ಇಂದು ಶಿವಮೊಗ್ಗಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ: ಜಿಲ್ಲಾಧ್ಯಕ್ಷ

KannadaprabhaNewsNetwork |  
Published : Mar 20, 2024, 01:19 AM IST
ಪೊಟೋ: 19ಎಸ್‌ಎಂಜಿಕೆಪಿ03ಶಿವಮೊಗ್ಗ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ ರ್‍ಯಾಲಿ ಮೂಲಕ ಆಗಮಿಸಿ, ಜಿಲ್ಲಾಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ನಡೆಯುವ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಇತರರು ಪಾಲ್ಗೊಳ್ಳುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ ರ್‍ಯಾಲಿ ಮೂಲಕ ಆಗಮಿಸಿ, ಜಿಲ್ಲಾಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರ್‍ಯಾಲಿಯು ಬುಧವಾರ ಬೆಳಗ್ಗೆ 10ಕ್ಕೆ ಭದ್ರಾವತಿಯಲ್ಲಿ ಆರಂಭವಾಗಿ 11ಕ್ಕೆ ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್ ಬಳಿ ಆಗಮಿಸಿ ಅಲ್ಲಿಂದ ಬೃಹತ್ ಮೆರವಣಿಗೆಯ ಮೂಲಕ ಲಗನಾ ಕಲ್ಯಾಣ ಮಂದಿರಕ್ಕೆ ಆಗಮಿಸಲಿದೆ. ಈ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಎಲ್ಲರೂ ಉಪಸ್ಥಿತರಿರುವರು ಎಂದು ಹೇಳಿದರು.

ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ. ಲಕ್ಷ ಜನ ಐದು ಜಿಲ್ಲೆಗಳಿಂದಲೂ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಸೇರಿಲ್ಲ. ಹಣ ಕೊಟ್ಟು ಕರೆತಂದ ಜನ ಇದ್ದರಷ್ಟೇ. ಮೋದಿ ಮತ್ತು ಎಸ್ ಬಿಐಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ವಿಚಾರದಲ್ಲಿ ಕಪಾಳಮೋಕ್ಷ ಮಾಡಿದೆ. ಇಡಿ,ಐಟಿ ರೈಡ್ ಮಾಡಿಸಿ ಹೆದರಿಸಿ ಹಣ ವಸೂಲಿ ಮಾಡಲಾಗಿದೆ. ಮೋದಿಗೆ ಕಾಂಗ್ರೆಸ್ ವಿರುದ್ಧ ಮಾತಾಡುವ ನೈತಿಕತೆ ಇಲ್ಲ ಎಂದು ತೀರುಗೇಟು ನೀಡಿದರು.

ಗೀತಾ ಶಿವರಾಜ್ ಕುಮಾರ್‌ರವರು ಗೆಲ್ಲೋದು ಗ್ಯಾರಂಟಿ. ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದ ಈಶ್ವರಪ್ಪ ಈಗ ಮಗನಿಗೆ ಟಿಕೇಟ್ ಕೇಳ್ತಿರೋದು ದುರಂತ. ಸುಳ್ಳು ಹೇಳ್ತಿರೋದು ಕಾಂಗ್ರೆಸ್ ಅಲ್ಲ ಮೋದಿ ಮತ್ತು ಬಿಜೆಪಿ. ಆರ್ಥಿಕ ಸದೃಢತೆಗೆ ಮತ್ತೆ ಐದು ಗ್ಯಾರಂಟಿಗಳ ಘೋಷಣೆ ರಾಹುಲ್ ಗಾಂಧಿ ಮತ್ತು ಖರ್ಗೆ ಅವರಿಂದ. ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ರಕ್ಷಣೆ ಕೊಡುವ ಕೆಲಸ ಕಾಂಗ್ರೆಸ್ ಮಾಡಲಿದೆ. ಪಂಚ ಗ್ಯಾರಂಟಿಗಳು ಫಲಾನುಭವಿಗಳಿಗೆ ಅನುಕೂಲವಾಗಿದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದರು.

ಈಶ್ವರಪ್ಪ ಬಂಡಾಯ ಬಹಳ ದೊಡ್ಡ ಲಾಭ ತರಲಿದೆ. ಬಿಜೆಪಿ ಈಗ ಏನೆಂದು ಅವರಿಗೆ ಅರ್ಥವಾಗಿದೆ. ರೇಣುಕಾಚಾರ್ಯ, ಸಿ.ಟಿ. ರವಿ, ಈಶ್ವರಪ್ಪರವರ ಕಥೆ ಏನಾಯ್ತೆಂದು ಎಲ್ಲರಿಗೂ ಗೊತ್ತಾಗಿದೆ. ಹತ್ತು ವರ್ಷಗಳಲ್ಲಿ ಸಾಲ ಮಾಡಿದ್ದೇ ಮೋದಿ ಗ್ಯಾರಂಟಿ. ಭಾರತ ಮಾತಾ ಕೀ ಜೈ ಅನ್ನೋರು ಕುಸ್ತಿಪಟುವಿನ ನೋವು ಅರ್ಥ ಮಾಡಿಕೊಂಡಿಲ್ಲ. ಮಣಿಪುರದ ಬಗ್ಗೆ ಮಾತಾಡಲ್ಲ. ಮೋದಿ ಅಲೆ ಇಲ್ಲವೇ ಇಲ್ಲ. ಬಿಜೆಪಿಯಲ್ಲಿ ಈಶ್ವರಪ್ಪರವರೇ ನೇರವಾಗಿ ಸೆಡ್ಡುಹೊಡೆಯುವಂಥ ಪರಿಸ್ಥಿತಿ ಇದೆ. ನಾವೆಲ್ಲ ಕಾಂಗ್ರೆಸ್ಸಿಗರು ಒಗ್ಗಟ್ಟಿದ್ದೇವೆ. ಬಂಗಾರಪ್ಪರವರ ಕೊಡುಗೆ ಬಹಳ ದೊಡ್ಡದಿದೆ. ಗೀತಾ ಶಿವರಾಜ್ ಕುಮಾರ್ ಕೊಡುಗೆ, ಸೇವೆಯೂ ದೊಡ್ಡದಿದೆ. ಗೀತಾ ಶಿವಕುಮಾರ್‌ ಗೆಲುವು ನಿಶ್ಚಿತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎಚ್.ಸಿ.ಯೋಗೇಶ್, ಚಂದ್ರಭೂಪಾಲ್, ಕಲೀಂ ಪಾಷ, ಶಿ.ಜು.ಪಾಶ, ಹೆಚ್ ಎಂ ಮಧು, ರಮೇಶ್ ಶಂಕರ ಘಟ್ಟ, ಪ್ರವೀಣ್, ಜಿ.ಪದ್ಮನಾಭ್, ಸೇರಿದಂತೆ ಹಲವರಿದ್ದರು.

- - - -19ಎಸ್‌ಎಂಜಿಕೆಪಿ03:

ಶಿವಮೊಗ್ಗ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ