ಓಟಿಎಸ್ ಮೂಲಕ ಸಾಲ ಮರುಪಾವತಿಗೆ ಅವಕಾಶ ನೀಡಿ

KannadaprabhaNewsNetwork | Published : May 22, 2025 11:55 PM
ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದ ಶಾಂತೇಗೌಡರು ಮೃತರಾಗಿದ್ದು, ನಂತರ ಅವರ ಮಗ ಜಿ.ಎಸ್. ಶಿವಕುಮಾರ್‌ಗೆ ಓಟಿ.ಎಸ್. ಮುಖಾಂತರ ಮರುಪಾವತಿ ಮಾಡಲು ಅವಕಾಶ ಮಾಡಿಕೊಟ್ಟು ಹಾಗೂ ಜಮೀನನ್ನು ಹರಾಜು ಹಾಕದೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ನಗರದ ಕೆ.ಆರ್. ಪುರಂನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
Follow Us

ಕನ್ನಡಪ್ರಭ ವಾರ್ತೆ, ಹಾಸನ

ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದ ಶಾಂತೇಗೌಡರು ಮೃತರಾಗಿದ್ದು, ನಂತರ ಅವರ ಮಗ ಜಿ.ಎಸ್. ಶಿವಕುಮಾರ್‌ಗೆ ಓಟಿ.ಎಸ್. ಮುಖಾಂತರ ಮರುಪಾವತಿ ಮಾಡಲು ಅವಕಾಶ ಮಾಡಿಕೊಟ್ಟು ಹಾಗೂ ಜಮೀನನ್ನು ಹರಾಜು ಹಾಕದೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ನಗರದ ಕೆ.ಆರ್. ಪುರಂನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ರೈತರ ಸಂಘದ ಜಿಲ್ಲಾಧ್ಯಕ್ಷ ಮೂರ್ತಿ ಕಣಾಗಲ್ ಮಾತನಾಡಿ, ದಿ. ಶಾಂತೇಗೌಡ ರವರು ಮಾಡಿದ್ದ ಸಾಲವನ್ನು ಅವರು ತೀರಿಹೋದ ನಂತರ ಅವರ ಮಗ ಜಿ.ಎಸ್.ಶಿವಕುಮಾರ ಕಟ್ಟಲು ಬದ್ದರಾಗಿದ್ದು, ಓ.ಟಿ.ಎಸ್. ಮಾಡಿಕೊಡಿ ಎಂದು ೨೦೨೫ ಜನವರಿ ತಿಂಗಳಲ್ಲಿ ಅಡಗೂರು ಶಾಖೆಗೆ ಹೋಗಿ ಕೇಳಿದಾಗ ಅವರು ೧೩ ಲಕ್ಷ ಹಣವನ್ನು ಕಟ್ಟಿ ಎಂದು ಹೇಳಿರುತ್ತಾರೆ. ಆಗ ಶಿವಕುಮಾರ್ ೭ ಲಕ್ಷ ಕಟ್ಟುವುದಾಗಿ ಹೇಳಿರುತ್ತಾರೆ. ನಂತರ ಅವರು ಹಾಸನದ ಮುಖ್ಯ ಕಚೇರಿಗೆ ಹೋಗಿ ಎಂದು ಹೇಳಿದರು. ಆಗ ಶಿವಕುಮಾರ್ ಮುಖ್ಯ ಕಚೇರಿಗೆ ಹೋದಾಗ ವ್ಯವಸ್ಥಾಪಕರು ಕಚೇರಿಯಲ್ಲಿ ಇಲ್ಲ ಎಂದು ಹೇಳಿದರು. ಆಗ ಶಿವಕುಮಾರ್ ಪುನಃ ಹೋದಾಗ ಲೋನ್ ಸೆಕ್ಷನ್ ನವರು ೨೦ ಲಕ್ಷ ರು ಕಟ್ಟಿ ಎಂದಿದ್ದಾರೆ. ಆಗ ಶಿವಕುಮಾರ್ ಪ್ರಾದೇಶಿಕ ವ್ಯವಸ್ಥಾಪಕರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಸಿಗದ ಕಾರಣ ಮತ್ತೆ ಹೋದಾಗ ಪ್ರಾದೇಶಿಕ ವ್ಯವಸ್ಥಾಪಕರು ಸಿಗಲಿಲ್ಲ. ಆದ ಕಾರಣ ಶಿವಕುಮಾರ್ ಓ.ಟಿ.ಎಸ್. ಮುಖಾಂತರ ಬಗೆಹರಿಸಲು ಬದ್ದನಿದ್ದರೂ ಸಹ ಹಣ ಕಟ್ಟಿಸಿಕೊಳ್ಳದೆ ಅವರ ತಂದೆಯವರ ಹೆಸರಿನಲ್ಲಿರುವ ಜಮೀನನ್ನು ಹರಾಜು ಹಾಕಲು ಬ್ಯಾಂಕಿನವರು ಹೊರಟಿದ್ದಾರೆ. ಆದ್ದರಿಂದ ತಾವುಗಳು ಜಮೀನನ್ನು ಹರಾಜು ಹಾಕದ ಹಾಗೆ ತಡೆಹಿಡಿದು ಇವರ ಕುಟುಂಬ ಬೀದಿಪಾಲು ಆಗದ ಹಾಗೆ ಮಾಡಿ ಸದರಿ ಶಿವಕುಮಾರ್‌ರವರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು. ೨೦೨೫ ಮೇ ೫ ರಂದು ಸಂಘದ ವತಿಯಿಂದ ಬ್ಯಾಂಕಿನ ಮುಂಭಾಗ ಧರಣಿ ಮಾಡಿದ ಸಂದರ್ಭದಲ್ಲಿ ಸಹ ಓ.ಟಿ.ಎಸ್. ಮುಖಾಂತರ ಬಗೆಹರಿಸಿಕೊಡುವುದಾಗಿ ಹೇಳಿದ್ದರು. ಅವರೂ ಸಹ ಇದುವರೆಗೆ ಯಾವುದೇ ಓ.ಟಿ.ಎಸ್. ಕೊಡದೆ ಜಮೀನನ್ನು ಇದೆ ತಿಂಗಳು ೨೮ ರಂದು ಹರಾಜು ಹಾಕಲು ಹೊರಟಿದ್ದಾರೆ. ಪುನಃ ಶಿವಕುಮಾರ್ ೨೦೨೫ರ ಅ ೫ರಂದು ಪ್ರಾದೇಶಿಕ ಕಚೇರಿಗೆ ಹೋಗಿ ಈ ಬಗ್ಗೆ ಕೇಳಿದಾಗ ಅವರು ₹೬೦ ಲಕ್ಷ ಕಟ್ಟಿ ಎಂದು ನೋಟಿಸ್‌ ನೀಡಿದ್ದಾರೆ. ಆದ್ದರಿಂದ ಲೇಟ್ ಶಾಂತೇಗೌಡ ಬಿನ್ ಲೇಟ್ ಮಲ್ಲೇಗೌಡ ಇವರ ಜಮೀನು ಹರಾಜು ಹಾಕದಾಗೆ ತಡೆಹಿಡಿದು ಶಿವಕುಮಾರ್ ರವರಿಗೆ ಓಟಿ.ಎಸ್ ಮುಖಾಂತರ ಸಾಲ ತೀರಿಸಲು ಅನುಕೂಲ ಮಾಡಿಕೊಡಬೇಕು ಎಂದರು.ರೈತ ಸಂಘದ ಬಿಟ್ಟಗೌಡನಹಳ್ಳಿ ಮಂಜು, ಆಲದಹಳ್ಳಿ ಶಶಿಧರ್, ರಾಜಣ್ಣ, ಶಿವಕುಮಾರ್, ಶೋಮಶೇಖರ್, ಪಾಲಾಕ್ಷ, ಶಂಕ ಮಂಜಣ್ಣ, ಮನು ಇತರರು ಉಪಸ್ಥಿತರಿದ್ದರು.