ಹಕ್ಕುಗಳ ಜೊತೆ ಕರ್ತವ್ಯ ಮರೆಯಬಾರದು: ರವೀಂದ್ರ ಕೇಣಿ

KannadaprabhaNewsNetwork |  
Published : Aug 30, 2026, 02:00 AM IST
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ನಡೆಯಿತು. | Kannada Prabha

ಸಾರಾಂಶ

ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಕಲಾ-ಕ್ರೀಡಾ ವಿಭಾಗ, ಎನ್.ಎಸ್.ಎಸ್, ರೆಡ್ ರಿಬ್ಬನ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಕ್ರೀಡಾ ದಿನಾಚರಣೆ ಜರುಗಿತು.

ಎನ್.ಎಸ್.ಎಸ್, ಸ್ಕೌಟ್, ಗೈಡ್ಸ್ ಘಟಕಗಳ ಉದ್ಘಾಟನಾ ಸಮಾರಂಭ, ಕ್ರೀಡಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಕಲಾ-ಕ್ರೀಡಾ ವಿಭಾಗ, ಎನ್.ಎಸ್.ಎಸ್, ರೆಡ್ ರಿಬ್ಬನ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಕ್ರೀಡಾ ದಿನಾಚರಣೆ ಜರುಗಿತು.

ಕೆನರಾ ವೆಲ್‌ಫೇರ್ ಟ್ರಸ್ಟ್‌ನ ಆಡಳಿತಾಧಿಕಾರಿ ರವೀಂದ್ರ ಕೇಣಿ ಉದ್ಘಾಟಿಸಿ, ವಿದ್ಯಾರ್ಥಿಗಳು ಕೇವಲ ಮೋಜು ಮಾಡುವುದಲ್ಲ, ಜವಾಬ್ದಾರಿಯುತರಾಗಿರಬೇಕು. ಜಾತಿ-ಮತ ಭೇದ ಮರೆತು ಬದುಕಲು ಕಲಿಯಬೇಕು. ದೇವರನ್ನು ನಂಬಿ, ಆದರೆ ದೇವರ ಹೆಸರಿನಲ್ಲಿ ನಡೆಯುವ ಅನಾಚಾರದಲ್ಲಿ ಭಾಗಿಯಾಗಬಾರದು. ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಮರೆಯಬಾರದು ಎಂದರು.

ಮುಖ್ಯ ಅತಿಥಿ, ಹಳೆಯ ವಿದ್ಯಾರ್ಥಿ ಹಾಗೂ ಉದ್ಯಮಿ ಮಂಗಲದಾಸ್ ಕಾಮತ್, ದೇಶದ ಆರ್ಥಿಕ ಬದಲಾವಣೆಗಳನ್ನು ಅರಿತರೆ ಮಾತ್ರ ಬದುಕು ಸಾಧ್ಯ. ಕೆಲಸ ಹುಡುಕುವವರಾಗದೆ, ಕೆಲಸ ಕೊಡುವವರಾಗಿ ಎಂದು ಕರೆ ನೀಡಿದರು.

ಶಿವಾಜಿ ಕಾಲೇಜು, ಬಾಡದ ಪ್ರಾಚಾರ್ಯ ತಾರಾನಾಥ ಹರಿಕಂತ್ರ, ಕರ್ನಾಟಕ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಚಾರ್ಯ ಡಾ. ಬಿ.ಆರ್. ತೋಳಿ ಅಧ್ಯಕ್ಷತೆ ವಹಿಸಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮಹತ್ವ ತಿಳಿಸಿದರು.

ಸ್ವಾತಿ ಭಟ್ ಪ್ರಾರ್ಥಿಸಿದರು. ಡಾ. ಹರೀಶ್ ಕಾಮತ್ ಸ್ವಾಗತಿಸಿದರು. ಶುಭಂ ತಳೇಕರ್ ವರದಿ ವಾಚಿಸಿದರು. ಅನಿತಾ ತಿಳ್ವೇಕರ್, ಸುವಿಧಾ ಮಾಳ್ಸೇಕರ್, ಶಿವಾನಿ ನಾಯ್ಕ್ ಅತಿಥಿ ಪರಿಚಯ ಮಾಡಿದರು. ಪೂಜಾ ನಾಯ್ಕ್, ಸ್ನೇಹಲ್ ರೇವಣಕರ್ ವಿಜೇತರ ಪಟ್ಟಿ ವಾಚಿಸಿದರು. ಪ್ರಿಯಾಂಕಾ ನಾಯ್ಕ್ ವಂದಿಸಿದರು.

ಸುರೇಶ್ ಗುಡಿಮನಿ, ರಾಜೇಶ್ ಮರಾಠಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಅನೀಶ್ ದೇವಳಿ, ರುಹೀದ್ ಸೈಯದ್ ಇದ್ದರು. ಲೋಚನಾ ಶಿರವಾಡಕರ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:

ಬಿಕಾಂನಲ್ಲಿ ಅತ್ಯಧಿಕ ಅಂಕ ಪಡೆದ ಸೋನಿಯಾ ಮೇತ್ರಿ (ಶೇ.97.01), 3 ವಿಷಯಗಳಲ್ಲಿ 100/100), ಸಿಯೋನಾ ಫೆರ್ನಾಂಡಿಸ್ (ಶೇ.95.8), 6 ವಿಷಯಗಳಲ್ಲಿ 100/100), ರಿಯಾ ಬಾಂದೇಕರ್ (ಶೇ.94.6), ಚೇತನಾ ಗಾಯತ್ರಿ (ಶೇ.94.6), 4 ವಿಷಯಗಳಲ್ಲಿ 100/100) ಮತ್ತು ನೇಹಾ ಅನ್ವೇಕರ್ (ಶೇ.93.8), 5 ವಿಷಯಗಳಲ್ಲಿ 100/100) ಹಾಗೂ ಬಿಸಿಎ ಟಾಪರ್‌ಗಳಾದ ಸ್ಪರ್ಶಿತಾ ಮ್ಹಾಲ್ಸೇಕರ್ (9.47), ತೃಪ್ತಿ ಪೆಡ್ನೇಕರ್ (9.32), ರತನ್ ತಳೇಕರ್ (9.32) ಮತ್ತು ಸುವೇಧಾ ನಾಯಕ್ (9.23) ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು