ನೆಟ್ಕಲ್ ಗ್ರಾಮದಲ್ಲಿ ಕಂಚಿನ ಮಾರಮ್ಮ ದೇವಿಗೆ ಪೂಜಾ ಕೈಂಕರ್ಯಕ್ಕೆ ಅವಕಾಶ

KannadaprabhaNewsNetwork |  
Published : Feb 20, 2025, 12:45 AM IST
19ಕೆಎಂಎನ್ ಡಿ18 | Kannada Prabha

ಸಾರಾಂಶ

ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ದೇವರ ಮೆರವಣಿಗೆ ವಿಚಾರವಾಗಿ ಸಮುದಾಯದ ಮುಖಂಡರ ವೈಮನಸ್ಸಿನಿಂದ ಕಳೆದ 12 ವರ್ಷಗಳಿಂದ ಕಂಚಿನ ಮಾರಮ್ಮ ದೇವಸ್ಥಾನಕ್ಕೆ ಹಾಕಲಾಗಿದ್ದ ಬೀಗವನ್ನು ಎಸ್.ವಿ.ಲೊಕೇಶ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ತೆರವುಗೊಳಿಸುವ ಮೂಲಕ ಪೂಜಾ ಕೈಂಕರ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ದೇವರ ಮೆರವಣಿಗೆ ವಿಚಾರವಾಗಿ ಸಮುದಾಯದ ಮುಖಂಡರ ವೈಮನಸ್ಸಿನಿಂದ ಕಳೆದ 12 ವರ್ಷಗಳಿಂದ ಕಂಚಿನ ಮಾರಮ್ಮ ದೇವಸ್ಥಾನಕ್ಕೆ ಹಾಕಲಾಗಿದ್ದ ಬೀಗವನ್ನು ಎಸ್.ವಿ.ಲೊಕೇಶ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ತೆರವುಗೊಳಿಸುವ ಮೂಲಕ ಪೂಜಾ ಕೈಂಕರ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.

ತಹಸೀಲ್ದಾರ್ ಎಸ್.ವಿ.ಲೊಕೇಶ್, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನೆಟ್ಕಲ್ ಗ್ರಾಮಕ್ಕೆ ಭೇಟಿಕೊಟ್ಟು ಗ್ರಾಮದಲ್ಲಿ ವಾಸವಿರುವ ಎಲ್ಲಾ ಕೋಮಿನ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಹೊಡೆದ ಮನಸ್ಸುಗಳನ್ನು ಒಂದುಗೂಡಿಸುವ ಉದ್ದೇಶದಿಂದ ಆಚರಿಸುವ ಹಬ್ಬಕ್ಕೆ ಪ್ರತಿಯೊಬ್ಬರು ಭಾಗಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ನಡೆದ ಘಟನೆಗಳನ್ನು ಮರೆತು ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ದೇವಸ್ಥಾನ ಪೂಜೆ ಪುರಸ್ಕಾರಗಳು ಎಂದಿನಂತೆ ನಡೆಯಬೇಕೆಂದು ತಿಳಿಸಿದರು.

ಗ್ರಾಮದಲ್ಲಿ ಜಾತಿ, ಭೇದವನ್ನು ಮರೆತು ಎಲ್ಲಾ ಸಮುದಾಯದವರು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಲು ಪ್ರತಿಯೊಬ್ಬರು ಮುಂದಾಗಬೇಕು. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸಂಪೂರ್ಣವಾಗಿ ಅದ್ಧೂರಿ ಹಬ್ಬ ಆಚರಣೆಗೆ ಸಹಕಾರ ನೀಡಲಾಗುವುದು ಎಂದರು.

ಇಂದಿನಿಂದ ಶ್ರೀ ಹಿರಿಯಮ್ಮ, ಶ್ರೀ ಏಳೂರಮ್ಮ ದೇವಿ ಉತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದಲ್ಲಿ ಶ್ರೀಹಿರಿಯಮ್ಮ ಹಾಗೂ ಶ್ರೀಏಳೂರಮ್ಮ ದೇವಿ ಹಬ್ಬ ಗುರುವಾರ (ಫೆ.೨೦)ದಿಂದ ಆರಂಭಗೊಳ್ಳಲಿದೆ. ಫೆ.೨೦ರಂದು ಸಂಜೆ ೪ ಗಂಟೆಗೆ ಬಂಡಿ ಉತ್ಸವ ನಡೆಯಲಿದೆ. ಫೆ.೨೧ರಂದು ಮುಂಜಾನೆ ೩ ಗಂಟೆಗೆ ಶ್ರೀಹಿರಿಯಮ್ಮ ದೇವಿ ಕೊಂಡೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ ೯ ಗಂಟೆಗೆ ಮನ ತುಂಬಿದ ಹೆಣ್ಣು ಮನೆ ತುಂಬಲಿಲ್ಲ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಫೆ.೨೨ರಂದು ಬೆಳಗಿನ ಜಾವ ೪ ಗಂಟೆಗೆ ಗ್ರಾಮದಿಂದ ಶ್ರೀ ಏಳೂರಮ್ಮ ದೇವಿಯ ಪೂಜಾ ಉತ್ಸವದೊಡನೆ ಹೊರಟು ೬ ಗಂಟೆಗೆ ಕೊಂಡೋತ್ಸವ ನೆರವೇರಲಿದೆ. ಈ ಕಾರ್ಯಕ್ರಮಗಳಿಗೆ ಏಳು ಗ್ರಾಮದ ಗ್ರಾಮಸ್ಥರಲ್ಲದೆ ಅಕ್ಕಪಕ್ಕದ ಊರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್‌ರೀ ಏಳೂರಮ್ಮ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!