ಕಸಾಪಕ್ಕೆ ₹ 35 ಕೋಟಿ ಅನುದಾನ ಮೀಸಲಿಡಿ

KannadaprabhaNewsNetwork | Published : Feb 6, 2025 11:45 PM

ಸಾರಾಂಶ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ವಾರ್ಷಿಕ ಅನುದಾನವಾಗಿ 35 ಕೋಟಿ ಮೀಸಲಿಡಬೇಕು ಎಂದು ಕಸಾಪ ಪದಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಗೆ ಗುರುವಾರ ಸಲ್ಲಿಸಿದರು.

ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಸಚಿವ ಶಿವರಾಜ ತಂಗಡಗಿಗೆ ಪದಾಧಿಕಾರಿಗಳ ಮನವಿಕನ್ನಡಪ್ರಭ ವಾರ್ತೆ ಕಾರಟಗಿ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ವಾರ್ಷಿಕ ಅನುದಾನವಾಗಿ ₹35 ಕೋಟಿ ಮೀಸಲಿಡಬೇಕು ಎಂದು ಕಸಾಪ ಪದಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಗೆ ಗುರುವಾರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ನೇತೃತ್ವದಲ್ಲಿ ಪದಾಧಿಕಾರಿಗಳು ತಂಗಡಗಿ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಪ್ರಸಕ್ತ ಬಜೆಟ್‌ನಲ್ಲಿ ಕಸಾಗೆ ಒಟ್ಟು ₹35 ಕೋಟಿ ಅನುದಾನ ನೀಡುವಂತೆ ಮೊದಲು ಕೇಳಿಕೊಳ್ಳಲಾಗಿದೆ. 2017-18ರಲ್ಲಿ ₹12 ಕೋಟಿ ಅನುದಾನ ನೀಡಿದ್ದು, ಪ್ರಸ್ತುತ ಸಂದರ್ಭಕ್ಕೆ ಬೆಲೆ ಏರಿಕೆ ಪರಿಗಣಿಸಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಕೋರಿದ್ದಾರೆ.

ಪರಿಷತ್ತಿನ ವ್ಯಾಪ್ತಿ ಕೂಡಾ ವಿಸ್ತಾರವಾಗಿದ್ದು, ಜಿಲ್ಲಾಮಟ್ಟ ಮಾತ್ರವಲ್ಲದೇ ತಾಲೂಕಾ, ಹೋಬಳಿ ಮಟ್ಟದಲ್ಲೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಪರಿಷತ್ತಿನ ನಿರ್ವಹಣೆ, ಪುಸ್ತಕ ಪ್ರಕಟಣೆ, ವಿಚಾರ ಸಂಕೀರ್ಣ, ಕಾರ್ಯಾಗಾರಗಳು, ಸ್ಥಗಿತಗೊಂಡಿರುವ ನಿಘಂಟು ಯೋಜನ ಮುಂದುವರಿಕೆ ಸೇರಿ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ₹35 ಕೋಟಿ ಅನುದಾನದ ಅಗತ್ಯವಿದೆ. ಆ ಕಾರಣಕ್ಕೆ ಮಾರ್ಚ್‌ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಈ ಮೊತ್ತವನ್ನು ಕಾಯ್ದಿರಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸೃತಿ ಸಚಿವ ಶಿವರಾಜ ತಂಗಡಗಿಯವರು ಮುಖ್ಯಮಂತ್ರಿಗೆ ನಮ್ಮ ಪ್ರಸ್ತಾವನೆ ಮುಟ್ಟಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷರುಗಳಾದ ಶರಣಪ್ಪ ಕೋಟ್ಯಾಳ, ಮೆಹಬೂಬ್ ಹುಸೇನ, ರುದ್ರೇಶ ಆರಾಳ, ಜಿಲ್ಲಾ ಸಂ.ಕಾರ್ಯದರ್ಶಿ ಮಹೇಶ್ ಸಿಂಗನಾಳ, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ, ಬಸವರಾಜ್ ರ್‍ಯಾವಳದ, ಚನ್ನಬಸಪ್ಪ ವಕ್ಕಳದ, ಮಂಜುನಾಥ್ ಚಿಕೇನಕೊಪ್ಪ, ಮಾರೇಶ್ ವಿಭೂತಿ, ರಮೇಶ ಮಾವಿನಮಾಡಗು, ತಿಮ್ಮಣ್ಣ ನಾಯಕ, ಮಲ್ಲಿಕಾರ್ಜುನ ಯತ್ನಟ್ಟಿ, ಭೀಮಣ್ಣ ಕರಡಿ, ಶರಣಪ್ಪ ಮಟ್ಟಿ, ಕನಕಗಿರಿ ಕನಕರೆಡ್ಡಿ, ರಮೇಶ ರೆಡ್ಡಿ, ಮಹಮ್ಮದ್ ಶರೀಫ್, ಚಾಂದಪಾಶಾ ಇತರರಿದ್ದರು.

Share this article