ಕೆ.ಎಂ.ಸುರೇಶ್ ಪರ ಮೈತ್ರಿ ಮುಖಂಡರಿಂದ ಮತಯಾಚನೆ

KannadaprabhaNewsNetwork |  
Published : Oct 18, 2026, 02:15 AM IST
ಗುಬ್ಬಿ ಪಟ್ಟಣದ  ಎಸ್ಎಲ್ ವಿ ಕಂಫರ್ಟ್ ಸಭಾಂಗಣದಲ್ಲಿ ಮತದಾರರ ಸಭೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮುಖಂಡರು ಮತಯಾಚನೆ ಮಾಡಿದ  ಅಭ್ಯರ್ಥಿ ಕೆ.ಎಂ.ಸುರೇಶ್  | Kannada Prabha

ಸಾರಾಂಶ

ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಕಳೆದ 30 ವರ್ಷದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಕೆ.ಎಂ.ಸುರೇಶ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಉದ್ಯೋಗ ಸಮಸ್ಯೆ, ಪದವೀಧರರ ಸಂಕಷ್ಟ ಬಗೆಹರಿಸುವ ನಿಟ್ಟಿನಲ್ಲಿ ಭರವಸೆಯ ವ್ಯಕ್ತಿಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳನ್ನು ಅವರಿಗೆ ಮೊದಲ ಪ್ರಾಶಸ್ತ್ಯ ರೀತಿಯಲ್ಲಿ ಕೊಡೋಣ ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಪಟ್ಟಣದ ಎಸ್ಎಲ್ ವಿ ಕಂಫರ್ಟ್ ಸಭಾಂಗಣದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಪದವೀಧರ ಮತದಾರರ ಸಭೆ ನಡೆಸಿ ಆಗ್ನೇಯ ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಪ್ರಚಾರ ಮಾಡಿ ಮತಯಾಚಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಈಗಾಗಲೇ ಜನರಿಗೆ ಬೇಸರ ತಂದಿದೆ. ನಮ್ಮ ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಪದವೀಧರ ಮತದಾರರು ತಮ್ಮ ಬುದ್ಧಿವಂತಿಕೆಯನ್ನು ಈ ಆಗ್ನೇಯ ಪದವೀಧರ ಚುನಾವಣೆಯಲ್ಲಿ ತೋರಬೇಕು. 3800ಕ್ಕೂ ಅಧಿಕ ಮತಗಳು ತಾಲೂಕಿನಲ್ಲಿದೆ. ಈ ಪೈಕಿ ನಗರ ಮತ್ತು ಕಸಬಾ ಹೋಬಳಿ 1200 ಮತ ಹೊಂದಿದೆ. ಆಲೋಚಿಸಿ ಮೊದಲ ಪ್ರಾಶಸ್ತ್ಯ ಮತವನ್ನು ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಶೇ. 50ಕ್ಕೂ ಅಧಿಕ ಮತಗಳು ಶಿಕ್ಷಕದ್ದಾಗಿವೆ. ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರ ತಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ತೋರಿದೆ. ಹಿಂದಿನ ಬಾಗಿಲಲ್ಲಿ ಲೂಟಿ ಮಾಡುವ ಈ ಕಾಂಗ್ರೆಸ್ ಸರ್ಕಾರ ವೈಫಲ್ಯಕ್ಕೆ ಉತ್ತರವನ್ನು ಈ ಚುನಾವಣೆಯಲ್ಲಿ ಮತದಾರರು ಕೊಡಲಿದ್ದಾರೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಕಳೆದ 30 ವರ್ಷದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಕೆ.ಎಂ.ಸುರೇಶ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಉದ್ಯೋಗ ಸಮಸ್ಯೆ, ಪದವೀಧರರ ಸಂಕಷ್ಟ ಬಗೆಹರಿಸುವ ನಿಟ್ಟಿನಲ್ಲಿ ಭರವಸೆಯ ವ್ಯಕ್ತಿಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳನ್ನು ಅವರಿಗೆ ಮೊದಲ ಪ್ರಾಶಸ್ತ್ಯ ರೀತಿಯಲ್ಲಿ ಕೊಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಉಮಾ ಮಹೇಶ್, ಶಂಕರ್, ಡಿ.ರಘು, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಚೇತನ್ ನಾಯಕ್, ಯುವಮೋರ್ಚಾ ವಿಶ್ವನಾಥ್, ಜೆಡಿಎಸ್ ಶಿವಾನಂದ್, ಎಚ್.ಎನ್.ಲೋಕೇಶ್, ಉದಯ್, ಲೋಕೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗೆ ಅರಸೀಕೆರೆಯಲ್ಲಿ ಪರದಾಟ
ನವರಾತ್ರಿ ಅನ್ನ ಸಂತರ್ಪಣೆಗೆ ಹರಿದು ಬರುತ್ತಿರುವ ಹೊರೆ ಕಾಣಿಕೆ