ಕನ್ನಡಪ್ರಭ ವಾರ್ತೆ ಮೈಸೂರು
ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆಯೊಂದಿಗೆ ಪ್ರವಾಸೋದ್ಯಮದಲ್ಲೂ ಛಾಪು ಮೂಡಿಸುವುದರ ಜೊತೆಗೆ, ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಮೈಸೂರವನ್ನು ಮತ್ತಷ್ಟು ಸುಸಜ್ಜಿತ ನಗರವನ್ನಾಗಿ ರೂಪಿಸಿ, ಮೈಸೂರನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಗೊಳಿಸುವ ಚಿಂತನೆಯೊಂದಿಗೆ ಜಿಎಸ್‌ಎಸ್ ಸಿಎಸ್ಆರ್ ತಂಡದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನ ಸರ್ವತೋಮುಖ ಹಾಗೂ ಯೋಜನಾಬದ್ಧ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಅಭಿಯಾನದಲ್ಲಿ ಆರು ಪ್ರಮುಖ ವಿಷಯಗಳ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಂತೆ ಗ್ರೀನ್ ಮೈಸೂರು, ಸೇಫ್ ಮೈಸೂರು, ಸ್ಕಿಲ್ ಮೈಸೂರು, ಎಜುಕೇಷನಲ್ ಮೈಸೂರು, ಕಲ್ಚರಲ್ ಮೈಸೂರು, ಹೆಲ್ತಿ ಮೈಸೂರು ಪರಿಕಲ್ಪನೆಗಳ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ನಗರದ ಎಲ್ಲಾ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು, ಸ್ವಯಂ ಸೇವಕರಾಗಿ ಪಾಲ್ಗೊಳ್ಳಲಿಚ್ಛಿಸುವವರು ಮೊ. 96068 34673 ಸಂಪರ್ಕಿಸಬಹುದು ಎಂದರು.ಹಿರಿಯ ಪತ್ರಕರ್ತ ಸಿ.ಕೆ. ಮಹೇಂದ್ರ, ನಿವೃತ್ತ ಅಧಿಕಾರಿ ಶಶಿಕುಮಾರ್, ಜಿಎಸ್ಎಸ್ ಸಂಸ್ಥೆಯ ಸರಳ ಇದ್ದರು.