ವಿಧಾನಸಭೆ ಎಲೆಕ್ಷನ್‌ಗೆ ದಿನಕ್ಕೆ 3 ಗಂಟೆ ಮೀಸಲಿಡಿ: ಜಿ.ಎಂ.ಸಿದ್ದೇಶ್ವರ

KannadaprabhaNewsNetwork |  
Published : May 24, 2026, 01:30 AM IST
23ಕೆಡಿವಿಜಿ2, 3-ದಾವಣಗೆರೆಯಲ್ಲಿ ಶನಿವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಡಲದಿಂದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಮಹಾಭಿಯಾನ-2026ರ ಉದ್ಘಾಟಿಸಿದ ಶಿವರಾಜ ಸಜ್ಜನ್, ಜಿ.ಎಂ.ಸಿದ್ದೇಶ್ವರ. ..................23ಕೆಡಿವಿಜಿ4-ದಾವಣಗೆರೆಯಲ್ಲಿ ಶನಿವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಡಲದಿಂದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಮಹಾಭಿಯಾನ-2026ರ ಉದ್ಘಾಟನೆ ವೇಳೆ ಭಾರತ ಮಾತೆ, ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಿವರಾಜ ಸಜ್ಜನ್, ಜಿ.ಎಂ.ಸಿದ್ದೇಶ್ವರ ಇತರರು. | Kannada Prabha

ಸಾರಾಂಶ

ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದೂವರೆ ವರ್ಷವಷ್ಟೇ ಬಾಕಿ ಉಳಿದಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ತಮ್ಮ ವೃತ್ತಿ, ವ್ಯವಹಾರದ ಮಧ್ಯೆ ಕನಿಷ್ಟ 3 ತಾಸನ್ನು ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆಗೆ ಮೀಸಲಿಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದೂವರೆ ವರ್ಷವಷ್ಟೇ ಬಾಕಿ ಉಳಿದಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ತಮ್ಮ ವೃತ್ತಿ, ವ್ಯವಹಾರದ ಮಧ್ಯೆ ಕನಿಷ್ಟ 3 ತಾಸನ್ನು ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆಗೆ ಮೀಸಲಿಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಕರೆ ನೀಡಿದರು.

ಇಲ್ಲಿನ ವಿನೋಬ ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಡಲದಿಂದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಮಹಾಭಿಯಾನ-2026ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಿಂದೂ ಧರ್ಮ-ಸಂಸ್ಕೃತಿ, ಭಾರತ ದೇಶ ಉಳಿಯಬೇಕೆಂದು, ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಬಿಜೆಪಿ ಶ್ರಮಿಸುತ್ತಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಈಗಿನಿಂದಲೇ ವಿಧಾನಸಭೆ ಚುನಾವಣೆಗೆ ಕಾರ್ಯೋನ್ಮುಖರಾಗಬೇಕು ಎಂದರು.

ಶ್ಯಾಮಪ್ರಸಾದ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಪಕ್ಷಕ್ಕಾಗಿ ಸಾಕಷ್ಟು ದುಡಿದಂಯತಹ ನಾಯಕರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಅಮಿತ್ ಶಾ ದೇಶಕ್ಕಾಗಿ, ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಮನೆ, ಮಠ ಬಿಟ್ಟು, ಶ್ರಮಿಸುತ್ತಿದ್ದಾರೆ. ದೇಶ ಉಳಿಯಬೇಕು, ಹಿಂದೂ ಧರ್ಮ ಉಳಿಯಬೇಕೆಂದು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಶಿಕ್ಷಣ ವರ್ಗ ಮಾಡಿದ್ದಕ್ಕೂ ಸಾರ್ಥವಾಗುತ್ತದೆ, ದೀನ ದಯಾಳ್ ಉಪಾಧ್ಯಯಾರ ಆತ್ಮಕ್ಕೂ ಶಾಂತಿ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಪ್ರಶಿಕ್ಷಣ ವರ್ಗ ನಮ್ಮ ಜಿಲ್ಲೆಯಲ್ಲಿ ಮುಂಚೆಯೇ ಆಗಬೇಕಿತ್ತು. ಆದರೆ, ಉಪ ಚುನಾವಣೆ ಕಾರಣಕ್ಕೆ ತಡವಾಗಿದೆ. ಎಲ್ಲಾ ಕಾರ್ಯಕರ್ತರು ಇಲ್ಲಿ ಬಂದಿದ್ದು, ಸಂತೋಷ ತಂದಿದೆ. ಮೊನ್ನೆಯ ಉಪ ಚುನಾವಣೆಯಿಂದ ಎಲ್ಲರೂ ನೊಂದಿದ್ದೀರಿ. ಶ್ರೀನಿವಾಸ ದಾಸಕರಿಯಪ್ಪಗೆ ಶಾಸಕನಾಗಿ ಮಾಡಲು ಸಂಕಲ್ಪ ಮಾಡಿದ್ದಿರಿ. ಅನೇಕ ಕಾರಣಗಳಿಂದಾಗಿ ಸೋಲಾಗಿದೆ. ಹಣ ಬಲದಿಂದ ಇಲ್ಲಿ ಸೋತಿದ್ದೇವೆ. ಮುಂದೆ ದಕ್ಷಿಣದಲ್ಲೂ ಗೆಲ್ಲುವ ಹಂಬಲ ನಮ್ಮ, ನಿಮ್ಮೆಲ್ಲರಲ್ಲೂ ಇದೆ ಎಂದರು.

ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ದಕ್ಷಿಣದಲ್ಲಿ ನಮ್ಮ ನಿರೀಕ್ಷೆ ಗೆಲುವಾಗಿತ್ತು. ಆದರೆ, ಸೋಲಾಯಿತು. ಬಿಜೆಪಿ ಅಧಿಕಾರಕ್ಕೆ ಅಂಟಿಕೊಂಡ ಪಕ್ಷವಲ್ಲ. ಅಧಿಕಾರ ಬೇಕು. ಆದರೆ, ಅದೇ ಮುಖ್ಯವಲ್ಲವೆಂಬುದನ್ನು ನಮ್ಮ ಮುಖಂಡರು, ಕಾರ್ಯಕರ್ತರು, ತಾಯಂದಿರು ತೋರಿಸಿದ್ದಾರೆ ಎಂದರು.

ಮಂಡಲ ಅಧ್ಯಕ್ಷ ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಮಾಜಿ ಶಾಸಕ ಶಿವರಾಜ ಸಜ್ಜನ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ, ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿ.ಜಿ.ಅಜಯಕುಮಾರ, ಎಂ.ಪಿ.ಕೃಷ್ಣಮೂರ್ತಿ ಪವಾರ್‌, ಎಸ್.ಟಿ.ವೀರೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಚೇತನಾ ಶಿವಕುಮಾರ, ಶಿವಕುಮಾರ, ರುದ್ರೇಗೌಡ, ನವೀನಕುಮಾರ, ಶಿವನಗೌಡ ಟಿ.ಪಾಟೀಲ ಇತರರು ಇದ್ದರು.

ನಗರ, ಗ್ರಾಮೀಣ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಸಿಗಬೇಕು

ನರೇಂದ್ರ ಮೋದಿ ನಮಗಷ್ಟೇ ಅಲ್ಲ, ದೇಶಕ್ಕೆ ಪ್ರಧಾನಿಯಾಗಿದ್ದಾರೆ. ಅಮೇರಿಕಾಗೆ ಹಿಂದೆಲ್ಲಾ ವಿಶ್ವದ ದೊಡ್ಡಣ್ಣ ಅನ್ನುತ್ತಿದ್ದರು. ಈಗ ಎಲ್ಲಾ ದೇಶಗಳು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಗೌರವಿಸುವುದನ್ನು ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದರೆ 2028ರಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ವಿಶೇಷವಾಗಿ ನಮಗೆ ಜಿಲ್ಲಾ ಕೇಂದ್ರದಲ್ಲಿ ಲೀಡ್ ಬಂದಿದೆ. ಶ್ರೀನಿವಾಸ ದಾಸಕರಿಯಪ್ಪ ಇಲ್ಲಿ ಲೀಡ್ ಬಂದರೂ, ಮುಸ್ಲಿಂ ಏರಿಯಾಗಳಲ್ಲಿ ಐದಾರು ಸಾವಿರ ಎದುರಾಳಿಗೆ ಲೀಡ್ ಸಿಕ್ಕಿತು. ಮುಂದಿನ ದಿನಗಳಲ್ಲಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲೂ ಬಿಜೆಪಿಗೆ ಲೀಡ್‌ ಸಿಗುವಂತೆ ನಾವು, ನೀವೆಲ್ಲರೂ ಶ್ರಮಿಸೋಣ ಎಂದು ಜಿ.ಎಂ.ಸಿದ್ದೇಶ್ವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರುಮೌಲ್ಯಮಾಪನ: ಪಿಯುಸಿಯಲ್ಲಿ ಅನನ್ಯಗೆ ಹೆಚ್ಚುವರಿ 6 ಅಂಕ
ತುಂಗಾ ಮಹಾವಿದ್ಯಾಲಯದಲ್ಲೇ ಡಾ.ಯು.ಆರ್.ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಿ: ಕಲ್ಲೂರು ಮೇಘರಾಜ