
- ಶಾಸಕ ತಮ್ಮಯ್ಯ । ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರ ಅಭಿನಂದನಾ ಸಮಾರಂಭ
ಕ್ರೀಡೆಯಲ್ಲಿ ಗೆಲುವು ಎನ್ನುವುದು ಒಂದೇ ದಿನದಲ್ಲಿ ಸಿಗುವ ಸಾಧನೆಯಲ್ಲ. ಅದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಿಸ್ತು, ತ್ಯಾಗ ಮತ್ತು ದೃಢಸಂಕಲ್ಪವಿರುತ್ತದೆ. ಇಂತಹ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಕ್ರೀಡಾಪಟುಗಳು ಸಾಧನೆ ಶಿಖರವೇರಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಲೈಫ್ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಆಯೋಜಿಸಿದ್ದ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರಗಳು ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುವುದು ಸಹಜ. ಆದರೆ ಜಿಲ್ಲೆಯ ಯಶಸ್ವಿ ಉದ್ಯಮಿ, ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗಡೆ ಅವರು ಸಂಸ್ಥೆಯಿಂದ ಒಂದು ಕೋಟಿಗೂ ಅಧಿಕ ವೆಚ್ಚ ಮಾಡಿ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಮಾರ್ಗದರ್ಶಕ ಓಟಗಾರರನ್ನು ಗೌರವಿಸುತ್ತಿರುವುದು ಶ್ಲಾಘ ನೀಯ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಾಧನೆಗೆ ಪ್ರೋತ್ಸಾಹಿಸುತ್ತಿರುವುದು ಸಮಾಜಕ್ಕೆ ಮಾದರಿ ಎಂದರು.ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿದ ರಕ್ಷಿತಾ ರಾಜು, ರವಿ ರಂಗೋಲಿ, ರಾಧಾ ವೆಂಕಟೇಶ್ ಹಾಗೂ ರವಣಿ ವಲಸನೈನಿ ಅವರ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಪದಕ ಗೆಲ್ಲುವುದಷ್ಟೇ ಕ್ರೀಡೆ ಉದ್ದೇಶವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದೇ ಮೊದಲ ಸಾಧನೆ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸದೃಢತೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು.ಯುವಜನರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯ ಮೀಸಲಿಡದೆ ಪ್ರತಿದಿನ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಸಮಯ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಉತ್ತಮ ವಿಚಾರಗಳನ್ನು ಮಾತ್ರ ಸ್ವೀಕರಿಸಿ, ಭವಿಷ್ಯಕ್ಕೆ ಮಾರಕವಾಗುವ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರಿನ ಶತಮಾನೋತ್ಸವ ಅಥ್ಲೆಟಿಕ್ಸ್ ಕ್ರೀಡಾಂಗಣ ನಾಲ್ಕು ತಿಂಗಳೊಳಗೆ ಕ್ರೀಡಾಪಟುಗಳ ಬಳಕೆಗೆ ಲೋಕಾ ರ್ಪಣೆಗೊಳ್ಳಲಿದೆ. ಇಂದಾವರದ ಪ್ರಾಧಿಕಾರದ ಬಡಾವಣೆಯಲ್ಲಿ ಸುಮಾರು ಎಂಟು ಎಕರೆ ಜಾಗವನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ.ಅದನ್ನೂ ಶೀಘ್ರ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ರಕ್ಷಿತಾ ರಾಜು ಗೆಲುವು ಸಾಧಕನನ್ನು ಎತ್ತರಕ್ಕೆ ಕೊಂಡೊಯ್ದರೆ, ಸೋಲು ಬದುಕಿನ ಅಮೂಲ್ಯ ಪಾಠಗಳನ್ನು ಕಲಿಸುತ್ತದೆ. 2026ರ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರೂ ಉಡುಪಿನ ನಿಯಮಕ್ಕೆ ಸಂಬಂಧಿಸಿದ ವಿವಾದದಿಂದ ಪದಕ ಕೈತಪ್ಪಿತು. 3 ವರ್ಷಗಳ ಪರಿಶ್ರಮದ ಫಲ ಕಣ್ಣೆದುರೇ ಕೈತಪ್ಪಿದಾಗ ನೋವುಂಟಾಯಿತು. ಆ ಸಂದರ್ಭದಲ್ಲಿ ಕಿಶೋರ್ ಕುಮಾರ್ ಹೆಗಡೆ ಧೈರ್ಯ ತುಂಬಿ ಮುಂದಿನ ಗುರಿ ಚಿನ್ನದ ಪದಕವಾಗಿರಲಿ ಎಂದು ಪ್ರೋತ್ಸಾಹಿಸಿದರು. ಅವರ ಬೆಂಬಲದಿಂದ ಮತ್ತೆ ಆತ್ಮವಿಶ್ವಾಸ ದೊರೆತಿದೆ. ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವವರೆಗೂ ಕ್ರೀಡೆಯನ್ನು ಬಿಡುವುದಿಲ್ಲ ಎಂದರು.ಮುಖ್ಯ ತರಬೇತುದಾರ ರಾಹುಲ್ ಬಾಲಕೃಷ್ಣ ಮಾತನಾಡಿ, ಲೈಫ್ಲೈನ್ ಫೀಡ್ಸ್ ನೆರವಿನಿಂದ ಏಳು ಪದಕಗಳು ದೇಶಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.ಕಾರ್ಯಕ್ರಮದಲ್ಲಿ ರಕ್ಷಿತಾ ರಾಜು, ರವಿ ರಂಗೋಲಿ, ರಾಧಾ ವೆಂಕಟೇಶ್ ಹಾಗೂ ರವಣಿ ವಲಸನೈನಿ ಅವರನ್ನು ಸನ್ಮಾನಿ ಸಲಾಯಿತು. ಕ್ರೀಡಾಪಟುಗಳಿಗೆ ನಗದು ಬಹುಮಾನ ಹಾಗೂ ಪ್ರೋತ್ಸಾಹಧನ ವಿತರಿಸಲಾಯಿತು. ತರಬೇತುದಾರರು ಮತ್ತು ಗೈಡ್ ರನ್ನರ್ಗಳನ್ನು ಗೌರವಿಸಲಾಯಿತು.ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಐಟಿ ನಿರ್ದೇಶಕ ಡಾ.ಸಿ.ಕೆ. ಸುಬ್ಬರಾಯ್, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಉಪಾಧ್ಯಕ್ಷ ಮಲ್ಲೇಶ್, ಕಾಫಿ ಬೆಳೆ ಗಾರರ ಸಂಘದ ಅಧ್ಯಕ್ಷ ರತೀಶ್, ಸಮರ್ಥ್ ಸೂರ್ಯ, ಸಂಸ್ಥೆಯ ನಿರ್ದೇಶಕರಾದ ನಂದನ್ ಹೆಗಡೆ, ಅರ್ಜುನ್ ಹೆಗಡೆ, ಸುಲೇಖಾ ಕೆ. ಹೆಗಡೆ, ರಾಧಾ ಸುಂದರೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು....ಬಾಕ್ಸ್...ಸಾಧನೆಗೆ ಹೋಲಿಸಿದರೆ ನೀಡುವ ಬಹುಮಾನ ಸಣ್ಣದು