ಧರ್ಮ ಸಂಸ್ಕಾರದೊಡನೆ ರಾಷ್ಟ್ರ ಕಟ್ಟುವ ಸಂಸ್ಕಾರವೂ ನಮ್ಮದಾಗಬೇಕು: ಹೊನ್ನಾಳಿ ಶ್ರೀಗಳು

KannadaprabhaNewsNetwork |  
Published : May 09, 2024, 01:01 AM IST
ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ಚೆನ್ನೇಶ್ವರ ಮಠದಲ್ಲಿ ಜರುಗಿದ ಧಾರ್ಮಿಕ ತರಬೇತಿ ಪೂರ್ಣಗೊಳಿಸಿದ ಜಂಗಮ ವಟುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್2ಎರಾಣಿಬೆನ್ನೂರು ನಗರದ ಚೆನ್ನೇಶ್ವರ ಮಠದಲ್ಲಿ ಧಾರ್ಮಿಕ ತರಬೇತಿ ಪಡೆದ ಜಂಗಮ ವಟುಗಳು ಯೋಗ ಪ್ರದರ್ಶನ ಮಾಡಿದರು.  | Kannada Prabha

ಸಾರಾಂಶ

ಧರ್ಮ ಸಂಸ್ಕಾರದೊಡನೆ ರಾಷ್ಟ್ರ ಕಟ್ಟುವ ಸಂಸ್ಕಾರವೂ ನಮ್ಮದಾಗಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಧರ್ಮ ಸಂಸ್ಕಾರದೊಡನೆ ರಾಷ್ಟ್ರ ಕಟ್ಟುವ ಸಂಸ್ಕಾರವೂ ನಮ್ಮದಾಗಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಸ್ಥಳೀಯ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಜರುಗಿದ 18ನೇ ವೇದಾಧ್ಯಯನ ಮತ್ತು ಪೂಜಾ ವಿಧಾನ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭರತ ಭೂಮಿಯ ಆತ್ಮ ಆಧ್ಯಾತ್ಮಿಕತೆಯಾಗಿದ್ದು ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಸುವುದೇ ಈ ಧಾರ್ಮಿಕ ಶಿಬಿರ. ನಮ್ಮಲ್ಲಿ ಪ್ರಾಕೃತಿಕ ಸಂಪನ್ಮೂಲಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಕೊರತೆ ಇಲ್ಲ. ದೈವಸ್ಪರ್ಶ ಭಾವನೆಯಿಂದ ಅವುಗಳನ್ನು ಬಳಸಿಕೊಳ್ಳಬೇಕು ಅಂದಾಗ ಮಾತ್ರ ಅವುಗಳ ಅಂತರ್ಯದ ಪ್ರಭೆಯ ಅರಿವು ನಮಗೆ ಆಗುತ್ತದೆ ಎಂದರು. ಶಿಬಿರದಲ್ಲಿ ತರಬೇತಿ ಪಡೆದ ವಟುಗಳು ಯೋಗ ಪ್ರದರ್ಶನ ಮಾಡಿದರು. ಗುಡ್ಡಪ್ಪ ಹಿಂದಲಮನಿ, ಮೌನೇಶ ತ್ರಾಸದ, ಯುವರಾಜ, ಸೋಮನಾಥ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜೆ. ಎಮ್. ಮಠದ, ವಿ.ವಿ. ಹರಪನಹಳ್ಳಿ, ಆರ್.ಬಿ. ಪಾಟೀಲ್, ಜಗದೀಶ ಮಳಿಮಠ, ಶಾರದಮ್ಮ ದೇವಗಿರಿಮಠ, ನಾಗಲಿಂಗಯ್ಯ ಮಾಗನೂರಮಠ, ರಾಜಣ್ಣ ತಿಳುವಳ್ಳಿ, ವಿಜಯ, ರಾಜು ದೇವಗಿರಿಮಠ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಗೌರಿಶಂಕರಸ್ವಾಮಿ ನೆಗಳೂರುಮಠ, ಎಂ.ಕೆ. ಹಾಲಸಿದ್ದಯ್ಯಾ ಶಾಸ್ತ್ರೀಗಳು, ಗಾಯತ್ರಿ ಕುರುವತ್ತಿ, ಭಾಗ್ಯಶ್ರಿ ಗುಂಡಗಟ್ಟಿ, ತಾಲೂಕು ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!