ಕನ್ನಡಪ್ರಭ ವಾರ್ತೆ ನಾಗಮಂಗಲ
ಈ ವೇಳೆ ಮಾತನಾಡಿದ ಶ್ರೀಗಳು, ದೇಶಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಂದ ಮನುಷ್ಯನ ದೈಹಿಕ ಸಾಮರ್ಥ್ಯ ಸದೃಢಗೊಳಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನೂ ಸಹ ಉತ್ತಮವಾಗಿಟ್ಟುಕೊಳ್ಳಬಹುದು ಎಂದರು.
ಆಧುನಿಕ ಆಟೋಟಗಳ ಜೊತೆಗೆ ನಮ್ಮ ಮೂಲ ಜನಪದದ ಆಟಗಳನ್ನು ಪ್ರೋತ್ಸಾಹಿಸಿ ಆಡಿಸಬೇಕೆಂಬ ಉದ್ದೇಶದಿಂದ ಈ ಬಾರಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಲಗೋರಿ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶಿಯ ಆಟಗಳಾದ ಕುಂಟೆಬಿಲ್ಲೆ, ಗೋಲಿ ಮತ್ತು ಚಿನ್ನಿದಾಂಡು ಆಟಗಳಿಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಗ್ರೀಕ್ ದೇಶದ ಒಬ್ಬ ಸಾಧಕ ತನ್ನ ಗೆಲುವನ್ನು ಒಂದು ಥೀಮ್ ಗೆಲುವಾಗಿ ಸಂಭ್ರಮಿಸಲು ಆಯ್ಕೆ ಮಾಡಿಕೊಂಡಂತಹ ಸಂದರ್ಭ 60 ಕಿ.ಮೀ ದೂರದ ಓಟದ ಪ್ರಾರಂಭ ಅನ್ವರ್ಥವಾಗಿ ಮ್ಯಾರಥಾನ್ ಎಂದು ಪ್ರಸಿದ್ಧಿಯಾಗಿ ಅಂತಾರಾಷ್ಟ್ರೀಯ ಓಟವಾಗಿ ಪರಿವರ್ತನೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಬ್ರಹ್ಮಚಾರಿ ಸಾಯಿಕೀರ್ತಿ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು, ಲಗೋರಿ ಸಂಸ್ಥಾಪಕ ದೊಡ್ಡಣ್ಣ ಬರೆಮೇಲು, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ಚಿಂಚೋಳಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್. ಪರಮಶಿವಯ್ಯ ಸೇರಿದಂತೆ ಕ್ರೀಡಾಪಟುಗಳು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.20 ರಂದು ಬೆಳಗ್ಗೆ 10ಕ್ಕೆ ಕೃಷಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಸರ್ವಾಲಂಕೃತ ಶ್ರೀ ಮಲ್ಲಿಕಾರ್ಜುನಸ್ವಾಮಿ ಉತ್ಸವ ನಡೆಯಲಿದೆ.