸರಣ ಕಂಪನಿಯಿಂದ ಮರಗಳ ಮಾರಣಹೋಮ ಆರೋಪ: ರೈತ ಸಂಘ ಪ್ರತಿಭಟನೆ

KannadaprabhaNewsNetwork |  
Published : Feb 23, 2025, 12:36 AM IST
ರೈತಸಂಘ ಪ್ರತಿಭಟನೆ | Kannada Prabha

ಸಾರಾಂಶ

ವೀರಕಂಭ ಗ್ರಾಮದ ಕೆಲಿಂಜದ ಬಲ್ಲಮಲೆ ಅರಣ್ಯ ಇಲಾಖೆಗೆ ಸೇರಿದ ಸಿರಿ ಚಂದನ ವನದಲ್ಲಿರುವ ಚಂದನ ಮರಗಳ ಸಹಿತ ಲಕ್ಷಾಂತರ ರು. ಬೆಲೆಬಾಳುವ ಗುಣಮಟ್ಟದ ಮರಗಳನ್ನು ವಿದ್ಯುತ್ ಪ್ರಸರಣದ ಖಾಸಗಿ ಕಂಪನಿಯೊಂದು ಮರಗಳ ಕಡಿದು ಮಾರಣಹೋಮ ಮಾಡಿದೆ ಎಂಬ ಆರೋಪ ಮಾಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕೆಲಿಂಜದಲ್ಲಿ ಕಂಪನಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪೂರೈಕೆಗಾಗಿ ಗುತ್ತಿಗೆ ವಹಿಸಿಕೊಂಡ ಖಾಸಗಿ ಕಂಪನಿ, ಕೆಲಿಂಜ ಬಲ್ಲಮಲೆ ಅರಣ್ಯ ಇಲಾಖೆಗೆ ಸೇರಿದ ಗುಡ್ಡೆಯಲ್ಲಿ ಟವರ್ ನಿರ್ಮಾಣದ ಕಾಮಗಾರಿ ಆರಂಭಿಸಿದೆ.ಟವರ್ ನಿರ್ಮಾಣದ ವೇಳೆ ಲಕ್ಷಾಂತರ ರು. ಬೆಲೆ ಬಾಳುವ ಗುಣಮಟ್ಟದ ಮರಗಳನ್ನು ಸಾಯಿಸಿ ಪಕೃತಿ ಮೇಲೆ ಪ್ರಭಾವ ಬೀರಿದೆ ಎಂದು ಆರೋಪ ಮಾಡಿದ ರೈತ ಸಂಘ, ರಸ್ತೆಯನ್ನು ಕಡಿದು ಕಾಮಗಾರಿಗೆ ತಡೆಯೊಡ್ಡಿರುವ ಘಟನೆ ನಡೆದಿದೆ.ಟವರ್ ಕಾಮಗಾರಿಗಾಗಿ ಕೆಲಿಂಜ ಬಲ್ಲಮಲೆ ಗುಡ್ಡದಲ್ಲಿ ನಿರ್ಮಿಸಿಲಾದ ರಸ್ತೆಯನ್ನು ರೈತ ಸಂಘದವರು ಅಗೆದು ಸಂಪರ್ಕವನ್ನು ಕಡಿತಗೊಳಿಸಿದರು. ಕಂಪನಿಯ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ಕೂಡ ನಡೆಸಲಾಗಿದೆ. ಆದರೆ ಪೊಲೀಸ್ ಇಲಾಖೆಯವರ ಸಹಕಾರ ಪಡೆದ ಕಂಪನಿ ಇದೀಗ ರಸ್ತೆಯನ್ನು ರಿಪೇರಿ ಮಾಡಿ ಮತ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.

ಈ ಯೋಜನೆಗಾಗಿ ಕೆಲಿಂಜ ಪರಿಸರದಲ್ಲಿ ಬೆಳೆಬಾಳುವ ಮರಗಳನ್ನು‌ ಕಡಿಯಲಾಗಿದೆ. ಕಾಡನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಆರೋಪಿಸಿದ್ದಾರೆ.

ಜಮೀನು ಕಳೆದುಕೊಳ್ಳುವ ಕೃಷಿಕರಿಗೆ ಯಾವುದೇ ‌ನೋಟಿಸ್ ನೀಡದೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ರಾಜಕೀಯ ಜನಪ್ರತಿನಿಧಿಗಳು‌ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡ ಸಹಕಾರ ನೀಡುವುದು ಬೇಸರದ ವಿಚಾರ. ಬಡವರ ಕೃಷಿ ಭೂಮಿಯನ್ನು ಕಸಿದು ತಿನ್ನುವ ಕಂಪನಿಯಿಂದ ರೈತರು ಭಯದಿಂದ ಬದುಕುವಂತಾಗಿದೆ ಎಂದು ಅವರು ಹೇಳಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ